ಬೆಂಗಳೂರು: ಗುರುವಾರ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ-ಬೆಸ್ಕಾಂ
ಬೆಂಗಳೂರು, ಸೆಪ್ಟಂಬರ್ 22: ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ವತಿಯಿಂದ ಬೆಂಗಳೂರಿನ ಕೆಲವು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆ ಗುರುವಾರ (ಸೆ.22)ರಂದು ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ.
ಈ ಕುರಿತು ಬೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ನಗರದ ಈ ಕೆಳಗಿನ ಪ್ರದೇಶಗಳಲ್ಲಿ ಗುರುವಾರ ವಿವಿಧ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತವಾಗಲಿದೆ ಎಂದು ತಿಳಿಸಿದೆ. ಅಲ್ಲದೇ ಈ ತಿಂಗಳ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ವತಿಯಿಂದ ದಿನ ಬಿಟ್ಟು ದಿನ ವಿವಿಧೆಡೆ ಕಾಮಗಾರಿ ಕೈಗೊಳ್ಳಲಿದೆ. ಈ ವೇಳೆ ವಿದ್ಯುತ್ ವ್ಯತ್ಯಯ ಆಗಲಿದೆ.

ಬೆಂಗಳರು ನಗರ ವ್ಯಾಪ್ತಿಯ ಗುರುವಾರ ಅಲ್ಲಿಮಾರನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು. ಕಂದಗಲ್ಲು, ಕೋಡಿಹಳ್ಳಿ, ಗೋಣಿವಾಡ, ಶ್ಯಾಗಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಬೆಳವನ್ನೂರು ಮತ್ತು ಜೆಎಚ್ ಪಿ ಉಪಕೇಂದ್ರ ವ್ಯಾಪ್ತಿಯ ಐಪಿ ಫಿಡರ್ಸ, ಮಡ್ಡಿಹಳ್ಳಿ, ಹಲಗಲಡ್ಡಿ, ಪಿ.ಡಿ ಕೋಟೆ, ಖಂಡೇನಹಳ್ಳಿ, ಕೋಟೆ, ಖಂಡೇನಹಳ್ಳಿ, ಹೊಸಕೆರೆಹಳ್ಳಿ, ಹೊಸಕೆರೆ, ಪಾಳ್ಯಮಡ್ಡಿಹಳ್ಳಿ ಮತ್ತು ಹಲಗಲದೊಡ್ಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.












Click it and Unblock the Notifications