Power Cut: ಬೆಂಗಳೂರು ಸೇರಿ ವಿವಿಧೆಡೆ ಅ.30ರವರೆಗೆ ವಿದ್ಯುತ್ ವ್ಯತ್ಯಯ, ಪ್ರದೇಶಗಳ ಮಾಹಿತಿ
ಬೆಂಗಳೂರು, ಅಕ್ಟೋಬರ್ 08: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವ್ಯಾಪ್ತಿಯಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾರ್ಯ ನಿಮಿತ್ತ ಬೆಂಗಳೂರು ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ (Bengaluru Power cut) ಉಂಟಾಗಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯಲ್ಲಿ ಇಂದಿನಿಂದ ಅಕ್ಟೋಬರ್ 30ರವರೆಗೆ ವಿವಿಧ ದಿನಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಆಗಲಿದೆ. ಈ ಸಂಬಂಧ ಸಮರ್ಪಕ ವಿದ್ಯುತ್ ಪೂರೈಕೆ ಆಗುವುದಿಲ್ಲ. ಆದ್ದರಿಂದ ಸಹಕರಿಸುವಂತೆ ಬೆಸ್ಕಾಂ ಕೋರಿದೆ.
ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು, ನಗರಗಳು ಮತ್ತು ಸಮಯಾವಕಾಶವನ್ನು ಇಲ್ಲಿ ತಿಳಿದುಕೊಳ್ಳಿ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ (ತುಮಕೂರು ಉಪವಿಭಾಗ ಸರಸ್ವತಿಪುರಂ ಶಾಖೆ) ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡ ಕಾರಣ, ಅಕ್ಟೋಬರ್ 9, 11, 16 ಮತ್ತು 18ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸದಾಶಿವನಗರ, ವೀರಸಾಗರ, ನಜರಾಬಾದ್, ಬನಶಂಕರಿ, ಉಪ್ಪಾರಹಳ್ಳಿ, ಶಾಂತಿನಗರ, ಬನಶಂಕರಿ 2ನೇ ಹಂತ, ಅಮರಜ್ಯೋತಿ ನಗರ, ಗೂಡ್ಸ್ ಶೆಡ್ ಕಾಲೋನಿ, ವಿಶ್ವಣ್ಣ ಬಡವಣೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 9449844296ಗೆ ಸಂಪರ್ಕಿಸಬಹುದಾಗಿದೆ.
ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ಕೆಲ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 9, 11, 13, 16, 18, 20, 25, 27 ಹಾಗೂ 30ರಂದು ಬೆಳಗ್ಗೆ 7 ಗಂಟೆ ಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಹೊಸಹಳ್ಳಿ, ಬ೦ಡನಹಳ್ಳಿ, ಶಿವಪುರ, ಎಂಎಂಎ ಕಾವಲ್, ತಾಳೆಕೊಪ್ಪ, ಗಣೇಶಪುರ, ಕಳ್ಳನಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಹಾಗಲವಾಡಿ ಎನ್.ಜೆ.ವೈ, ಕಾಟನಹಳ್ಳಿ, ಮರಾಠಿ ಪಾಳ್ಯ, ಚಿ೦ದಿಗೆರೆ, ತೊಣಸನಹಳ್ಳಿ, ಎಣ್ಣೆಕಟ್ಟೆ ಇರಕಸಂದ್ರ, ಚೇಳೂರು ಟೌನ್, ಜಾಲಗುಣಿ, ಆರಿವೇಸಂದ್ರ, ನಿಂಬೇಕಟ್ಟೆ ಮಾದೇನಹಳ್ಳಿ ಇಡಕನಹಳ್ಳಿ, C ಅರಿವೇಸಂದ್ರ, ಮಂಚಲದೊರೆ, ವಾಟರ್ ಸಪ್ಪೆ ಫೀಡರ್, ನಲ್ಲೂರು ಕೊಡಿಯಾಲ NJY, ಹೊಸಕೆರೆ, ಹಾಗಲವಾಡಿ, ಅಳಿಲಘಟ್ಟ ಹೂವಿನಕಟ್ಟೆ, , ಕಾಳಿಂಗನಹಳ್ಳಿ ಎನ್. ಜೆ.ವೈ, ಸೋಮಲಾಪುರ NJY,ವೈ, ಭೋಗಸಂದ್ರ NJY, ಬೆಟ್ಟದಹಳ್ಳಿ, ಗುಡೇನಹಳ್ಳಿ, ದೊಡ್ಡರಿ, ಚನ್ನೇನಹಳ್ಳಿ, ಹಿರೆ ತೊಟ್ಟಿಲುಕೆರೆ, ಹಿರೆಗುಂಡಗಲ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೊಸಕೋಟೆ ವ್ಯಾಪ್ತಿಯ ವ್ಯತ್ಯಯದ ಮಾಹಿತಿ
ಡಿಗೇನಹಳ್ಳಿ ವ್ಯಾಪ್ತಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಇರುವುದಿಲ್ಲ. ಚಿಕ್ಕತಗ್ಗಲಿ, ದೊಡ್ಡತಗ್ಗಲಿ, ಉಮ್ಮಲು, ಜಡಿಗೇನಹಳ್ಳಿ, ಹರಳೂರು, ಓರೋಹಳ್ಳಿ, ಗೊಣಕನಹಳ್ಳಿ, ತಗ್ಗಲಿ ಹೊಸಹಳ್ಳಿ, ದೊಡ್ಡದೇನಹಳ್ಳಿ, ದೇವನಗುಂದಿ ಕ್ರಾಸ್, ವಾಗಟ, ಬಿಸನಹಳ್ಳಿ, ಮಾಕನಹಳ್ಳಿ, ಕಣೆಕಲ್ಲು, ಕಟ್ಟಿಗೇನಹಳ್ಳಿ, ಖಾಜಿ ಹೊಸಹಳ್ಳಿ, ಐಒಸಿಎಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಇನ್ನೂ ದೇವನಗುಂದಿ ವಿತರಣೆ ವ್ಯಾಪ್ತಿಯ ಡಿ.ಹೊಸಹಳ್ಳಿ, ದೇವನಗುಂದಿ, ದೊಡ್ಡ ದುನ್ನಸಂದ್ರ ಕ್ರಾಸ್, ಸೌಖ್ಯ ರೋಡ್, ಕಣೆಕಲ್ ಕಾಸ್, ತಿರುಮಲಶೆಟ್ಟಿಹಳ್ಳಿ, ನಾರಾಯಣಕೆರೆ, ಕಲ್ಕುಂಟೆ ಅಗ್ರಹಾರ, ದೇವಲಾ ಪುರ, ಸಮ್ಮೇತನಹಳ್ಳಿ, ಹೆಮ್ಮಂಡಹಳ್ಳಿ, ಗುಂಡೂರು, ಬಾಗೂರು, ತತ್ತನೂರು, ತಿರುವ ರಂಗ, ಶಿವನಾಪುರ, ಲಿಂಗಧೀರ ಮಲ್ಲಸಂದ್ರ, ಗಣಗಲೂರು, ಮೇಡಿಮಲ್ಲಸಂದ್ರ, ಮೇಡಹಳ್ಳಿ, ಅನುಗೊಂಡನಹಳ್ಳಿ, ಯಡಗೊಂಡನಹಳ್ಳಿ, ಮುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ರಸ್ತೆ ಅಗಲೀಕರಣ ಸಂಬಂಧ ವಿದ್ಯುತ್ ವ್ಯತ್ಯಯ
ರಸ್ತೆ ಅಗಲೀಕರಣ ಕಾಮಗಾರಿ ಪ್ರಯುಕ್ತ ತುಮಕೂರು ವಿಭಾಗ ಬೆಸ್ಕಾಂ ನಗರ ವ್ಯಾಪ್ತಿಯಲ್ಲಿ ಅಕ್ಟೋಬರ್ 14, 15, 21, 22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಡಿಸಿ ಕಚೇರಿ, ಕೋರ್ಟ್ ಆವರಣ, ಹಾರೋಹಳ್ಳಿ ಅಗ್ರಿ ಫಿಡರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಆಗಲಿದೆ ಎಂದು ತಿಳಿಸಲಾಗಿದೆ.
ಇನ್ನೂ ಚಿಕ್ಕಬಳ್ಳಾಪುರ ಹಾಗೂ ಮುಳಬಾಗಿಲು ಪ್ರದೇಶ ವ್ಯಾಪ್ತಿಯಲ್ಲಿ ಇಂದು ಸಹ ಸಂಜೆ 4ಗಂಟೆ ವರೆಗೆ ವಿದ್ಯತ್ ಪೂರೈಕೆಯಲ್ಲಿ ವ್ಯತ್ಯವಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications