ಬೆಂಗಳೂರು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಕಟ್; ಯಾವ-ಯಾವ ಏರಿಯಾ?
ಬೆಂಗಳೂರು, ಏಪ್ರಿಲ್ 17: ಬೆಂಗಳೂರಿನಲ್ಲಿ ಸಂಜೆ ಹೊತ್ತಿಗೆ ಮಳೆ ಸುರಿದು ಸಾಕಷ್ಟು ಹಾನಿಯುಂಟು ಮಾಡುತ್ತಿರುವ ಈ ಸಮಸ್ಯೆಯ ಮಧ್ಯದಲ್ಲಿ ಬೆಸ್ಕಾಂನಿಂದ ಪ್ರಮುಖ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು ಏಪ್ರಿಲ್ 17ರಿಂದ 21ರವರೆಗೆ ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್ ಹಾಗೂ ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಿಲಿಕಾನ್ ಸಿಟಿಯಲ್ಲಿ ಬೆಸ್ಕಾಂನಿಂದ ವಿದ್ಯುತ್ ಕೇಬಲ್ ಹಾಕುವ ಕಾಮಗಾರಿಯು ಪ್ರಗತಿಯಲ್ಲಿದ್ದು ಹಾಗೂ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಈ ಕೆಳಗಿನ ಬಡಾವಣೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಕರೆಂಟ್ ಇರುವುದಿಲ್ಲ. ಬೆಂಗಳೂರು ಅನೇಕ ಪ್ರದೇಶಗಳಲ್ಲಿ ಇಂದಿನಿಂದ ಏಪ್ರಿಲ್ 21ವರಿಗೆ ವಿದ್ಯುತ್ ಪೂರೈಕೆ ಕಡಿತವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ವಿದ್ಯುತ್ ವ್ಯತ್ಯಯ ಉಂಟಾಗುವ ನಗರಗಳು ಹೀಗೆವೆ...
ಬೆಂಗಳೂರಿನ ಈ ಪ್ರಮುಖ ನಗರಗಳಲ್ಲಿ ಇಂದಿನಿಂದ ಸುಮಾರು 7 ಗಂಟೆ 30 ನಿಮಿಷಗಳ ಕಾಲ ಕರೆಂಟ್ ಇರುವುದಿಲ್ಲ, ಮಹಾನಗರಿಯ ಇಲ್ಲಿನ ಪ್ರಶಾಂತ ಲೇಔಟ್, ಉಪ್ಕಾರ್ ಲೇಔಟ್, ಪೃಥ್ವಿ ಲೇಔಟ್, ಸ್ವಾಮಿ ವಿವೇಕಾನಂದ ರೋಡ್, ವೈಟ್‌ಫೀಲ್ಡ್ ಮೇನ್ ರೋಡ್, ಇಸಿಸಿ ರೋಡ್, ಸಾಯಿ ಲೇಔಟ್ ಅಂಬೇಡ್ಕರ್ ನಗರ, ಆದರ್ಶ ಫಾರ್ಮ್ ಮೇಡ್ಯೂಸ್ ಬೋರ್ವೇಲ್ ರೋಡ್ ಮತ್ತು ಔಟ್‌ರ್ ಸರ್ಕಲ್‌ನ ಸುತ್ತುಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಾಗುವುದಿಲ್ಲ.

ಇನ್ನು ನಾಳೆ (ಏಪ್ರಿಲ್ 18ರಂದು) ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ಬಲ್ಲಾಗೇರೆ ರೋಡ, ವರ್ತೂರು ಮೇನ್ ರೋಡ್, ಹಲಸಲ್ಲಿ ಕ್ರಾಸ್ ಮತ್ತು ವರ್ತೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ. ಏಪ್ರಿಲ್ 19ರಂದು ಗುಂಜೂರು ಮೇನ್ ರೋಡ ಮತ್ತು ಕೃಪಾನಿಧಿ ಕಾಲೇಜು ರಸ್ತೆ ಪ್ರದೇಶಗಳ ಬಡಾವಣೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಏಪ್ರಿಲ್ 20ರಂದು ಇಲ್ಲಿನ ಚನ್ನಸಂದ್ರ, ಎಫ್‌ಸಿಐ ಉಗ್ರಾಣ, ಸಫಾಲ್, ವಿಎಸ್ ಆರ್ ಲೇಔಟ್, ಕೊರಲೂರು, ತಿಮ್ಮಶೇಟ್ಟಿಹಳ್ಳಿ, ಹೊಸಹಳ್ಳಿ, ಸೂರ್ಯ ರೋಡ್ ಮತ್ತು ಹೇಮಂಧನಹಳ್ಳಿಯಲ್ಲಿ ಮುಂಜಾನೆಯಿಂದ ಸಂಜೆವರೆಗೂ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಇನ್ನು ಏಪ್ರಿಲ್ 21ರಂದು ಕೂಡಾ ವಿದ್ಯುತ್ ವ್ಯತ್ಯಯ ನಗರಗಳಲ್ಲಿ ಉಂಟಾಗಲಿದೆ ಇಲ್ಲಿನ ಪ್ರಶಾಂತ ಲೇಔಟ್, ಉಪ್ಕಾರ್ ಲೇಔಟ್, ಪೃಥ್ವಿ ಲೇಔಟ್, ಸ್ವಾಮಿ ವಿವೇಕಾನಂದ ರೋಡ್, ವೈಟ್‌ಫೀಲ್ಡ್ ಮೇನ್ ರೋಡ್, ಇಸಿಸಿ ರಸ್ತೆಯಲ್ಲಿರುವಂತಹ ಬಡಾವಣೆಯ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಇನ್ನು ಕೇಲವು ಪ್ರದೇಶಗಳಲ್ಲಿ ಏಪ್ರಿಲ್ 18ರಿಂದ 20ವರಿಗೂ ಮಹಾನಗರದ ಹಲವಾರು ಪ್ರದೇಶಗಳಲ್ಲಿ ಸೋಮವಾರದಿಂದ ಬುಧವಾರದವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಕರೆಂಟ್ ಇಲ್ಲದ ಸಮಯದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಬೆಂಗಳೂರನಲ್ಲಿ ಮತ್ತೆ ಮಳೆ ಸುರಿದರೆ ನಗರದ ಜನತೆಗೆ ಮತ್ತಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಇನ್ನು ವಿದ್ಯುತ್ ವ್ಯತ್ಯಯ ಸಮಯದಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಗಳು ನಗರಗಳಲ್ಲಿ ಕಾಡಲಿವೆ ಎಂದರು ತಪ್ಪಾಗದು.












Click it and Unblock the Notifications