Bengaluru Power Cut: ಬೆಂಗಳೂರಿನಲ್ಲಿ ಸೆಪ್ಟೆಂಬರ್ 22 ಮತ್ತು 23ರಂದು ವಿದ್ಯುತ್ ವ್ಯತ್ಯಯ
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಸೆಪ್ಟೆಂಬರ್ 22 ಮತ್ತು 23ರಂದು ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ಇಲ್ಲಿ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಬೆಂಗಳೂರುವ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬೆಸ್ಕಾಂ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಸೆಪ್ಟೆಂಬರ್ 22, 23 ಅಂದರೆ ಸೋಮವಾರ, ಮಂಗಳವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಸೋಮವಾರ ಎಲ್ಲೆಲ್ಲಿ ಕರೆಂಟ್ ಕಟ್?: ನಾಮಧಾರಿ, ಹೆಗಡೆ ನಗರ, ಉಗ್ರಹಳ್ಳಿ, ಮಾಯಗಾನಹಳ್ಳಿ, ಎಂ.ಬಿ.ಲೇಔಟ್, ಬಿ.ಸಿ. ಲೇಔಟ್, ಕಾಂಚನ ಲೇಔಟ್, ಪಾದರಹಳ್ಳಿ, ಚನ್ನಸಂದ್ರ, ಮದನಪುರ, ಯಶವಂತಪುರ, ಫ್ರೇಜರ್ ಟೌನ್, ಹಲಸೂರು, ಮಲ್ಲೇಶ್ವರಂ, ಗಾಂಧಿನಗರ, ಅತ್ತಿಗುಪ್ಪೆ, ಚಾಮರಾಜಪೇಟೆ, ಲಿಂಗರಾಜಪುರ, ಕೆಂಪಾಪುರ, ವಿನಾಯಕ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದ ಎಂದು ತಿಳಿಸಿದೆ.
ಅಲ್ಲದೆ, ಟ್ರಿನಿಟಿ, ಬೈಯಪ್ಪನಹಳ್ಳಿ, ಶಾಂತಿನಗರ, ಜಯಮಹಲ್, ಮಾರತ್ತಹಳ್ಳಿ, ಕೋಗಿಲು, ಬಿಡಿಎ ಲೇಔಟ್, ಬಾಗಲೂರು, ರಾಜನಗರ ಬಡಾವಣೆ, ಬಾಗಲೂರು ಲೇಔಟ್, ದೊಡ್ಡಕಲಸಂದ್ರ, ಹನುಮಂತಪುರ, ಅಟ್ಟೂರು, ಜಗನಾಥಪುರ, ನಿವಾರ, ಲೆಬ್ಬೆಟ್, ಅಗ್ನಿನಗರ, ಬಿ.ವಿ.ಗುಡಿಪಾಲ, ಅಂಬೇಡ್ಕರ್ ನಗರ.
ಬಿ.ಬಿ.ಪಾಳ್ಯ, ಹೊಸಹಳ್ಳಿ, ಗುಬ್ಬಿ ಗೇಟ್, ರಿಂಗ್ ರಸ್ತೆ, ಹಾರೋಹಳ್ಳಿ, ಹೊನ್ನೇಮನಹಳ್ಳಿ, ಹೆಬ್ಬಾಳ, ಕುಪ್ಪೂರು, ಡಿ.ಎಂ.ಪಾಳ್ಯ, ಪಿಎನ್ ಆರ್ ಪಾಳ್ಯ, ನರಸಾಪುರ, ಕೆ.ಜಿ.ಪಾಳ್ಯ, ಭಜಂತ್ರಿ ಪಾಳ್ಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಮಂಗಳವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಯಲ್ಲಾರ್ ಬಂಡೆ 66/11 ಕೆವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಸೆಪ್ಟೆಂಬರ್ 23ರ ಮಂಗಳವಾರ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೈರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಕಾವಲ್ ಬೈರಸಂದ್ರ, ಎಲ್.ಆರ್.ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ಮೆಡಿಕಲ್ ಕಾಲೇಜು, ಸುಲ್ತಾನ್ ಪಾಳ್ಯ, ರಂಕಾನಗರ, ಕನಕನಗರ, ಕೆಎಚ್‌ಬಿ ಮುಖ್ಯರಸ್ತೆ, ವಿ.ನಾಗೇನಹಳ್ಳಿ, ಭುವನೇಶ್ವರಿ ನಗರ.
ಕುಶಾಲ್‌ನಗರ, ಪೆರಿಯಾರ್ ನಗರ, ಮೋದಿ ಉದ್ಯಾನ, ಮೋದಿ ರಸ್ತೆ, ಮುನಿವೀರಪ್ಪ ಲೇಔಟ್, ದೊಡ್ಡಣ್ಣ ನಗರ, ಉಪ್ಪಿನ ಮಂಡಿ, ಸಕ್ಕರೆ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ವಿದ್ಯುತ್ ಸಂಬಂಧಿತ ಉಪಕರಣಗಳು ಮೊಬೈಲ್, ಫೋನ್, ಲ್ಯಾಪ್ ಟಾಪ್, ಬ್ಯಾಟರಿಗಳನ್ನು ಮುಂಜಾಗ್ರತಾ ಕ್ರಮವಾಗಿ ಚಾರ್ಜ್ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.












Click it and Unblock the Notifications