Bengaluru Power Cut: ಸೆಪ್ಟೆಂಬರ್ 18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಕಟ್ -ಇಲ್ಲಿದೆ ಮಾಹಿತಿ
Bengaluru Power Cut: ವಿದ್ಯುತ್ ಲೈನ್, ಕಂಬಗಳ ಅಳವಡಿಕೆ ಸೇರಿದಂತೆ ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿಗಳು ಇರುವಂತಹ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ನಾಳೆ (ಸೆಪ್ಟೆಂಬರ್ 19) ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಗರದ ವಿವಿಧ ಕಡೆ ಪರಿಶೀಲನಾ ಹಾಗೂ ಅಭಿವೃದ್ಧಿ ಕಾರ್ಯಗಳು ಇರುವ ಹಿನ್ನೆಲೆ ಬೆಸ್ಕಾಂ ಪ್ರತಿನಿತ್ಯ ಹಲವೆಡೆ ವಿದ್ಯುತ್ ಕಡಿತ ಮಾಡುತ್ತಿರುತ್ತದೆ. ಹಾಗೆಯೇ ನಾಳೆ ಗುರುವಾರವೂ ಕೂಡ ಹಲವೆಡೆ ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕಡಿಯ ಮಾಡಲಾಗುತ್ತದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಸಪ್ಟೆಂಬರ್ 19ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 220/66/11ಕೆ.ವಿ ಎನ್.ಆರ್.ಎಸ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಮಾಡಲಾಗುತ್ತದೆ. ಆದ್ದರಿಂದ ಇಲ್ಲಿ ನೀಡಲಾಗಿರುವ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ 1912ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
ಮಂಜುನಾಥ ನಗರ, ಶಿವನಗರ, ಗಾಯತ್ರಿ ನಗರ, ಪ್ರಕಾಶನಗರ, ಎಲ್.ಎನ್.ಪುರ, ಸುಬ್ರಂಮಣ್ಯನಗರ, ವಿಜಯನಗರ, ರಾಜಾಜಿನಗರ 2ನೆ ಬ್ಲಾಕ್ ಮತ್ತು 6ನೆ ಬ್ಲಾಕ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ, ಶಂಕರಮಠ, ಬ್ರೀಗೆಡ್ ಅಪಾರ್ಟ್‌ಮೆಂಟ್, ಮಾಗಡಿ ರಸ್ತೆ 1ನೇ ಕ್ರಾಸ್‌ನಿಂದ 8ನೇ ಕ್ರಾಸ್, ಮಾಗಡಿ ರಸ್ತೆ 9ನೇ ಕ್ರಾಸ್, ಮಾಗಡಿ ರಸ್ತೆ 10ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಹೊಸಹಳ್ಳಿ ಮುಖ್ಯರಸ್ತೆ, ಸುಜಾತಾ ಟೆಂಟ್, ಜೆ.ಜೆ.ಆರ್ ನಗರ, ಓಬಳೇಶ್ ಕಾಲೋನಿ, ವಿಎಸ್ ಗಾರ್ಡನ್, ರಾಯಾಪುರ, ಬಿನ್ನಿ ಪೇಟೆ, ಪಾದರಾಯನಪುರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1, 2, 3ನೇ ಕ್ರಾಸ್, ಮೋಮಿಂಪುರ, ಜನತಾ ಕಾಲೋನಿ, ರಂಗನಾಥ ಕಾಲೋನಿ, ಹೊಸಹಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾಟ್ರಸ್, ಎಸ್‌ಡಿ ಮಠ, ಕಾಟನ್ ಪೇಟೆ, ಅಕ್ಕಿ ಪೇಟೆ, ಬಾಲಾಜಿ ಕಾಂಪ್ಲೆಕ್ಸ್ , ಸುಲ್ತಾನ್ ಪೇಟ್, ನಲ್ಬಂಡ್ವಾಡಿ ಎದುರು ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಟೆಲಿಕಾಂ ಲೇಔಟ್, ಅಂಬೇಡ್ಕರ್ ಲೇಔಟ್, ನಾಗಮ್ಮ ನಗರ, ಚೆಲುವಪ್ಪ ಗಾರ್ಡನ್‌ನಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಎಸ್‌ಬಿಐ ಕ್ವರ‍್ಟರ‍್ಸ್, ಗೋಪಾಲನ್ ಅಪಾರ್ಟ್‌ಮೆಂಟ್, ಮರಿಯಪ್ಪನ ಪಾಳ್ಯ, ಕೆಪಿ ಅಗ್ರಹಾರ, ಭುವನಂಗೇಶ್ವರಿ ಮಠ, ಇಟಿಎ ಅಪಾರ್ಟ್‌ಮೆಂಟ್, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್‌ಮೆಂಟ್ ಹಂಪಿನಗರ, ವಿಜಯನಗರ, ಟೆಲಿಕಾಂ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ 66/11ಕೆ.ವಿ ಮಾನ್ಯತಾ ಟೆಕ್ ಪಾರ್ಕ್ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.
ಮಾನ್ಯತಾ ಟೆಕ್ ಪಾರ್ಕ್, ಕಾಫಿ ಬರ‍್ಡ್ ಲೇಔಟ್, ಮರಿಯನಪಾಳ್ಯ, ಮಾನ್ಯತಾ ರೆಸಿಡೆನ್ಸಿ, ಶ್ರೀ ಭಾಗ್ಯಶ್ರೀ ಲೇಔಟ್ ಮತ್ತು ರಾಚೇನಹಳ್ಳಿ, ಐಬ್ರಾಕ್ಸ್, ಅಮರಜ್ಯೋತಿ ಲೇಔಟ್, ಫಾತಿಮಾ ಲೇಔಟ್, ಅಂಜನಾದ್ರಿ ಲೇಔಟ್, ಮಂತ್ರಿ ಲಿಥೋಸ್, ಫಿಡಿಲಿಟಿ, ಎಲ್-6 ಸಿಮೇನ್ಸ್, ಚಿರಂಜಿವಿ ಲೇಔಟ್, ವೆಂಕಟಗೌಡ ಲೇಔಟ್, ಎಲ್-5 ನೋಕಿಯಾ ಬ್ಲಾಕ್, ಥಣಿಸಂದ್ರ, ಮೆಸ್ತರಿ ಪಾಳ್ಯ, ಮತ್ತು ಜೆಎನ್ಸಿ, ಗೊದ್ರೇಜ್ ಅಪಾರ್ಟ್‌ಮೆಂಟ್, ಬ್ರೀಗೆಡ್ ಕ್ಯಾನಾಡಿಯಮ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವಯತ್ಯಯ ಆಗಲಿದೆ.












Click it and Unblock the Notifications