Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ -ಇಲ್ಲಿದೆ ಮಾಹಿತಿ

Bengaluru Power Cut: ವಿದ್ಯುತ್‌ ಕಾಮಗಾರಿ ನಡೆಯುವಂತಹ ಸ್ಥಳದಲ್ಲಿ ಸಾಮಾನ್ಯವಾಗಿ ವಿದ್ಯುತ್‌ ವ್ಯತ್ಯಯವಾಗುತ್ತದೆ ಮತ್ತು ಕೆಲವು ಬಾರಿ ಎಲ್‌ಸಿ ತೆಗೆದುಕೊಂಡ ವೇಳೆ ಕರೆಂಟ್‌ ಕಟ್‌ ಮಾಡಲಾಗುತ್ತದೆ. ಹಾಗೆಯೇ ವಾರಂತ್ಯದಲ್ಲಿ ಅಂದರೆ ಶನಿವಾರ (ಸೆಪ್ಟೆಂಬರ್‌ 14) ಬೆಂಗಳೂರಿನ ಹಲವು ಪ್ರದೇಶದಗಳಲ್ಲಿ ವಿದ್ಯುತ್‌ ವ್ಯತ್ಯಯ ಮಾಡಲಾಗುತ್ತದೆ. ಮಾಹಿತಿ ಇಲ್ಲಿದೆ ತಿಳಿಯಿರಿ.

ಶನಿವಾರ (ಸೆಪ್ಟೆಂಬರ್ 14) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11ಕೆವಿ ಆರ್‌ಎಂವಿ ಎಂಯುಎಸ್ಎಸ್ ಕೇಂದ್ರದಲ್ಲಿ ಅರ್ಧ ವಾರ್ಷಿಕ ನಿರ್ವಹಣೆ ನಡೆಸಲಾಗುತ್ತಿದೆ. ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಇಲ್ಲಿ ನೀಡಲಾಗಿರುವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿ ಬೆಸ್ಕಾಂ ಮೂಲಗಳಿಂದ ಲಭ್ಯವಾಗಿದೆ.

Power cut in Bengaluru s these areas on September 14 Know details

ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ.?: ರಾಮಯ್ಯ ಆಸ್ಪತ್ರೆ, ಪೈಪ್‌ಲೈನ್ ರಸ್ತೆ, ಎ.ಜಿ.ಎಸ್. ಲೇ ಔಟ್, ಸದಾಶಿವ ನಗರ ಪೋಲಿಸ್ ಠಾಣೆ, ಎಲ್.ಜಿ.ಹಳ್ಳಿ, ಆರ್.ಎಮ್.ವಿ 2ನೇ ಹಂತ, ಬಿ.ಇ.ಎಲ್ ರಸ್ತೆ, ಎಂ.ಎಸ್.ಆರ್ ನಗರ, ಜಲದರ್ಶಿನಿ ಲೇ ಔಟ್, ಎಂ.ಎಸ್.ಆರ್. ನಗರ, ರಾಮಯ್ಯ ಬಾಯ್ಸ್ ಹಾಸ್ಟೆಲ್, ಎ.ಕೆ.ಕಾಲೋನಿ, ಕಾಫಿ ಡೇ, ಸೀನಪ್ಪ ಲೇ ಔಟ್, ಇಸ್ರೋ, ಡಾಲರ್ಸ್ ಕಾಲೋನಿ, ಚಿಕ್ಕಮಾರನಹಳ್ಳಿಯಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ಗೌರಿ ಅಪಾರ್ಟ್ ಮೆಂಟ್, ಎನ್.ಎಸ್.ಹಳ್ಳಿ, ಯೆಜಮನ್ನಪ್ಪ ಲೇಔಟ್, ಯುಎಎಸ್ ಲೇಔಟ್, ಎನ್‌ಟಿಐ ಲೇಔಟ್, ವಿನಾಯಕ ಲೇಔಟ್, ಟೀಚರ್ಸ್ ಕಾಲೋನಿ, ವಿಎಸ್ಎನ್ಎಲ್, ಪೋಸ್ಟಲ್ ಲೇಔಟ್, ಜಡ್ಜಸ್ ಲೇಔಟ್, ಎನ್‌ಜಿಇಎಫ್ ಲೇಔಟ್, ಅಮರಜ್ಯೋತಿ ಲೇಔಟ್, ಹನುಮಯ್ಯ ಲೇಔಟ್, ಕೊಲ್ತೇಪಾಟೀಲ್ ದೊಡ್ಮನೆ, ಬಸವಲ್ಲಾಸ್ ಮುಖ್ಯರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಅಗಲಿದೆ ಎಂದು ತಿಳಿಸಿದೆ.

ಇನ್ನು ವಿದ್ಯುತ್ ಸಂಬಂಧಿತ ಯಾವುದೇ ದೂರುಗಳು ಇದ್ದರೆ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಬೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+