Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಅಕ್ಟೋಬರ್‌ 30ರ ಸಂಜೆ 4 ಗಂಟೆಯವರೆಗೆ ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಅಕ್ಟೋಬರ್‌ 30ರ ಗುರುವಾರ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ತಿಳಿಯಿರಿ.

ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಅಕ್ಟೋಬರ್‌ 30ರಂದು ನಗರದ ಹಲವು ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

Power Cut in Bengaluru s These Areas On October 30 Know details

ಕಂಚೀಪುರ, ಡಿ.ಟಿ. ವಟ್ಟಿ, ಕೈನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾ‌ರ್ ಪವರ್ ಪ್ಲಾಂಟ್‌ನ ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯ ನಿರ್ವಹಿಸುವುದರಿಂದ ಅಕ್ಟೋಬರ್ 30ರಂದು 100ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 66/11 ಕೆ.ವಿ ಕಂಚೀಪುರ ವಿದ್ಯುತ್ ವಿತರಣಾ ಕೇಂದ್ರದ ಐಪಿ ಹಾಗೂ ನಿರಂತರ ಜ್ಯೋತಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜನರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಎಲ್ಲೆಲ್ಲಿ ಕರೆಂಟ್‌ ಕಟ್‌?: ವಿವೇಕಾನಂದ ನಗರ, ಫ್ರೇಸರ್ ಟೌನ್, ಬೆನ್ಸನ್ ಟೌನ್, ಜೀವನಹಳ್ಳಿ, ಕಾಕ್ಸ್ ಟೌನ್, ಹಳೆಯ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ರಿಚಡ್ರ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಕಾಮನಹಳ್ಳಿ ಮುಖ್ಯ ರಸ್ತೆ, ಕೆಎಚ್‍ಬಿ ಕಾಲೋನಿ, ಜೈಭಾರತ್ ನಗರ, ಸಿಕೆ ಗಾರ್ಡನ್, ಹಚಿನ್ಸ್ ರಸ್ತೆ, ವೀಲರ್ ರಸ್ತೆ, ಬನಸವಾಡಿ ರೈಲ್ವೆ ನಿಲ್ದಾಣ ರಸ್ತೆ, ಲಾಜರ್ ಲೇಔಟ್, ರಿಚಡ್ರ್ಸ್ ಟೌನ್.

ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಮೊಬೈಲ್‌, ಬ್ಯಾಟರಿ ಸೇರಿದಂತೆ ಅಗತ್ಯ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳಿ ಎಂದು ಬೆಸ್ಕಾಂ ಗ್ರಾಹಕರಿಗೆ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+