Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜುಲೈ 21, 22ರಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜುಲೈ 21 ಮತ್ತು 22ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಸಹ ನೀಡಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ 66/11ಕೆವಿ ಸಹಕಾರನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಇದೇ ಜುಲೈ 21ರ ಸೋಮವಾರ, ಜುಲೈ 22ರ ಮಂಗಳವಾರ ಬೆಂಗಳೂರು ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ ಅಂತಾ ವರದಿಯಾಗಿದೆ.
ಎರಡು ದಿನ ಎಲ್ಲೆಲ್ಲಿ ಕರೆಂಟ್ ಕಟ್: ಬೆಂಗಳೂರು ನಗರದ ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ-ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ.
ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್ ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್‌ಎಸ್ ಲೇಔಟ್, ಸೂರ್ಯೋನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರಜಕ್ಕೂರು, ವಿಆರ್‌ಎಲ್ ರಸ್ತೆ, ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಶನಿವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವೆಲ್ ಕ್ಯಾಸ್ಟ್ ಉಪಕೇಂದ್ರ ವ್ಯಾಪ್ತಿಯ ಪೀಣ್ಯ ವಿಭಾಗದ ಎನ್ -7 ಉಪ ವಿಭಾಗದಲ್ಲಿ ಶನಿವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಡಿತವಾಗಲಿದೆ ಎಂದು ತಿಳಿಸಿತ್ತು.
ರವೀಂದ್ರ ನಗರ, ಪ್ರಸನ್ನನಾಥ್ ನಗರ, ಶಾಂತೋಷ್ ನಗರ, ಏರ್‌ಪೋರ್ಸ್ ಜಲ್ಲಹಳ್ಳಿ ಪಶ್ಚಿಮ, ವೈಷ್ಣವಿ ನಕಾಶ್ತ್ರ ಅಪಾರ್ಟ್‌ಮೆಂಟ್, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಗತಿ ರಸ್ತೆ, ತ್ರಿವೇಣಿ, ಎಚ್ಎಚ್‌ವಿ, ಡಿಎಂಜಿ, ಕೃಷ್ಣ ಫ್ಯಾಬ್ರಿಕೇಶನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಎಂಎಸ್ಐಎಲ್ ಪ್ರಿಂಟಿಂಗ್ ಪ್ರೆಸ್, ಎಸ್ ರಮೇಶ್ ರಸ್ತೆ, ವಿಪ್ರೋ ವೆಲ್ಕಾಸ್ಟ್ ಫ್ಯಾಕ್ಟರಿ ಐಟಿಸಿ, ವೋಲ್ವೋ, ಅವೆರಿ ಡೆನ್ಮಿಷನ್, ಹಿಟಾಚ್ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಇನ್ನು ವಿದ್ಯುತ್ ಪೂರೈಕೆಯಲ್ಲಿ ಕಡಿತ ಉಂಟಾಗುವ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳು ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿಗ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನ ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳಲು ಹಾಗೂ ಈ ಸಮಯದಲ್ಲಿ ವಿದ್ಯುತ್ ಉಪಕರಣಗಳನ್ನು ಅವಲಂಬಿಸುವುದನ್ನ ತಪ್ಪಿಸುವಂತೆ ಬೆಸ್ಕಾಂ ಮುಂಜಾಗ್ರತಾ ಕ್ರಮವಾಗಿ ಸೂಚನೆ ನೀಡಿದೆ.












Click it and Unblock the Notifications