Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆಪ್ಟೆಂಬರ್ 19ರಿಂದ 30ರ ವರೆಗೂ ವಿದ್ಯುತ್ ವ್ಯತ್ಯಯ

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಸೆಪ್ಟೆಂಬರ್ 19ರಿಂದ 30ರ ವರೆಗೂ ನಗರದ ಹಲವು ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ? ಕಾರಣ ಏನು ಹಾಗೂ ಸಮಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಸೆಪ್ಟೆಂಬರ್ 19ರಿಂದ 30ರ ವರೆಗೂ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಎಷ್ಟು ಗಂಟೆಯವರೆಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಕಣ್ಣಾಡಿಸಿ.

Power Cut in Bengaluru s These Areas from September 19 to 30 Know details

ಎಲ್ಲೆಲ್ಲಿ ಎಲ್ಲಿವರೆಗೂ ಕರೆಂಟ್ ಕಟ್?: ಯಶವಂತಪುರ, ಫ್ರೇಜರ್ ಟೌನ್, ಹಲಸೂರು, ಮಲ್ಲೇಶ್ವರಂ, ಗಾಂಧಿನಗರ, ಅತ್ತಿಗುಪ್ಪೆ, ಚಾಮರಾಜಪೇಟೆ ಮತ್ತು ಲಿಂಗರಾಜಪುರ, ಕೆಂಪಾಪುರ, ವಿನಾಯಕ ನಗರ, ಟ್ರಿನಿಟಿ, ಬೈಯಪ್ಪನಹಳ್ಳಿ, ಶಾಂತಿನಗರ, ಜಯಮಹಲ್, ಮಾರತ್ತಹಳ್ಳಿ, ಕೋಗಿಲು, ಬಿಡಿಎ ಲೇಔಟ್, ಬಾಗಲೂರು ಕ್ರಾಸ್, ವೆಂಕಟೇಶಪಾಳ್ಯ, ನೇತಾಜಿ ಲೇಔಟ್, ರಾಜಾಜಿನಗರ ಮತ್ತು ದೊಡ್ಡಕಲಸಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 10 ಗಂಟೆಯರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸೆಪ್ಟೆಂಬರ್ 20, 22, 24, 26, 28, ಮತ್ತು 30ರಂದು ಹನುಮಂತಪುರ, ಅತ್ತೂರು, ಜಗನಾಥಪುರ, ಅಗ್ನಿನಗರ, ಬಿವಿ ಗುಡಿಪಾಲ, ಅಂಬೇಡ್ಕರ್ ನಗರ, ಬಿಬಿ ಪಾಳ್ಯ, ಹೊಸಹಳ್ಳಿ, ಗುಬ್ಬಿ ಗೇಟ್, ರಿಂಗ್ ರೋಡ್, ಹಾರೋಹಳ್ಳಿ, ಹೊನ್ನೇಮನಹಳ್ಳಿ, ಹೆಬ್ಬಾಳ, ಕುಪ್ಪೂರು, ಡಿಎಂ ಪಾಳ್ಯ, ಪಿಎನ್‌ಆರ್ ಪಾಳ್ಯ, ನರಸಾಪುರ, ಕೆ.ಜಿ.ಪಾಳ್ಯ, ಭಜಂತ್ರಿ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಬೆಂಗಳೂರು ನಗರದ ನಾಮಧಾರಿ, ಹೆಗ್ಡೆ ನಗರ, ಉಗ್ರಹಳ್ಳಿ, ಮಾಯಗಾನಹಳ್ಳಿ, ಎಂಬಿ ಲೇಔಟ್, ಬಿ.ಸಿ.ಲೇಔಟ್, ಕಾಂಚನ ಲೇಔಟ್, ಪಾದರಹಳ್ಳಿ, ಚನ್ನಸಂದ್ರ ಮತ್ತು ಮದನಾಪುರಗಳಲ್ಲಿ ಭಾಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಸೆಪ್ಟೆಂಬರ್ 21, 23, 25, 27 ಮತ್ತು 29ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬಿಬಿ ಪಾಳ್ಯ, ಹೊಸಹಳ್ಳಿ, ಗುಬ್ಬಿ ಗೇಟ್, ರಿಂಗ್ ರೋಡ್, ಹಾರೋಹಳ್ಳಿ, ಹೊನ್ನೇಮನಹಳ್ಳಿ, ಹೆಬ್ಬಾಳ, ಕುಪ್ಪೂರು, ಡಿಎಂ ಪಾಳ್ಯ, ಪಿಎನ್‌ಆರ್ ಪಾಳ್ಯ, ನರಸಾಪುರ, ಕೆಜಿ ಪಾಳ್ಯ, ಭಜಂತ್ರಿ ಪಾಳ್ಯ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇನ್ನು ಇಂದು (ಸೆಪ್ಟೆಂಬರ್ 18) ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ನಗರದ ಯಶವಂತಪುರ, ಫ್ರೇಜರ್ ಟೌನ್, ಹಲಸೂರು, ಮಲ್ಲೇಶ್ವರಂ, ಗಾಂಧಿನಗರ, ಅತ್ತಿಗುಪ್ಪೆ, ಮಲ್ಲೇಶ್ವರಂ, ಚಾಮರಾಜಪೇಟೆ, ಲಿಂಗರಾಜಪುರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+