ಹಕ್ಕಿಜ್ವರ ಭೀತಿಗೆ ನಡುಗಿದ ಕುಕ್ಕುಟೋದ್ಯಮ: ವಹಿವಾಟು ಕುಸಿತ

ಬೆಂಗಳೂರು, ಜನವರಿ 29 : ಹಕ್ಕಿ ಜ್ವರ ಜನರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಇದು ಬೆಂಗಳೂರಿನ ಕುಕ್ಕುಟೋದ್ಯಮದ ಮೇಲೆ ಭಾರಿ ಪರಿಣಾಮವನ್ನೂ ಬೀರಿದೆ. ಇದರಿಂದಾಗಿ ವಹಿವಾಟು ಶೇ. 20 ರಿಂದ 30 ರಷ್ಟು ಕುಸಿತ ಕಂಡಿದ್ದು, ದಿನಕ್ಕೆ ಅಂದಾಜು 2.80 ಕೋಟಿ ನಷ್ಟ ಅನುಭವಿಸುತ್ತಿದೆ.

ಯಲಹಂಕದ ದಾಸರಹಳ್ಳಿ ಬಳಿ ಕೆಲವು ದಿನಗಳ ಹಿಂದೆ ಕೇರಳದಿಂದ ತಂದಿದ್ದ ಐದಾರು ಕೋಳಿಗಳಲ್ಲಿ ಹಕ್ಕಿಜ್ವರ ಕಂಡು ಬಂದಿತ್ತು. ಇದು ಇಡೀ ನಗರವನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಸರ್ಕಾರ, ವಿವಿಧ ಇಲಾಖೆ ಕೈಗೊಂಡ ಕ್ರಮದ ಪರಿಣಾಮ ಇದೀಗ ನಗರದಲ್ಲಿ ಹಕ್ಕಿಜ್ವರ ಕಂಡಿಲ್ಲ. ಆದರೂ ಜನರಲ್ಲಿ ಹಕ್ಕಿಜ್ವರದ ಆತಂಕ ಕಡಿಮೆಯಾಗದ ಪರಿಣಾಮ ಇದು ನೇರವಾಗಿ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದೆ.

ಹಕ್ಕಿ ಜ್ವರ ಪತ್ತೆಗೆ ರಾಜ್ಯದಲ್ಲಿ ದಿನನಕ್ಕೆ ಸುಮಾರು10 ರಿಂದ11 ಲಕ್ಷ ಕೋಳಿಗಳು ಅಂದರೆ ಅಂದಾಜು 2 ಲಕ್ಷ ಟನ್ ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಬೆಂಗಳೂರು ಒಂದರಲ್ಲೇ ಸುಮಾರು 3.50 ಲಕ್ಷದಿಂದ 4 ಲಕ್ಷಕೋಳಿಗಳು ಮಾರಾಟವಾಗುತ್ತಿತ್ತು. ಆದರೆ, ಹಕ್ಕಿ ಜ್ವರದ ಘಟನೆ ನಂತರ ಪ್ರತಿದಿನದ ವಹಿವಾಟಿನಲ್ಲಿ ಶೇ.20 ರಿಂದ30 ರಷ್ಟು ಕುಸಿತ ಕಂಡಿದೆ. ಜತೆಗೆ ಕೋಳಿ ಬೆಲೆಯಲ್ಲಿಯೂ ಕೂಡ ಪ್ರತಿ ಕೆ.ಜಿಗೆ 10 ರಿಂದ 15 ರೂ ಕಡಿಮೆಯಾಗಿದ್ದು, ಇದರಿಂದ ದಿನಕ್ಕೆ 2.80 ಕೋಟಿ ನಷ್ಟವಾಗಿದೆ.

Poultry industry faces loss of Rs.3crores

ರೈತರಿಗೆ 2 ಕೆಜಿಯ ಕೋಳಿ ಉತ್ಪಾದನೆಗೆ ಸುಮಾರು 70 ರೂ ಖರ್ಚು ಬರುತ್ತದೆ. ಆದರೆ ಫಾರಂಗಳಲ್ಲಿ ಕೇವಲ 65 ರೂಗಳಲ್ಲಿ ಸಗಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಕೋಳಿಗೆ 85ರಿಂದ 90 ಇದೆ ಎಂದು ಕುಕ್ಕುಟೋದ್ಯಮ ಮಹಾ ಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು ಹೇಳಿದ್ದಾರೆ.

ಕೋಳಿ ಮಾಂಸ, ಮೊಟ್ಟೆ ಬೆಲೆ ಯಥಾಸ್ಥಿತಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಕೋಳಿಗೆ 100 ರಿಂದ 120 ಇದೆ, ವಿತ್ ಸ್ಕಿನ್ ಮಾಂಸಕ್ಕೆ165 ರಿಂದ 180 ಇದ್ದು, ವಿತ್ ಔಟ್ ಸ್ಕಿನ್ ಮಾಂಸಕ್ಕೆ 180 ರಿಂದ 200 ರೂ ನಂತೆ ಮಾರಾಟ ಮಾಡಲಾಗುತ್ತಿದೆ ಒಟ್ಟಾರೆ ಕುಕ್ಕುಟೋದ್ಯಮಕ್ಕೆ ವಹಿವಾಟಿನಲ್ಲಿ ಕುಸಿತವಾಗಿದ್ದರೂ ಹಿಂದಿನ ದರದಲ್ಲಿಯೇಋ ಕೋಳಿ ಮತ್ತು ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+