ಓ ಮನಸೇ...ಡಿಸೆಂಬರ್ 14ಕ್ಕೆ ಮತ್ತೆ ಬರ್ತಿದೆ
ಬೆಂಗಳೂರು, ಡಿ.9: 'ಸಾಫ್ಟ್' ಬರಹಗಳ ಪತ್ರಿಕೆ ಓ ಮನಸೇ ರಿಲೀಸ್ ಮಾಡ್ತೀನಿ ಎಂದು ಹೇಳಿದ್ದ ಕನ್ನಡದ ಯುವ ಮನಸ್ಸನ್ನು ಕದ್ದ ರವಿ ಬೆಳೆಗೆರೆ ಅವರು ಜನಶ್ರೀ ವಾಹಿನಿಗೆ ಹೋಗಿ ಕೂತ ಮೇಲೆ ಎಲ್ಲವನ್ನು ಮರೆತು ಬಿಟ್ಟರು ಎಂದು ಅಭಿಮಾನಿಗಳು ಗೊಣಗುವುದರೊಳಗೆ ರವಿ ಅವರಿಂದ ಉತ್ತರ ಬಂದಿದೆ.
ಓ ಮನಸೇ ಆರಂಭಗೊಳ್ಳುವುದು ಖಾತ್ರಿಯಾಗಿತ್ತು. ಆದರೆ, ಸೆಪ್ಟೆಂಬರ್ ತಿಂಗಳಿನಲ್ಲಿ ಓದುಗರ ಕೈ ಸೇರಬೇಕಿದ್ದ ಪತ್ರಿಕೆ ಈಗ ಡಿಸೆಂಬರ್ ತಿಂಗಳಿನಲ್ಲಿ ಖಂಡಿತವಾಗಿ ಲೋಕಾರ್ಪಣೆಗೊಳ್ಳುತ್ತಿದೆಯಂತೆ.
ಹಿರಿಯ ಪತ್ರಕರ್ತ ಉದಯ ಮರಕಿಣಿ ಅವರ ಸಂಪಾದಕತ್ವದಲ್ಲಿ ಓ ಮನಸೇ ಮತ್ತೆ ಪ್ರಕಟಣೆಯಾಗುತ್ತಿದೆ. ಬೆಂಗಳೂರಿನ ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯಲ್ಲಿ ಡಿ.14 ರಂದು ಲೋಕಾರ್ಪಣೆಯಾಗುತ್ತಿದೆ ಎಂದು ರವಿ ಬೆಳೆಗೆರೆ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಇದರ ಜತೆಗೆ ದೇಶದಾದ್ಯಂತ ಚರ್ಚೆಗೊಳಗಾದ ಆರುಷಿ ಹೇಮರಾಜ್ ಹತ್ಯೆ ರಹಸ್ಯಗಳ ಬಗ್ಗೆ ಬೆಳಕು ಚೆಲ್ಲುವ ಕೃತಿ ಕೂಡಾ ಅಂದೇ ಬಿಡುಗಡೆ ಭಾಗ್ಯ ಕಾಣುತ್ತಿದೆ.

ಓ ಮನಸೆ ಮುಖ್ಯ ಲೇಖನ ಬಗ್ಗೆ ಊಹಿಸಿ ಎಂದು ಅಧಿಕೃತ ಫೇಸ್ ಬುಕ್ ಪುಟದಲ್ಲಿ ಕೇಳಲಾಗಿದೆ ಅದರ ವಿವರ ಕೆಳಗಿದೆ. ಈ ಹಿಂದೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 'ಈ ವಾರದ ಮನಸಿನ ಮಾತು' ಅಂಕಣದಲ್ಲಿ ರವಿ ಬೆಳೆಗೆರೆ ಹೇಳಿದ್ದೇನು ಎಂಬುದನ್ನು ಇಲ್ಲಿ ಓದಿ.
ಮನಸ್ಸು ಕೂಡಾ ರಜಾ ಹಾಕುತ್ತಾ? ಹಾಕುತ್ತೆ ಅಂತ ನಾವು ಪ್ರೂವ್ ಮಾಡಿದೀವಿ. 'ಓ ಮನಸೇ..' ಪತ್ರಿಕೆ ನಾಲ್ಕುವರ್ಷದ ಗ್ಯಾಪ್ ನಂತರ ನಾಡಿದ್ದು ಡಿಸೆಂಬರ್ 14ಕ್ಕೆ ಮತ್ತೆ ಬರ್ತಿದೆ. ನಮಗಂತೂ ಸಡಗರದ ಜ್ವರ ಹಿಡಿದಿದೆ. ಈ ತಂಪುಹೊತ್ತಲ್ಲಿ ನಿಮಗೊಂದು ಪ್ರಶ್ನೆ.

'ಓ ಮನಸೇ..' ಯ ಮುಖ್ಯ ಲೇಖನ ಯಾವ ವಿಷಯದ ಬಗ್ಗೆ ಇರಬಹುದು? ಸುಮ್ಮನೇ ಗೆಸ್ ಮಾಡಿ. ನಿಮ್ಮ ಕೆಲಸ ಹಗುರ ಮಾಡೋದಕ್ಕೆ ನಾವೇ ನಾಲ್ಕು ಕ್ಲೂ ಕೊಡ್ತೀವಿ. 1. ಈ ಲೇಖನದಿಂದ ಯುವ ಪೀಳಿಗೆಗೆ ಬೇಜಾನ್ ಉಪಯೋಗ ಇದೆ. 2. ಜಾಬ್ ಸ್ಯಾಟಿಸ್ಪಾಕ್ಷನ್ ಮತ್ತು ಜೇಬು ಸ್ಯಾಟಿಸ್ಪಾಕ್ಷನ್ ಎರಡೂ ಏಕಕಾಲಕ್ಕೆ ಲಭ್ಯ. 3. ಜನ ನಿಮ್ಮನ್ನು ಕಣ್ಣರಳಿಸಿ ನೋಡಬಹುದು ಅಥವಾ ಬಾಯ್ತುಂಬಾ ಟೀಕಿಸಬಹುದು. 4. ಮಾತು ಬಂಗಾರ ಅನ್ನುವ ನಾಣ್ಣುಡಿ ನಿಮಗೆ ಪದೇಪದೇ ನೆನಪಾಗಬಹುದು.












Click it and Unblock the Notifications