Darshan Thoogudeepa Case: ನಟ ದರ್ಶನ್ & ಪವಿತ್ರಾಳ ಸಿಮ್ ರಹಸ್ಯ: ಇಬ್ಬರಿಗೆ ರುಬ್ಬಿದ ಪೊಲೀಸರು
Darshan Thoogudeepa Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಮತ್ತು ಪಟಾಲಂ ಗ್ಯಾಂಗ್ ಜೈಲು ಪಾಲಾಗಿದೆ. ಇನ್ನೂ ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮತ್ತೊಂದೆಡೆ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರ ನಡುವೆಯೇ ಸಿಮ್ ಸೀಕ್ರೆಟ್ ಬಗ್ಗೆ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಮಹತ್ವದ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಪೊಲೀಸರು ದರ್ಶನ್ ಹಾಗೂ ಪವಿತ್ರಾಳ ಸಿಮ್ ಸೀಕ್ರೆಟ್ ಬಯಲು ಮಾಡುವುದಕ್ಕೆ ಮುಂದಾಗಿದ್ದಾರೆ.
ಕೊಲೆ ನಂತರ ಇವರಿಬ್ಬರೂ ಸಿಮ್ ಬದಲಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ಮನೋಜ್ ಹಾಗೂ ಹೇಮಂತ್ ಎಂಬುವವರಿಗೆ ಪೊಲೀಸರು ಡ್ರಿಲ್ ಶುರು ಮಾಡಿದ್ದಾರೆ. ನೀವು ಕೊಟ್ಟ ಸಿಮ್ ಯಾರ ಹೆಸರಿನಲ್ಲಿದೆ, ಯಾವ ಕಾರಣಕ್ಕೆ ಕೊಟ್ಟಿದ್ದೀರಿ ಅಂತೆಲ್ಲಾ ಪ್ರಶ್ನಿಸಿ ಬಾಯ್ಬಿಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇವೆಲ್ಲ ಘಟನೆಗಳ ನಡುವೆ ಪಟ್ಟಣಗೆರೆ ಶೆಡ್ನಲ್ಲಿದ್ದ ಸಿಸಿಟಿವಿಯ ರಿಟ್ರೀವ್ ವಿಡಿಯೋಗಳೇ ದರ್ಶನ್ ಮತ್ತು ಗ್ಯಾಗ್‌ಗೆ ಕಂಟಕ ಆಗುವ ಸುಳಿವು ಇದೆ. ಕೊಲೆ ನಡೆದ ರಾತ್ರಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಜೂನ್ 8 ರಂದು ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆಗೆ ಒಳಗಾಗಿದ್ದ ರೇಣುಕಾಸ್ವಾಮಿ ಒದ್ದಾಡುತ್ತಿದ್ದರಂತೆ. ಆದ್ದರಿಂದ ಶೆಡ್‌ನಿಂದ ಸೆಕ್ಯೂರಿಟಿ ರೂಮ್‌ಗೆ ಸ್ವಾಮಿಯನ್ನು ಕರೆತಂದಿದ್ದರಂತೆ. ಬಳಿಕವೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದನಂತೆ ಎಂದು ತಿಳಿದುಬಂದಿದೆ.
ದತ್ತಾಂಶಗಳ ರಿಟ್ರೀವ್: ಪವಿತ್ರಾ ಗೌಡಗೆ ಅಶ್ಲೀಲ ಸಂದೇಶದ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ನಟ ದರ್ಶನ್ & ಗ್ಯಾಂಗ್ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಹೋಗಿ ಭೀಕರವಾಗಿ ಹತ್ಯೆಗೈದಿತ್ತು ಎನ್ನುವ ಮಾಹಿತಿ ತಿಳಿದುಬಂದಿತ್ತು. ಬಳಿಕ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಪುಟೇಜ್‌ಗಳು ಸಿಗದಂತೆ ದರ್ಶನ್ ಗ್ಯಾಂಗ್ ಡಿಲೀಟ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೆ, ಪವಿತ್ರಾ ಗೌಡ ಮನೆ, ರೆಸ್ಟೋರೆಂಟ್, ದರ್ಶನ್ ಮನೆಯ ಸಿಸಿಟಿವಿ ಪುಟೇಜ್‌ಗಳು ಡಿಲೀಟ್ ಆಗಿವೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ, ಕೋರ್ಟ್ ಮಾಹಿತಿ ಮೇರೆಗೆ ದರ್ಶನ್ ಮನೆ, ಶೆಡ್, ಪವಿತ್ರಾ ಗೌಡ ಮನೆ ಹಾಗೂ ರೆಸ್ಟೋರೆಂಟ್‌ನ ಸಿಸಿಟಿವಿಯ ಡಿವಿಆರ್ ಅನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸುವ ಮೂಲಕ ಡಿಲೀಟ್ ಆದಂತಹ ದತ್ತಾಂಶಗಳನ್ನು ರಿಟ್ರೀವ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಇದೀಗ ಮೊದಲೇ ಡಿಜಿಟಲ್ ಯುಗ.. ಡಿಲೀಟ್ ಮಾಡಿದರೆ ಆ ವಿಡಿಯೋಗಳು ಮತ್ತೆ ಸಿಗುವುದಿಲ್ಲ ಎಂದು ಭಾವಿಸುವುದು ತಪ್ಪು ಕಲ್ಪನೆ. ಡಿಲೀಟ್ ಆದಂತಹ ಎಲ್ಲವನ್ನೂ ಮತ್ತೆ ಮರಳಿ ಪಡೆಯುವ ತಂತ್ರಜ್ಞಾನವು ಕೂಡ ಇದೆ. ಈ ಮೂಲಕ ಪೊಲೀಸರು ಸಿಸಿಟಿವಿಯ ಡಿವಿಆರ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ದರ್ಶನ್ & ಗ್ಯಾಂಗ್ ಮಾಡಿರುವ ಕಳ್ಳಾಟವನ್ನು ಬಯಲು ಮಾಡಲು ಮುಂದಾಗಿದೆ.
ಒಂದು ವೇಳೆ ನಟ ದರ್ಶನ್ ಸಾಕ್ಷ್ಯನಾಶ ಮಾಡಲು ಮುಂದಾಗಿದ್ದಾರೆ ಎನ್ನುವುದು ಸಾಬಿತಾದರೆ, ಕುಣಿಕೆ ಮತ್ತಷ್ಟು ಬಿಗಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಸಾಕ್ಷ್ಯ ನಾಶ ಕೇಸ್ ಕೂಡ ದಾಖಲಾಗಲಿದೆ. ನಟ ದರ್ಶನ್ ಚಾಪೆ ಕೆಳಗೆ ತೂರಲು ಪ್ರಯತ್ನಿಸಿದರೆ, ಪೊಲೀಸರು ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications