Independence Day Security: ಶಂಕಿತ ಉಗ್ರರ ಬಂಧನ ಹಿನ್ನೆಲೆ ಸ್ವಾತಂತ್ರೋತ್ಸವ ಭದ್ರತೆಗಾಗಿ ಪೊಲೀಸರ ಉನ್ನತ ಸಭೆ, ಚರ್ಚೆ
ಬೆಂಗಳೂರು, ಜುಲೈ 21: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪೋಟಕ್ಕೆ ಭಾರಿ ಸಂಚು ರೂಪಿಸಿದ್ದರಿಂದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಸುಮಾರು 25 ದಿನಗಳ ಮೊದಲೇ ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಭದ್ರತೆಗಾಗಿ ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಹಲವೆಡೆ ಈಗಾಗಲೇ ಕಟ್ಟೆಚ್ಚರ ಸಹ ವಹಿಸಲಾಗಿದೆ.
ಇತ್ತೀಚೆಗೆ ಶಂಕಿತ ಉಗ್ರರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅಲ್ಲದೇ ಸಜೀವ ಬಾಂಬ್, ಗಂಡು, ಪಿಸ್ತೂಲ್‌ಗಳು ಸೇರಿದಂತೆ ಕೆಲವು ಸ್ಪೋಟಕ ವಸ್ತು ಜಪ್ತಿ ಮಾಡಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ ರಕ್ಷಣೆ ವಿಚಾರದಲ್ಲಿ ಇದು ಸಾಕಷ್ಟು ಸುದ್ದಿ ಮಾಡಿತ್ತು. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಮಹತ್ವದ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಇದೆಲ್ಲ ಕಾರಣಗಳಿಂದಾಗಿ ರಾಜ್ಯದ ಜನರು ಹಾಗೂ ಸ್ವಾತಂತ್ರ್ಯೋತ್ಸವಕ್ಕೆ ಯಾವುದೇ ಅಡ್ಡಿಯಾಗದಂತೆ ನಡೆಸಲು ಹಿರಿಯ ಪೊಲೀಸರು ಸಭೆ ನಡೆಸಿದರು. ಸಾಮಾನ್ಯವಾಗಿ ಆಗಸ್ಟ್ 15 ಸಂಭ್ರಮಾಚರಣೆಗೆ ಹತ್ತು ದಿನ ಮೊದಲು ನಡೆಯುತ್ತಿದ್ದ ಪೊಲೀಸ್ ಸಭೆ ಈ ಭಾರಿ 25 ದಿನ ಮೊದಲು ನಡೆದಿದೆ. ಈ ವೇಳೆ ಭದ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.
ಸಭೆಯಲ್ಲಿ ನಗರ ಪೊಲೀಸ್ ಕಮಿಷನರ್, ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ ವಿಭಾಗದ ಜಂಟಿ ಅಯುಕ್ತರು, ಡಿಸಿ, ಸಾರ್ವಜನಿಕ ಅಧಿಕಾರಿಗಳು ಸಮ್ಮುಖದಲ್ಲಿ ಸಭೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವದ ಭದ್ರತೆ ಕುರಿತು ಚರ್ಚಿಸಿದ್ದಾರೆ. ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಸಜೀವ ಗ್ರೆನೇಡ್ ಪತ್ತೆ: ವಿವಿಧೆಡೆ ಕಟ್ಟೆಚ್ಚರ
ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಬಳಿಕ ದಾವಣಗೆರೆಯಲ್ಲೂ ಗುರುವಾರ ಮತ್ತೊಬ್ಬ ಶಂಕಿತ ಉಗ್ರನ ಬಂಧನವಾಗಿದೆ. ಇದರಿಂದ ಬೆಂಗಳೂರು ಮಾತ್ರವಲ್ಲದೇ ಇಡಿ ರಾಜ್ಯದಲ್ಲಿ ಆತಂಕ ಮನೆ ಮಾಡಿದೆ. ಸುರಕ್ಷತೆಯ ಪ್ರಶ್ನೆ ಎದ್ದಿದೆ. ಅಲ್ಲದೆ ಬಂಧನ ಬಳಿಕ 4 ಸಜೀವ ಗ್ರೆನೆಡ್ ಪತ್ತೆಯಾಗಿದೆ. ಹೀಗಾಗಿ ಪೊಲೀಸರು ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದ್ದಾರೆ.

ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ತೀವ್ರ ನಿಗಾ ಇಡಲಾಗಿದೆ. ಅಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿಜಯಪುರ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಬುಧವಾರವೇ ತಪಾಸಣೆ ಹೆಚ್ಚಿಸಲಾಗಿದೆ. ಶ್ವಾನದಳದಿಂದ ಪರಿಶೀಲಿಸಲಾಗಿದ್ದು, ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ, ಅನುಮಾನಾಸ್ಪದ ಬ್ಯಾಗ್‌ಗಳು ಕಂಡು ಬಂದರೆ ಕೂಡಲೇ ಪರಿಶೀಲಿಸಲಾಗುತ್ತಿದೆ.












Click it and Unblock the Notifications