Duniya Vijay: ಸಂಬಂಧವೇ ಇರದ ಆರೋಪಿಯ ಜಾಮೀನಿಗೆ ಸಹಕರಿಸಿದ ನಟ ದುನಿಯಾ ವಿಜಯ್‌ಗೆ ಸಂಕಷ್ಟ!
ಬೆಂಗಳೂರು, ನವೆಂಬರ್ 17: ಸ್ಯಾಂಡಲ್‌ವುಡ್ ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಅವರು ಯಾರಿಗಾದರೂ ತೊಂದರೆ ಕಂಡು ಬಂದಲ್ಲಿ ಮೊದಲು ಅವರಿರುತ್ತಾರೆ. ಇತ್ತೀಚೆಗೆ ನಿರ್ದೇಶಕರೊಬ್ಬರ ಸಾವಿನ ಸಂದರ್ಭದಲ್ಲಿ ಮುಂದೆ ನಿಂತು ಎಲ್ಲ ಕಾರ್ಯ ಮಾಡಿದ್ದರು. ದುನಿಯಾ ವಿಜಯ್ ಅವರ ಇಂತಹ ಮಾನವೀಯತೆ ಕಾರ್ಯವೇ ಅವರಿಗೀಗ ಸಂಕಷ್ಟ ತಂದೊಡ್ಡಿದೆ. ಪೊಲೀಸರು ನೋಟಿಸ್ ನೀಡಿ ಅವರನ್ನು ವಿಚಾರಣೆಗೆ ಕರೆಯುವ ಸಿದ್ಧತೆಯಲ್ಲಿದ್ದಾರೆ.
ಹೌದು... ಆರೋಪಿ ಸುರೇಶ್ ಸೇರಿದಂತೆ ಒಟ್ಟು 10 ಮಂದಿಗೆ ಜೈಲಿನಿಂದ ಬಿಡುಗಡೆ ಆಗಲು ಜಾಮೀನಿಗೆ ದುನಿಯಾ ವಿಜಯ್ ಅವರು ಸಹಕರಿಸಿದ್ದರು. ಕಳೆದ 10 ತಿಂಗಳು ಹಿಂದಷ್ಟೇ ಆ ಆರೋಪಿಗೆ ಶೂರಿಟಿ ಕೊಟ್ಟು ಜಾಮೀನಿನ ಮೇಲೆ ಬಿಡಿಸಿದ್ದರು. ಆದರೆ ಆರೋಪಿ ಸುರೇಶ್ ಜೈಲಿನಿಂದ ಬಂದು ಇದೇ ನವೆಂಬರ್ 11ರಂದು ಬಾಗಲೂರಿನಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದಾನೆ. ಜೋಡಿ ಹತ್ಯೆ ಮಾಡಿದ್ದರಿಂದ ಆತನನ್ನು ಪೊಲೀಸರು ಬಂಧಿಸಿದ್ದರು.

ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ನಟ, ನಿರ್ದೇಶಕ ದುನಿಯಾ ವಿಜಯ್ ಅವರೇ ಕೆಲವು ತಿಂಗಳ ಹಿಂದೆ ಆರೋಪಿಗೆ ಸುರೇಶ್ ಜಾಮೀನಿಗೆ ಶೂರಿಟಿ ಕೊಟ್ಟಿದ್ದರು ಎಂಬುದು ಗೊತ್ತಾಗಿದೆ. ಪ್ರಕರಣ ತನಿಖೆ ಮುಂದುವರಿದ ಭಾಗವಾಗ ಜೈಲಿನಿಂದ ಬಿಡುಗಡೆಯಾಗಲು ಸಹಕರಿಸಿದ್ದ ಕಾರಣದಿಂದ ದುನಿಯಾ ವಿಜಯ್ ಅವರನ್ನು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ. ಯಾವ ಕ್ಷಣದಲ್ಲಾದರೂ ನೋಟಿಸ್ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.
ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ: ಆಗಿದ್ದೇನು?
ನಟ ದುನಿಯಾ ವಿಜಯ್ ಅವರ ಸಹಾಯರದಿಂದ ಹತ್ತು ತಿಂಗಳ ಹಿಂದೆ ಆರೋಪಿ ಸುರೇಶ್ ಸೇರಿದಂತೆ ಹತ್ತು ಮಂದಿ ಆರೋಪಿಗಳು ಜೈಲಿನಿಂದ ಬಿಡುಗಡೆ ಆಗಿದ್ದರು. ಇತ್ತೀಚೆಗೆ ಈ ಸುರೇಶ್ ತನ್ನೊಂದಿಗೆ ಕೆಲಸ ಮಾಡುವ 50 ವರ್ಷದ ಮಂಜುನಾಥ್ ಹಾಗೂ 55 ವರ್ಷದ ನಾಗೇಶ್ ಅವರನ್ನು ಕೊಂದಿದ್ದಾನೆ. ಈ ಜೋಡಿ ಸಾವಿಗೆ ಕಾರಣವಾದ ಈತನನ್ನು ಪೊಲೀಸರು ಬಂಧಿಸಿ ವಿಚರಣೆ ಮಾಡಿದ್ದಾರೆ. ಆಗ ಈತನನ್ನು ಬಿಡಿಸಿದ್ದ ನಟ, ನಿರ್ದೇಶಕ ದುನಿಯಾ ವಿಜಯ್ ಎಂಬುದು ಗೊತ್ತಾಗಿದೆ. ಆದರೆ ಆರೋಪಿ ಹೇಳಿಕೆ ಕೇಳಿ ಪೊಲೀಸರಿಗೆ ಅಚ್ಚರಿ ಉಂಟಾಗಿದೆ.
ಅದೇನೆಂದರೆ, ಜೋಡಿ ಸಾವಿನ ಬಳಿಕ ವಶಕ್ಕೆ ಪಡೆದ ಪೊಲೀಸರು ನಿನ್ನನ್ನು ನಟ ದುನಿಯಾ ವಿಜಯ್ ಬಿಡಿಸಿದ್ದೇಕೆ ಎಂಬ ಪ್ರಶ್ನೆಗೆ ಆರೋಪಿಗಳು, ನಮ್ಮನ್ನು ಬಿಡಿಸಿದ್ದು ಯಾರು ಎಂಬುದೇ ನಮಗೆ ಗೊತ್ತಿಲ್ಲ. ಅವರು ನಮ್ಮನ್ನು ಏಕೆ ಬಿಡಿಸಿದರು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಒಬ್ಬ ನಟ ಮಾನವೀಯತೆಯಿಂದ ತಮಗೆ ಸಹಾಯ ಮಾಡಿದರೂ ಆ ಬಗ್ಗೆ ಕೃತಜ್ಞತೆ ಇಲ್ಲದೇ ನಡೆದುಕೊಂಡಿದ್ದಾರೆ.
ಈ ಮಾನವೀಯ ಗುಣವೇ ನಟ ದುನಿಯಾ ವಿಜಯ್ ಅವರಿಗೆ ತೊಂದರೆ ತಂದೊಡ್ಡಿದೆ. ಇದೆಲ್ಲ ನೋಡಿದರೆ ನಟಿನಿಗೂ ಹಾಗು ಆರೋಪಿಗೆ ಸಂಬಂಧವೇ ಇಲ್ಲ ಎಂಬುದು ಗೊತ್ತಾಗುತ್ತದೆ. ಹಾಗಾದರೆ ಬಿಡಿಸಿದ್ದೇಕೆ? ಎಂಬಿತ್ಯಾದಿ ಮಾಹಿತಿ ಪಡೆಯಲು ಪೊಲೀಸರ ದುನಿಯಾ ವಿಜಯ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ವಿಚಾಯರ ನಡೆಸಬಹುದು ಎಂದು ತಿಳಿದು ಬಂದಿದೆ.












Click it and Unblock the Notifications