ಗಣೇಶೋತ್ಸವವ ಹಿನ್ನೆಲೆ ಈದ್ಗಾ ಮೈದಾನನ ಸುತ್ತಲು ಭಾರಿ ಭದ್ರತೆ
ಬೆಂಗಳೂರು,ಆಗಸ್ಟ್ 30: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪಿಸಿ, ಹಬ್ಬ ಆಚರಣೆ ವಿಚಾರವಾಗಿ ಇಂದು ತೀರ್ಪು ಹೊರ ಬೀಳಲಿದೆ. ಈ ಹಿನ್ನೆಲೆ ಮೈದಾನದ ಸುತ್ತ ಪೊಲೀಸರು ಬಿಗಿ ಭದ್ರತೆ ಮಾಡಿಕೊಂಡಿದ್ದು. ಗಣೇಶ ಕೂರಿಸಲು ಅನುಮತಿ ಸಿಕ್ಕರು ಸಿಗದಿದ್ದರು ಗಲಾಟೆಯಾಗುವ ಸನ್ನಿವೇಶ ಎದುರಾಗಬಹುದು ಈ ಹಿನ್ನೆಲೆ ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 1240 ಮಂದಿ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಯಾಗಿದ್ದಾರೆ. ಇಬ್ಬರು ಡಿಸಿಪಿ, 21 ಜನ ಎಸಿಪಿ, 50 ಜನ ಇನ್ಸ್'ಪೆಕ್ಟರ್, 120 ಮಂದಿ RAF ಸಿಬ್ಬಂದಿ. ಆರು KSRP ತುಕಡಿ ಸೇರಿ 1240 ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಯಾಗಿದ್ದಾರೆ.
ಈ ಹಿನ್ನೆಲೆ ಚಾಮರಾಜಪೇಟೆ ಮೈದಾನ ಸುತ್ತಾಮುತ್ತ ಪೊಲೀಸರು ರೂಟ್ ಮಾರ್ಚ್ ನಡೆಸಿದರು .ಸದ್ಯ ಚಾಮರಾಜಪೇಟೆ ಮೈದಾನದ ಸುತ್ತಲೂ ಬ್ಯಾರೀಕೇಡ್ ಹಾಕಿದ್ದು, ಒಂದು ಕಡೆ ಮಾತ್ರ ಮೈದಾನಕ್ಕೆ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ.

ಪೊಲೀಸರು ಭದ್ರತೆಗೆ ಎಷ್ಟು ಸಿಬ್ಬಂದಿ ನಿಯೋಜನೆ
3 ಡಿಸಿಪಿ , 21 ಎಸಿಪಿ, 47 ಇನ್ಸಪೆಕ್ಟರ್,130 ಪಿಎಸ್ ಐ, 126 ಎಎಸ್ ಐ900 ಕಾನ್ಸ್‌ಟೇಬಲ್, ಆರ್ ಎ ಎಫ್ -120, ಡಿಸ್ವಾಟ್- 100, ಸೇರಿ 1500 ಪೊಲೀಸ್ರು ಭದ್ರತೆಗೆ ನಿಯೋಜನೆಯಾಗಿದ್ದಾರೆ. ಯಾವುದೇ ರೀತಿಯಲ್ಲು ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕಾಪಾಡುವ ನಿಟ್ಟಿನಲ್ಲಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಇನ್ನೂ ಮುಂಜಾಗ್ರತ ಕ್ರಮವಾಗಿ ಇಗಾಗಲೇ ಪಶ್ಚಿಮ ವಿಭಾಗದಲ್ಲಿ ರೌಡಿಗಳ ಮನೆ ಮೇಲೆ ರೇಡ್ ಮಾಡಿ ಸರ್ಚ್ ಮಾಡಿದ್ದು, ಪರಾರಿಯಾದ ರೌಡಿಗಳನ್ನ ಸಹ ಪತ್ತೆ ಮಾಡಿ ವಾರ್ನಿಂಗ್ ಪೊಲೀಸರು ವಾರ್ನ್ ಮಾಡಿ ಸೆಕ್ಷನ್ 110 ಅಡಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಭದ್ರತೆಯಲ್ಲಿ ವಿಶೇಷವಾಗಿ ಆರ್ ಎಎಫ್ ಟೀಂ ಇದ್ದು, ಡ್ರೋಣ್ ಮೂಲಕ ಬಂದೋಬಸ್ತ್ ಗೆ ಮೈದಾನ ಸುತ್ತಾ ನಿಗಾವಹಿಸಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಖಾ ಸುಮ್ಮನೆ ಊಹಾಪೋಹ ಸುದ್ದಿಗಳ ಹರಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತರು ಹೇಳಿದ್ದೇನು?
ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮುಂಬರುವ ಗಣೇಶ ಹಬ್ಬದ ವಿಚಾರವಾಗಿ ಚಾಮರಾಜಪೇಟೆ ಸುತ್ತ ಮುತ್ತ ಯಾವುದೇ ಆಹಿತಕರ ಘಟನೆ ಆಗಬಾರದು. ಹೀಗಾಗಿ ಸೂಕ್ತ ರೀತಿಯ ಭದ್ರತೆಯನ್ನು ಮಾಡಿಕೊಂಡಿದ್ದೇವೆ. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯನ್ನ ಯಶಸ್ವಿಯಾಗಿ ಮಾಡಿದ್ದೇವೆ. ಆಗ ಯಾವುದೇ ರೀತಿಯ ಆಹಿತಕರ ಘಟನೆ ಆಗಿರಲಿಲ್ಲ. ಈಗಲೂ ನಮಗೆ ಸಾರ್ವಜನಿಕರ ಮೇಲೆ ಈಗಲೂ ಯಾವುದೇ ರೀತಿಯ ಆಹಿತಕರ ಘಟನೆ ಆಗಲ್ಲ, ಈಗಾಗಲೇ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ಮಾಡಿ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸರು ಈಗಾಗಲೇ ರೂಟ್ ಮಾರ್ಚ್ ಮಾಡಿದ್ದಾರೆ.

ಸಾರ್ವಜನಿಕರಿಗೆ ಧೈರ್ಯ ನೀಡಲು, ಹಾಗೂ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲು ರೂಟ್ ಮಾರ್ಚ್ ಮಾಡಿದ್ದೆವೆ. ಮೂರು ದಿನಗಳ ಕಾಲ ಈ ಭಾಗದಲ್ಲಿ ಭಾರಿ ಭದ್ರತೆ ಇರಲಿದೆ. ಈ ಪ್ರದೇಶದಲ್ಲಿ ನಿಗಾ ಇಡಲು ಡ್ರೋನ್ ಕೂಡ ಬಳಕೆ ಮಾಡಲಾಗುತ್ತೆ, ಹೀಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಳ್ತೆವೆ. ವದಂತಿಗಳಿಗೆ ಜನರು ಕಿವಿ ಕೊಡಬಾರದು. ವದಂತಿಗಳು ಬಂದಾಗ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ತಾರೆ. ಈ ಗಣೇಶೋತ್ಸವ ಶಾಂತಿಯುತವಾಗಿ ಆಗುತ್ತೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.












Click it and Unblock the Notifications