ರೇಣುಕಾಸ್ವಾಮಿ-ಪವಿತ್ರಾ ಗೌಡ ನಡುವೆ ನಡೆದ ಸಂದೇಶಗಳೇನು? ಪೊಲೀಸರು ಇನ್ಸ್ಟಾಗ್ರಾಂಗೆ ಪತ್ರ ಬರೆಯಲು ಮುಂದಾಗಿದ್ದೇಕೆ?
Actor Darshan Arrest case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ ಪಟಾಲಂ ಗ್ಯಾಂಗ್ ಈಗಾಗಲೇ ಜೈಲು ಸೇರಿದೆ. ಇನ್ನು ಇಷ್ಟಕ್ಕೆಲ್ಲಾ ಕಾರಣವಾದ ರೇಣುಕಾಸ್ವಾಮಿ-ಪವಿತ್ರಾ ಸಂದೇಶಗಳನ್ನು ವೀಕ್ಷಿಸಲು ಇನ್ಸ್ಟಾಗ್ರಾಂಗೆ ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ನಡೆಯಲು ಪವಿತ್ರಾ ಗೌಡಗೆ ಕಳುಹಿಸಿದ್ದ ಅಶ್ಲೀಲ ಸಂದೇಶ ಎಂದು ತಿಳಿದುಬಂದಿತ್ತು. ಒಂದು ವೇಳೆ ಅಶ್ಲೀಲ ಸಂದೇಶದ ಕಳುಹಿಸಿದ್ದರೆ ರೇಣುಕಾಸ್ವಾಮಿಗೆ ಕಾನೂನು ರೀತಿಯಲ್ಲಿ ಎಚ್ಚರಿಕೆ ನೀಡಿಸಬಹುದಿತ್ತು. ಅದು ಬಿಟ್ಟು ಕೊಲೆ ಮಟ್ಟಕ್ಕೆ ಇಳಿದಿರುವುದು ದೊಡ್ಡ ಅಪರಾಧವೇ ಸರಿ.

ಹಾಗಾದರೆ ರೇಣುಕಾಸ್ವಾಮಿ-ಹಾಗೂ ಪವಿತ್ರಾ ಗೌಡ ನಡುವೆ ನಡೆದ ಏನೆಲ್ಲ ಸಂದೇಶಗಳ ಸಮರ ನಡೆದಿತ್ತು ಎನ್ನುವುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದು, ಇನ್ಸ್ಟಾಗ್ರಾಂಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹಾಗೂ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ನಡುವಿನ ಸಂದೇಶಗಳ ವಿವರ ನೀಡುವಂತೆ ಕೋರಿ ಇನ್‌ಸ್ಟಾಗ್ರಾಂಗೆ ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ.
ನಟಿ ಪವಿತ್ರಾ ಗೌಡ ಫೋನ್ ವಶಪಡಿಸಿಕೊಂಡು ರಿಟ್ರೈವ್ ಮಾಡಲು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ.
ಆದರೆ ರೇಣುಕಾಸ್ವಾಮಿ ಮೊಬೈಲ್ ದತ್ತಾಂಶವನ್ನು ಪಡೆಯಬೇಕಿದೆ. ಆತನನ್ನು ಹತ್ಯೆ ಮಾಡಿದ ಬಳಿಕ ಆತನ ಮೊಬೈಲ್ ಅನ್ನು ಸುಮನಹಳ್ಳಿ ಸಮೀಪದ ಮೋರಿಗೆ ಎಸೆದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಆಗಿನಿಂದ ಪೊಲೀಸರು ರೇಣುಕಾಸ್ವಾಮಿ ಫೋನ್‌ಗಾಗಿ ಸುಮನಹಳ್ಳಿಯ ಅಪಾರ್ಟ್‌ಮೆಂಟ್ ಬಳಿಯ ಮೋರಿಯಲ್ಲಿ ಹುಡುಕಾಟದಲ್ಲಿ ಕಾರ್ಯನಿರತರಾಗಿದ್ದರು. ಆದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆ ಆಗಿಲ್ಲ.
ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಜಯನಗರ ಎಸಿಪಿ ಚಂದನ್ ಈ ತನಿಖೆ ನಡೆಸುತ್ತಿದ್ದು, ತಾಂತ್ರಿಕ ಸಾಕ್ಷ್ಯ ಕಲೆಹಾಕುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಂಗೆ ಪತ್ರ ಬರೆದು ಇಬ್ಬರ ನಡುವೆ ನಡೆದ ಸಂಭಾಷಣೆಯ ಮಾಹಿತಿ ಪಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದು ವೇಳೆ ರೇಣುಕಾಸ್ವಾಮಿ ಮೊಬೈಲ್ ಸಿಕ್ಕರೆ, ಅದರಲ್ಲಿ ಆತ ಪವಿತ್ರಾ ಜೊತೆ ಏನೆಲ್ಲ ಸಂಭಾಷಣೆ ಮಾಡಿದ್ದಾನೆ ಎಂಬ ಬಗ್ಗೆ ತಾಂತ್ರಿಕ ಸಾಕ್ಷ್ಯಗಳು ಸಿಗಲಿವೆ. ಇದು ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಆಗಲಿದ್ದು, ಪೊಲೀಸರಿಗೆ ತುಂನಾ ಸಹಕಾರಿ ಆಗಲಿದೆ.
ಮೊಬೈಲ್ ಪರಿಶೀಲನೆಗೆ ಕೋರ್ಟ್ ಅನುಮತಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮತ್ತೊಂದೆಡೆ . ಇಂದು (ಜೂನ್ 20) ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು, ಅವರನ್ನು ಕೋರ್ಟ್‌ಗೆ ಕರೆದೊಯ್ಯಲಾಗಿತ್ತು. ಇನ್ನು ಈ ನಾಲ್ವರು ಆರೋಪಿಗಳಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಮತ್ತೊಂದೆಡೆ ಇವರೆಲ್ಲರ ಮೊಬೈಲ್ ವೀಕ್ಷಣೆಗೆ ಅನುಮತಿ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶದ ಕಳುಹಿಸಿದ್ದಾರೆ ಎನ್ನುವ ಕಾರಣಕಗಕೆ ಚಿತ್ರದುರ್ಗ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ನಟ ದರ್ಶನ್ ಮತ್ತು ಗ್ಯಾಂಗ್ ಅವರನ್ನು ಭೀಕರವಾಗಿ ಕೊಲೆ ಮಾಡಿದೆ ಎನ್ನುವ ಆರೋಪ ಇತ್ತು. ಈಗಾಗಲೇ ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಇಂದು (ಜೂನ್ 22) ಕೋರ್ಟ್ ಆದೇಶದ ಮೇರೆಗೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ.
ಪೊಲೀಸರು ಕೋರ್ಟ್‌ಗೆ ಆರೋಪಿಗಳ ಮೊಬೈಲ್‌ಗಳ ಪರಿಶೀಲನೆಗೆ ಅನುಮತಿ ನೀಡುವಂತೆ ಕೇಳಿತ್ತು. ಅದರಂತೆಯೇ ಬೆಂಗಳೂರಿನ 5ನೇ ACMM ಕೋರ್ಟ್ ನಟ ದರ್ಶನ್, ವಿನಯ್, ಪ್ರಧೋಶ್ ಮತ್ತು ಧನರಾಜ್ ನಾಲ್ವರ ಮೊಬೈಲ್ ಅನ್‌ಸೀಲ್ ಮಾಡಲು ಒಪ್ಪಿಗೆ ಕೊಟ್ಟಿದೆ. ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಸಾಕ್ಷಿ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ನಟ ದರ್ಶನ್ ಸೇರಿದಂತೆ ಈ ಆರೋಪಿಗಳು ಯಾರ್‍ಯಾರಿಗೆ ಕರೆ ಮಾಡಿದ್ದರು ಹಾಗೂ ಸಚಿವರು, ಶಾಸಕರು, ಪೊಲೀಸ್ ಅಧಿಕಾರಿಗಳಿಗೂ ಕರೆ ಮಾಡಿದ್ದಾರೆ ಎನ್ನುವ ಶಂಕೆಯಿದ್ದು, ಮೊಬೈಲ್ ಪರೀಶೀಲನೆ ಬಳಿಕ ಈ ಎಲ್ಲದರ ಬಗ್ಗೆ ಸತ್ಯ ಹೊರಬೀಳುವ ಸಾಧ್ಯತೆಯಿದೆ.












Click it and Unblock the Notifications