ಅನುಮಾನ: ಬಾಣಂತಿ ಹೆಂಡತಿಯನ್ನು ಕೊಂದು ತಾನು ವಿಷ ಕುಡಿದ ಪೊಲೀಸ್ ಪೇದೆ

ಅನುಮಾನ ಎನ್ನುವ ರೋಗ ಬಾಣಂತಿಯ ಜೀವವನ್ನೇ ಬಲಿ ಪಡೆದಿದೆ, ತನ್ನ ಹೆಂಡತಿಯ ಶೀಲವನ್ನು ಶಂಕಿಸಿದ ಪೊಲೀಸ್ ಪೇದೆಯೊಬ್ಬ ಸಿಟ್ಟಿನಲ್ಲಿ ಬಾಣಂತಿ ಹೆಂಡತಿಯನ್ನೇ ಕೊಂದು ತಾನು ವಿಷ ಕುಡಿದಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಪ್ರತಿಭಾ (24) ಪ್ರಾಣ ಕಳೆದುಕೊಂಡ ದುರ್ದೈವಿ, 11 ದಿನಗಳ ಹಿಂದೆ ಹೊಸಕೋಟೆ ಸಮೀಪದ ಕಳತ್ತೂರು ಗ್ರಾಮದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಚಾಮರಾಜನಗರದ ರಾಮಸಮುದ್ರದ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶೋರ್ ಡಿ (32) ಕ್ರಿಮಿನಾಶಕ ಸೇವಿಸಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

Police Constable Tragically Ends Wifes Life Amidst Fidelity Suspicions

ಆರೋಪಿ ಕಿಶೋರ್ ಕೋಲಾರದ ಟಮಕದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಹೊಸಕೋಟೆ ಪೊಲೀಸರು ಅವರನ್ನು ಬೇರೆ ಆಸ್ಪತ್ರೆಗೆ ರವಾನಿಸಿದ್ದು. ಬಿಡುಗಡೆಯಾದ ನಂತರ ಕಿಶೋರ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ವಿವಾಹ

ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಬ್ರಮಣಿ ಅವರ ಕಿರಿಯ ಪುತ್ರಿ ಪ್ರತಿಬಾ. ಬಿಇ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿದ್ದರು, ಅವರು ನವೆಂಬರ್ 13, 2022 ರಂದು ಕಿಶೋರ್ ಅವರನ್ನು ವಿವಾಹವಾದರು. ಕಿಶೋರ್ ಕೋಲಾರ ಜಿಲ್ಲೆಯ ವೀರಾಪುರದವರಾಗಿದ್ದು ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪೊಲೀಸರು ನೀಡಿರುವ ಹೇಳಿಕೆ ಪ್ರಕಾರ, ಕಿಶೋರ್ ತಮ್ಮ ಪತ್ನಿ ಪ್ರತಿಭಾ ಮೇಲೆ ಅನುಮಾನ ಹೊಂದಿದ್ದರು, ಆಕೆಯ ಮೊಬೈಲ್‌ನಲ್ಲಿ ಮೆಸೇಜ್, ಕರೆ ವಿವರಗಳನ್ನು ಪರಿಶೀಲನೆ ಮಾಡುತ್ತಿದ್ದ, ಅವಳೊಂದಿಗೆ ಸಂದೇಶ ಅಥವಾ ಮಾತನಾಡಿದ ಪ್ರತಿಯೊಬ್ಬ ವ್ಯಕ್ತಿಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ, ಆಕೆ ಒಂದಿಬ್ಬರು ಕಾಲೇಜು ಸಹಪಾಠಿಗಳ ಜೊತೆ ಹತ್ತಿರವಾಗಿದ್ದಳು ಎಂದು ಕಿಶೋರ್ ಆರೋಪಿಸಿದ್ದ.

ಫೋನ್ ಎತ್ತದ್ದೇ ಪ್ರತಿಭಾಗೆ ಮುಳುವಾಯ್ತು

ಭಾನುವಾರ ಸಂಜೆ ಕಿಶೋರ್ ಪ್ರತಿಬಾಗೆ ಕರೆ ಮಾಡಿ ಯಾವುದೋ ಕಾರಣಕ್ಕೆ ನಿಂದಿಸಲು ಆರಂಭಿಸಿದ್ದ. ಪ್ರತಿಭಾ ಅಳುತ್ತಿದ್ದಾಗ ಆಕೆಯ ತಾಯಿ ವೆಂಕಟಲಕ್ಷ್ಮಮ್ಮ ಫೋನ್ ತೆಗೆದುಕೊಂಡು ಕಾಲ್ ಡಿಸ್ಕನೆಕ್ಟ್ ಮಾಡಿದ್ದಾರೆ.

ಅಳುತ್ತಿದ್ದರೆ ಮಗುವಿನ ಆರೋಗ್ಯ ಕೆಡುತ್ತದೆ ಎಂದು ಪ್ರತಿಭಾಗೆ ಸಮಾಧಾನ ಮಾಡಿದ್ದಾರೆ. ಕಿಶೋರ್ ಅವರ ಕರೆಗಳಿಗೆ ಉತ್ತರ ನೀಡದಂತೆ ಪ್ರತಿಭಾಗೆ ಹೇಳಿದ್ದಾರೆ. ಮರುದಿನ ಬೆಳಗ್ಗೆ ಕಿಶೋರ್ ತನಗೆ 150 ಬಾರಿ ಕರೆ ಮಾಡಿರುವುದು ಪ್ರತಿಭಾಗೆ ಗೊತ್ತಾಗಿದೆ. ಈ ಬಗ್ಗೆ ಪ್ರತಿಭಾ ಪೋಷಕರಿಗೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸೋಮವಾರ ಬೆಳಿಗ್ಗೆ 11.30 ರ ಸುಮಾರಿಗೆ ಕಿಶೋರ್ ಪ್ರತಿಭಾ ಅವರ ಪೋಷಕರ ಮನೆಗೆ ಬಂದರು. ಮನೆಗೆ ಬರುವಾಗ ವೆಂಕಟಲಕ್ಷ್ಮಮ್ಮ ತಾರಸಿಗೆ ಹೋಗುತ್ತಿದ್ದರು. ಪ್ರತಿಭಾ ಮತ್ತು ಮಗು ಮನೆಯ ಮೊದಲ ಮಹಡಿಯಲ್ಲಿತ್ತು.
ಕಿಶೋರ್ ಮೊದಲು ಕೀಟನಾಶಕ ಸೇವಿಸಿ ನಂತರ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಾಳನ್ನು ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ವೆಂಕಟಲಕ್ಷ್ಮಮ್ಮ ಕೆಳಗಿಳಿದು ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬರಲಿಲ್ಲ. ಅಪಾಯವನ್ನು ಅರಿತ ಅವರು ಬಡಿಯುವುದನ್ನು ಮುಂದುವರೆಸಿದರು, ಸುಮಾರು ಹೊತ್ತಿನ ಬಾಗಿಲು ತೆಗೆದ ಕಿಶೋರ್ 'ಕೊಂದು ಬಿಟ್ಟೆ, ಅವಳನ್ನು ಕೊಂದು ಬಿಟ್ಟೆ' ಎಂದು ವೆಂಕಟಲಕ್ಷಮ್ಮ ಅವರಿಗೆ ಹೇಳಿ ಪರಾರಿಯಾಗಿದ್ದಾನೆ.

ಕಿಶೋರ್‌ಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಪ್ರತಿಬಾ ತಂದೆ ಸುಬ್ರಮಣಿ ಕೋರಿದ್ದಾರೆ. ತನ್ನ ಮಗಳಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ತಂದೆಯ ದೂರಿನ ಆಧಾರದ ಮೇಲೆ ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+