ಪೇಪರ್ ಕದಿಯೋತರ ಆಫೀಸಲ್ಲಿ ಸಿಸ್ಟಂ ಅಡ್ಮಿನ್ ಮಾಡಿದ್ದೇನು ಗೊತ್ತಾ
ಸಾಮಾನ್ಯವಾಗಿ ಆಫೀಸ್‌ಗಳಲ್ಲಿ ಟಿಶ್ಯೂನೋ, ಪೇಪರ್ ತರ ಸಣ್ಣ ವಸ್ತುಗಳನ್ನು ತೆಗೆದುಕೊಳ್ಳುವುದು ಕಾಮನ್. ಆದರೆ, ಇಲ್ಲೊಬ್ಬ ಆಸಾಮಿ ಪ್ರತಿ ದಿನ ಆಫೀಸ್‌ನಿಂದ ಒಂದೊಂದು ಲ್ಯಾಪ್‌ಟಾಪ್ ಎಗರಿಸಿಕೊಂಡು ಹೋಗಿದ್ದಾನೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಒಬ್ಬ ಲ್ಯಾಪ್‌ಟಾಪ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿರುವ ಆಫೀಸ್‌ವೊಂದರಲ್ಲಿ ಈ ಕಳ್ಳ ಸಿಸ್ಟಂ ಅಡ್ಮೀನ್ ಆಗಿದ್ದ. ಆದರೆ, ಪ್ರತಿ ದಿನ ಇವನು ಲ್ಯಾಪ್‌ಟಾಪ್ ಕದಿದ್ದಾನೆ ಮೊದ ಮೊದಲು ಅವನು ಸಿಸ್ಟಂ ರಿಪೇರಿ ಮಾಡೋಕೆ ತೆಗೆದುಕೊಂಡು ಹೋಗಿರಬೇಕು ಎಂದು ಕೊಂಡಿದ್ದಾರೆ. ಆದರೆ, ಒಂದು ದಿನ..
ಅವನು ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಇವನು ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದದ್ದು ಹಾಗೂ ಅದನ್ನು ಎಗರಿಸಿದ ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಒಂದೊಂದು ಕಂಪನಿಯಲ್ಲೂ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಲ್ಲೇ ಈ ಆಸಾಮಿ ಲ್ಯಾಪ್‌ಟಾಪ್‌ಗಳನ್ನು ಎಗರಿಸಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದು ಹೇಗೆ ?
ಬೆಂಗಳೂರಿನ ವೈಟ್‌ಫೀಲ್ಡ್‌ನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸರಣಿ ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾನೆ. ಪ್ರತಿದಿನ ಕೆಲಸ ಮಾಡುವ ನೆಪದಲ್ಲಿ ಈ ಕಳ್ಳ ಒಂದೊಂದೇ ಲ್ಯಾಪ್‌ಟಾಪ್‌ಗಳನ್ನು ತನ್ನ ಬ್ಯಾಗ್‌ಗೆ ಇಳಿಸಿದ್ದಾನೆ. ಸಿಸ್ಟಂ ಅಡ್ಮೀನು ಬಿಡು ಪಾಪ ಮನೆಯಲ್ಲೂ ಕೆಲಸ ಮಾಡ್ತಿರಬೇಕು. ಏನು ಆರ್ಡವರ್ಕ್ ಗುರು ಇವನ್ದು ಅಂದ್ಕೊಂಡಿದ್ದಾರೆ. ಆದರೆ, ಈ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ. ಈತ ಇಲ್ಲಿಯವರೆಗೂ ಆ ಕಂಪನಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 50 ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದಾನೆ. ಫೆಬ್ರವರಿಯಲ್ಲಿ ಈತ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಾನೆ. ಆದರೆ, ಆಗಸ್ಟ್ ವರೆಗೂ ಕಂಪನಿಯಲ್ಲಿ ಯಾರಿಗೂ ಇವನು ಲ್ಯಾಪ್‌ಟಾಪ್ ಕಳ್ಳತನ ಮಾಡಿರುವುದು ಗೊತ್ತೇ ಆಗಿಲ್ಲ. ಆದರೆ, ಒಮ್ಮೆಗೆ ಈತ ಕೆಲಸಕ್ಕೆ ಬರದೆ ಇರುವುದರಿಂದ ಅನುಮಾನಗೊಂಡ ಕಂಪನಿಯವರು ಲ್ಯಾಪ್‌ಟಾಪ್ ಲೆಕ್ಕ ಹಾಕಿ, ತಲೆ ಮೇಲೆ ಕೈಯೊತ್ತು ಕುಂತಿದ್ದಾರೆ. ಕಳ್ಳ ಬರೋಬ್ಬರಿ 57 ಲ್ಯಾಪ್‌ಟಾಪ್‌ಗಳನ್ನು ಎಗರಿಸಿದ್ದಾನೆ ಎಂದು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ದೂರಿನ ಆಧಾರ ಮೇಲೆ ಪೊಲೀಸರು ಫೀಲ್ಡ್‌ಗೆ ಇಳಿದಿದ್ದಾರೆ.
ಲ್ಯಾಪ್‌ಟಾಪ್ ಕಳ್ಳನ ಸೆರೆಗೆ ರೋಚಕ ಕಾರ್ಯಾಚರಣೆ
ಇನ್ನು ಲ್ಯಾಪ್‌ಟಾಪ್ ಕಳ್ಳನನ್ನು ಪೊಲೀಸರು ರೋಚಕ ಕಾರ್ಯಾಚರಣೆಯ ಮೂಲಕ ಬಲೆಗೆ ಕೆಡವಿದ್ದಾರೆ. ಪಕ್ಕ ಇನ್ಫರ್ಮೇಶನ್‌ನ ಮೇಲೆ ಅವನನ್ನು ತಮಿಳುನಾಡಿನ ಹೊಸೂರಿನಲ್ಲಿ ಲಾಕ್ ಮಾಡಿದ್ದಾರೆ. ಆ ಕಳ್ಳ ತಮಿಳುನಾಡಿನ ಹೊಸೂರಿನ ರಾಘವೇಂದ್ರ ಚಿತ್ರಮಂದಿರದ ಬಳಿ ಸಿಸ್ಟಂ ಆಡ್ಮಿನ್ ಆಗಿ ಕೆಲಸಕ್ಕೆ ಸೇರಿಕೊಂಡು ಯಾರಿಗೂ ಏನು ತಿಳಿಯದಂತೆ ಅಮಾಯಕನಾಗಿ ಕೆಲಸ ಮಾಡಿದ್ದಾನೆ. ಕರ್ನಾಟಕ ಪೊಲೀಸರು ಅಲ್ಲಿಗೆ ಎಂಟ್ರಿ ಕೊಟ್ಟಿದ್ದು ನೋಡಿ ತಮಿಳುನಾಡಿನ ಜನ ಕೂಡ ದಂಗಾಗಿದ್ದಾರೆ.
ಕಳ್ಳನನ್ನು ಬಂಧಿಸಿ, ಬಾಯ್ಬಿಡಿಸಿದ ಮೇಲೆ ಹೌದು ಸಾರ್ ನಾನು 57 ಅಲ್ಲ ಬರೀ 50 ಲ್ಯಾಪ್‌ಟಾಪ್ ಕದ್ದಿದ್ದೀನಿ ಅದರಲ್ಲಿ 45 ಲ್ಯಾಪ್‌ಟಾಪ್‌ಗಳನ್ನು ತಮಿಳುನಾಡಿನ ಹೊಸೂರಿನ ಲ್ಯಾಪ್‌ಟಾಪ್ ರಿಪೇರಿ ಹಾಗೂ ಮಾರಾಟ ಮಾಡುವ ಅಂಗಡಿಯಲ್ಲಿ ಮಾರಾಟ ಮಾಡಿದ್ದೇನೆ. ಬಾಕಿ 5 ಲ್ಯಾಪ್‌ಟಾಪ್ ನನ್ನ ಹತ್ತಿರವೇ ಇದೆ ಎಂದು ಲ್ಯಾಪ್‌ಟಾಪ್‌ಗಳನ್ನು ಪೊಲೀಸರ ಕೈಗೆ ಇಟ್ಟಿದ್ದಾನೆ. ಇನ್ನು ಈ 50 ಲ್ಯಾಪ್‌ಟಾಪ್‌ಗಳ ಬೆಲೆ ಬರೋಬ್ಬರಿ 22 ಲಕ್ಷ ರೂಪಾಯಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications