Bengaluru: ಸಹದ್ಯೋಗಿ ಮೇಲಿನ ಸಿಟ್ಟಿನಿಂದ ಕಂಪನಿಗೆ ಬಾಂಬ್ ಬೆದರಿಕೆ ಹಾಕಿದ್ದ ನೌಕರನ ಬಂಧನ, ಘಟನೆ ಮಾಹಿತಿ?
ಬೆಂಗಳೂರು, ಜೂನ್ 14: ಸಿಲಿಕಾನ್ ಸಿಟಿ ಬೆಂಗಳೂರಿನ ಕಂಪನಿಯೊಂದರಲ್ಲಿ ಸಹದ್ಯೋಗಿ ಒಬ್ಬರ ಮೇಲಿನ ಸಿಟ್ಟಿನಿಂದಾಗಿ ಉದ್ಯೋಗಿಯೊಬ್ಬ ತನ್ನ ಕಂಪನಿಗೇ ಹುಸಿ ಬಾಂಬ್ ಕರೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಸದ್ಯ ಆ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಉದ್ಯೋಗಿ ಪ್ರಸಾದ್ ನವನೀತ್ (25) ಮೂಲತಃ ಕೇರಳದವನಾಗಿದ್ದು, ಸದ್ಯಕ್ಕೆ ಆತ ಬೈಯಪ್ಪನಹಳ್ಳಿಯಲ್ಲಿ ವಾಸಿಸುತ್ತಿದ್ದಾನೆ. ಈತನೇ ಹುಸಿ ಬಾಂಬ್ ಕರೆ ಮಾಡಿದ್ದಾನೆ. ಬೆಂಗಳೂರಿನ ಬೆಳ್ಳಂದೂರಿನ ಇಕೋಸ್ಪೇಸ್‌ನಲ್ಲಿರುವ ಎಂಎನ್‌ಸಿ ಕಂಪನಿಗೆ ಮಂಗಳವಾರ ಬಾಂಬ್ ಕರೆ ಬಂದಿತ್ತು. ಹೀಗಾಗಿ ಕೆಲ ಕಾಲ ಕಚೇರಿಯಲ್ಲಿನ ಉದ್ಯೋಗಿ ಮತ್ತು ಸಿಬ್ಬಂದಿ ಭಯ ಬೀತರಾದರು.

ಬಂಧಿತ ಪ್ರಸಾದ್ ನವನೀತ್ ತನ್ನ ಸಹದ್ಯೋಗಿಯೊಬ್ಬರ ಮೇಲೆ ದ್ವೇಷ ಸಾಧಿಸುತ್ತಿದ್ದ. ಈ ಸಂಬಂಧ ಮ್ಯಾನೇಜರ್ ಕರೆ ಮಾಡಿ ದೂರು ನೀಡಲು ಮುಂದಾಗಿದ್ದ. ಆದರೆ ಕಂಪನಿಯು ಮ್ಯಾನೇಜರ್‌ಗೆ ಕರೆ ಕರೆ ಕನೆಕ್ಟ್ ಮಾಡಲಿಲ್ಲ. ನವನೀತ್ ಮನವಿಯನ್ನು ಕಂಪನಿ ತಿರಸ್ಕೃಸಿತ್ತು.
ಹಲವು ಭಾರಿ ಕರೆ ಮಾಡಿ ಪ್ರಯತ್ನಿಸಿದರೂ ಫೋನ್ ಕನೆಕ್ಟ್ ಆಗದಿದ್ದಾಗ ನವನೀತ್ ಕೋಪಗೊಂಡಿದ್ದಾನೆ. ಬಳಿಕ ಕಚೇರಿಯಲ್ಲಿ ಬಾಂಬ್ ಇರಿಸಿದ್ದು, ಅದು 30 ನಿಮಿಷಗಳಲ್ಲಿ ಸ್ಪೋಟಗೊಳ್ಳಲಿದೆ ಎಂದು ಹೇಳಿ ಕರೆ ಕಟ್ ಮಾಡಿದ್ದ ಎನ್ನಲಾಗಿದೆ.
ಕಂಪನಿಗೆ ದೌಡಾಯಿಸಿದ ಭದ್ರತಾ ಸಿಬ್ಬಂದಿ
ಅಲರ್ಟ್ ಆದ ಇಕೋಸ್ಪೇಸ್ ಕಂಪನಿ ಆಡಳಿತ ಮಂಡಳಿ ಪೊಲೀಸರಿಗೆ ಬಾಂಬ್ ಕರೆ ಬಗ್ಗೆ ಸುದ್ದಿ ಮುಟ್ಟಿಸಿತ್ತು. ಸ್ಥಳಕ್ಕೆ ಬಂದ
ವಿಧ್ವಂಸಕ ವಿರೋಧಿ ತಂಡ, ಬಾಂಬ್ ನಿಷ್ಕ್ರಿಯ ದಳ, ಸ್ಥಳೀಯ ಪೊಲೀಸರು ಮತ್ತು ನಗರ ಗುಪ್ತಚರ ಹಾಗೂ ಆಂತರಿಕ ಭದ್ರತಾ ವಿಭಾಗ ತಂಡದ ಸದಸ್ಯರು ಪರಿಶೀಲಿಸಿದರು.
ವಿವಿಧ ವಿಭಾಗದ ಒಟ್ಟು 60 ಮಂದಿ ಸಿಬ್ಬಂದಿ ಕಚೇರಿ ಆವರಣವನ್ನೆಲ್ಲ ಶೋಧಿಸಿದರು. ಎಲ್ಲಿಯೂ ಬಾಂಬ್ ಬಗ್ಗೆ ಸಣ್ಣ ಸುಳಿವು ಸಿಗಲಿಲ್ಲ. ಅಲ್ಲಿಯೇ ಇದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿ, ಮಧ್ಯಾಹ್ನ 3 ಗಂಟೆಯ ವೇಳೆಗೆ ಕಚೇರಿಯಲ್ಲಿ ಬಾಂಬ್ ಇರುವುದು ಸುಳ್ಳು ಎಂದು ಅವರು ಘೋಷಿಸಿದರು.
ನವನೀತ್ ವಜಾಗೆ ಕಂಪನಿ ಚಿಂತನೆ
ಪೊಲೀಸ್ ಕರೆ ಮಾಡಿದ ವಿಷಯ ತಿಳಿಸಿದ ಬಳಿಕ ನವನೀತ್ ಕರೆ ಮಾಡಿ ನಾನು ಸುಳ್ಳು ಬಾಂಬ್ ಕರೆ ಮಾಡಿದ್ದಾಗಿ ಹೇಳಿದ್ದಾನೆ. ಸದ್ಯ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗಿ ಸಹದ್ಯೋಗಿ ಮೇಲಿನ ದ್ವೇಷ, ದೂರು ನೀಡಲು ಕರೆ ಮಾಡಿದಾಗ ಕನೇಕ್ಟ್ ಆಗದ್ದಕ್ಕೆ ಕೋಪಗೊಂಡು ಹೀಗೆ ಹೇಳಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನವನೀತ್ BDO-ರೈಸ್ ಜೊತೆ ಹಿರಿಯ ಸಾಯಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ವಲಯದಲ್ಲಿನ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದರು. ಅವರ ಕಾರ್ಯಕ್ಷಮತೆಯ, ವರ್ತನೆ ಆಧಾರದಲ್ಲಿ ಅವರನ್ನು ಕಚೇರಿಯಿಂದ ವಜಾಗೊಳಿಸಬೇಕು? ಬೇಡವಾ? ಎಂದು ಕಂಪನಿಯು ಚಿಂತನೆ ನಡೆಸುತ್ತಿದೆ.
ನವನೀತ್ ವಿರುದ್ಧ ಪೊಲೀಸರು ನಾನ್-ಕಾಗ್ನಿಜಬಲ್ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಅನುಮತಿಯ ಬಳಿಕ ಪ್ರಕರಣದ ದೂರನ್ನು ಎಫ್ಐಆರ್ ಗೆ ಪರಿವರ್ತಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.












Click it and Unblock the Notifications