ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ

ಬೆಂಗಳೂರು, ಸೆಪ್ಟೆಂಬರ್ 22: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಬ್ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದ್ದು, ಈತ ಆಂಧ್ರ ಮೂಲದವನಾಗಿದ್ದಾನೆ.

ಬುಧವಾರ ಬೆಳಗ್ಗಿನ ಜಾವ ಸುಮಾರು 4 ಗಂಟೆಯ ವೇಳೆ ಘಟನೆ ನಡೆದಿದ್ದು, ಉತ್ತರ ಭಾರತದ ಜಾರ್ಖಂಡ್ ಮೂಲದ ಯುವತಿ ತನ್ನ ಗೆಳತಿಯ ಮನೆಗೆ ಹೋಗಿ ಬರುವಾಗ ಅತ್ಯಾಚಾರ ಯತ್ನ ಘಟನೆ ನಡೆದಿದೆ. ಸದ್ಯ ಸಂತ್ರಸ್ತೆಯನ್ನು ಮೆಡಿಕಲ್ ಟೆಸ್ಟ್‌ಗೆ ಕರೆದುಕೊಂಡು ಹೋಗಲಾಗಿದೆ.

ಇಟಿಯಸ್ ಕೆಎ 01 ಎಎಫ್ 5345 ನಂಬರಿನ ಕಾರಿನಲ್ಲಿ ಅತ್ಯಾಚಾರ ಕೃತ್ಯ ನಡೆದಿದೆ ಎಂದು ಯುವತಿ ದೂರು ನೀಡಿದ್ದಳು. ಗಾಡಿ ನಿಂತಾಗ ಚಾಲಕ ದೇವರಾಜ್ ಎಂಬಾತ ಅತ್ಯಾಚಾರ ಎಸಗಿರುವುದಾಗಿ ದೂರು ದಾಖಲಾಗಿದ್ದು, ಮೂರು ಪೊಲೀಸ್ ಟೀಂನಿಂದ ಕಾರ್ಯಾಚರಣೆ ಮಾಡಿ, ಆರೋಪಿ ಚಾಲನನನ್ನು ಪತ್ತೆ ಹಚ್ಚಿ ತನಿಖೆ ನಡೆಸಲಾಗುತ್ತಿದೆ.

Bengaluru Police Arrested A Cab Driver For Raping A Woman Passenger

ಡಿಸಿಪಿ ಶರಣಪ್ಪ ಮತ್ತು ಹೆಚ್ಚುವರಿ ಆಯುಕ್ತ ಮುರುಗನ್‌ರಿಂದ ವಿಚಾರಣೆ ಮಾಡುಲಾಗುತ್ತಿದ್ದು, ಈ ವೇಳೆ ಕೃತ್ಯ ಚಾಲಕ ನಿರಾಕರಿಸಿದ್ದಾನೆ. ಪೊಲೀಸರು ಸತ್ಯಾಂಶ ಪರಿಶೀಲನೆ ನಡೆಸುತ್ತಿದ್ದು, ಪ್ರಾಥಮಿಕ ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ತಿಳಿದುಬರಲಿದೆ.

ಈ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, "ಇಬ್ಬರ ನಡುವೆ ಮಾತುಕತೆ ನಡೆದಿದೆ. ಬಳಿಕ ಯುವತಿ ಚಾಲಕನನ್ನು ತಳ್ಳಿ ಹೊರಟಿದ್ದಾಳೆ. ಮೊಬೈಲ್‌ನಲ್ಲಿ ಕ್ಯಾಬ್ ರೇಟ್ ತೋರಿಸಿದ್ದಾರೆ. ಆ ಬಳಿಕ ಮೊಬೈಲ್ ಕಿತ್ತುಕೊಂಡು ಯುವತಿ ಹೋಗಿದ್ದಾರೆ. ಕ್ಯಾಬ್ ಹಣವನ್ನು ಯುವತಿಯಿಂದ ಚಾಲಕ ಪಡೆದಿಲ್ಲ. ಯುವತಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಪಿಜಿಯಲ್ಲಿ ವಾಸವಾಗಿದ್ದಾಳೆ. ಆ ಬಳಿಕ ಇಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ. ಚಾಲಕ ರೇಪ್ ಮಾಡಿಲ್ಲ ಅಂತಿದ್ದಾನೆ. ವಿಚಾರಣೆ ನಡೆಯುತ್ತಿದೆ. ಸತ್ಯಾಂಶ ಪರಿಶೀಲನೆ ನಡೆಸುತ್ತಿದ್ದೇವೆ. ಘಟನೆ ಸಂಬಂಧ ಇನ್ನೂ ಎಫ್‍ಐಆರ್ ದಾಖಲಾಗಿಲ್ಲ. ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ," ಎಂದು ತಿಳಿಸಿದ್ದಾರೆ.

"ಬೆಂಗಳೂರಿನ ಜೀವನ್ ಭೀಮಾನಗರ ಠಾಣೆಗೆ ಸಂತ್ರಸ್ತೆ ಮಹಿಳೆ ದೂರಿನ ಮೇರೆಗೆ ದೂರು ದಾಖಲಾಗಿತ್ತು. ತಕ್ಷಣ ಪೊಲೀಸ್ ಕಾರ್ಯಪ್ರವೃತ್ತರಾಗಿದ್ದು, ಮೂರು ತಂಡ ರಚಿಸಿ ಆರೋಪಿ ಪತ್ತೆ ಮಾಡಲಾಗಿದೆ. ಐಪಿಸಿ, ಸಿಆರ್‌ಪಿಸಿ ಅಡಿ ತನಿಖೆ ನಡೆಸಲಾಗುತ್ತಿದೆ. ತನಿಖೆ ನಡೆಸಿದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು."

Bengaluru Police Arrested A Cab Driver For Raping A Woman Passenger

Recommended Video

      ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಪಾಕಿಸ್ತಾನ ಮಾಡಿದ್ದೇನು? | Oneindia Kannada

      ಏನಿದು ಘಟನೆ?
      ಉಬರ್ ಕ್ಯಾಬ್ ಚಾಲಕ ದೇವರಾಜ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ಈ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಮುರುಗೇಶ್‌ಪಾಳ್ಯದಲ್ಲಿ ನಡೆದಿದೆ. ಆರೋಪ ಮಾಡಿರುವ ಯುವತಿ ಜೀವನ್ ಭೀಮಾನಗರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಮಂಗಳವಾರ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಲು ಈಕೆ ಕ್ಯಾಬ್ ಬುಕ್ ಮಾಡಿದ್ದು, ಕ್ಯಾಬ್ ಬಂದು ಯುವತಿ ಕ್ಯಾಬ್ ಏರಿದ್ದಾಳೆ. ನಂತರ ಆಕೆ ಚಾಲಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ.

      ಇತ್ತ ಕ್ಯಾಬ್ ಚಾಲಕ, ಯುವತಿ ಕುಡಿದ ಮತ್ತಿನಲ್ಲಿದ್ದಳು. ಅರೆಪ್ರಜ್ಞೆ ಅವಸ್ಥೆಯಲ್ಲಿದ್ದ ಯುವತಿ, ಮನೆ ಜಾಗ ಬಂದರೂ ಇಳಿಯಲಿಲ್ಲ. ಹೀಗಾಗಿ ಆಕೆಯನ್ನು ಇಳಿಸಲು ಹೋದೆ. ಆಗ ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+