Bengaluru: ಆಂಧ್ರದಿಂದ ಗೋಮಾಂಸ ಸಾಗಿಸುತ್ತಿದ್ದ 7 ಮಂದಿ ಸೇರಿ 21 ಮಂದಿ ಬಂಧನ
ಬೆಂಗಳೂರು, ಸೆಪ್ಟಂಬರ್ 24: ನೆರೆಯ ರಾಜ್ಯ ಆಂಧ್ರಪ್ರದೇಶದ ಹಿಂದೂಪುರದಿಂದ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಗೋಮಾಂಸ (ಎಮ್ಮೆ ಮಾಂಸ) ಸಾಗಿಸುತ್ತಿದ್ದ ಒಟ್ಟು 07 ಮಂದಿಯನ್ನು ಪೊಲೀಸರು ಭಾನುವಾರ ಬಂಧಿಸಿದ ಘಟನೆ ಭಾನುವಾರ ಜರುಗಿದೆ.
ಗೋಮಾಂಸ ಸಾಗಾಣೆಯ ಆರೋಪಿಗಳ ಐದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರೊಂದಿಗೆ ಆರೋಪಿಗಳ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆಯ 14 ಸದಸ್ಯರನ್ನೂ ಬಂಧಿಸಲಾಗಿದ್ದು, ಭಾನುವಾರ ಬೆಳಗಿನ ಜಾವ 5.45ರ ಸುಮಾರಿಗೆ ನಡೆದಿದೆ ಎಂದು ವರದಿ ಆಗಿದೆ.

ಆಂಧ್ರದ ಹಿಂದೂಪುರದಿಂದ ಬೆಂಗಳೂರಿಗೆ ಐದು ಸಣ್ಣ ಟ್ರಕ್‌ಗಳಲ್ಲಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಆರೋಪಿಗಳ ಕಾರನ್ನು ದೊಡ್ಡಬಳ್ಳಾಪುರದಲ್ಲಿ ಶ್ರೀರಾಮಸೇನೆ ಸದಸ್ಯರು ಅಡ್ಡಗಟ್ಟಿ ತಡೆದಿದ್ದಾರೆ. ಈ ವೇಳೆ ಅವರ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮಾಂಸ ಸಾಗಾಣೆದಾರರ ಕಾರಿಗೆ ಬೆಂಕಿ
ಮಾಂಸ ಸಾಗಣೆ ಮಾಡುತ್ತಿದ್ದ ಬಂಧಿತ ಏಳು ಮಂದಿ ಪೈಕಿ ಐವರು ಹಿಂದೂಪುರದವರಾಗಿದ್ದಾರೆ. ಉಳಿದ ಇಬ್ಬರು ಗೌರಿಬಿದನೂರಿ ನಿವಾಸಿಗಳು. ಇದರಿಂದ ಕೋಪಗೊಂಡ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಕಾರಿಗೆ ಬೆಂಕಿ ಹಚ್ಚಿ ಮಾಂಸ ಸಾಗಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಂಸ ಸಾಗಾಣೆಯ ಏಳು ಮಂದಿ ಬಂಧಿತರ ಜೊತೆಗೆ ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾದ ಶ್ರೀರಾಮ ಸೇನೆಯ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಏಳು ಮಂದಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಒಟ್ಟಾರೆ ಪ್ರಕರಣ ಸಂಬಂಧ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಗೋಹತ್ಯೆ ಕಾಯ್ದೆಯಡಿ ಒಂದು ಪ್ರಕರಣ ಮತ್ತೊಂದು ಕಾರನ್ನು ಧ್ವಂಸಗೊಳಿಸಿದ ಮತ್ತು ಸಾಗಾಟಗಾರರ ಮೇಲೆ ಹಲ್ಲೆ ಮಾಡಿದ್ದ ಶ್ರೀರಾಮಸೇನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಈ ವಿಚಾರವಾಗಿ ಒಟ್ಟಾರೆ 21 ಮಂದಿಯನ್ನು ಬಂಧಿಸಿದ್ದಾರೆ ಎಂದು ವರಿಷ್ಠಾಧಿಕಾರಿ ತಿಳಿಸಿದರು.












Click it and Unblock the Notifications