ಬೆಂಗಳೂರು: ಪಾಡ್‌ ಟ್ಯಾಕ್ಸಿ ಯೋಜನೆಗೆ ಆರಂಭದಲ್ಲೇ ಗ್ರಹಣ

ಬೆಂಗಳೂರು, ಜು.21: ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ಪಾಡ್‌ ಟ್ಯಾಕ್ಸಿ ಯೋಜನೆಯನ್ನು ಆರಂಭಿಸಲು ಆಲೋಚನೆ ನಡೆಸಿತ್ತು. ಜನದಟ್ಟಣೆ ಕಡಿಮೆ ಮಾಡುವುದು ಹಾಗೂ ಮೆಟ್ರೋ ನಿಲ್ದಾಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಮಹತ್ತರ ಯೋಜನೆ ಇದಾಗಿತ್ತು.

ಆದರೆ ಆರಂಭದಲ್ಲೇ ಇದಕ್ಕೆ ಅಪಸ್ವರ ಕೇಳಿಬರುತ್ತಿದೆ. ಈ ಯೋಜನೆಗೆ ನಗರ ತಜ್ಞರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಬೆಂಗಳೂರಲ್ಲಿ ಒಂದು ಕೋಟಿಗಿಂತ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಪಾಡ್‌ ಟ್ಯಾಕ್ಸಿಗಳಲ್ಲಿ ಒಂದು ಬಾರಿಗೆ ಕನಿಷ್ಠ 6 ಮಂದಿ ಪ್ರಯಾಣಿಸಬಹುದಾಗಿದೆ.

ಹೀಗಾಗಿ ಪಾಡ್‌ ಟ್ಯಾಕ್ಸಿ ಬಸಲಿಗೆ ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್‌ ಸಂಪರ್ಕ ಜಾಲವನ್ನೇ ಮತ್ತಷ್ಟು ವಿಸ್ತರಿಸಲು ಹೆಚ್ಚಿನ ಒತ್ತು ನೀಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ ಪಾಡ್‌ ಟ್ಯಾಕ್ಸಿ ಸೇವೆ ಆರಂಭಿಸಲು ಬಿಬಿಎಂಪಿ ಉತ್ಸುಕವಾಗಿದ್ದು, ಇದಕ್ಕೆ ನಗರ ತಜ್ಞರು ಮತ್ತು ಬಿಜೆಪಿಯು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ.

Pod taxi project yet to get approval from Bengaluru experts

ನಗರದ ಟ್ರಿನಿಟಿ ವೃತ್ತದಿಂದ ವೈಟ್‌ಫೀಲ್ಡ್‌ವರೆಗ ಮತ್ತು ಹೊರವರ್ತುಲ ರಸ್ತೆಯ ಹೋಪ್‌ಫಾರಂವರೆಗೆ 30 ಕಿ.ಮೀ ಮಾರ್ಗದಲ್ಲಿ ಪಾಡ್‌ ಟ್ಯಾಕ್ಸಿ ಮಾರ್ಗವನ್ನು ನಿರ್ಮಿಸಲು ರಾಪಿಡ್‌ ಡ್ರಾನ್ಸಿಟ್‌ ಸಿಸ್ಟಂ ಪಿಆರ್‌ಟಿಎಸ್‌ ಯೋಜನೆಯ ಟೆಂಡರ್‌ನ್ನು ಎಸ್‌ಪಿಆರ್‌ಟಿಎಸ್‌, ಅಲ್ಟ್ರಾ ಪಿಆರ್‌ಟಿ ಲಿಮಿಟೆಡ್‌ ಮತ್ತು ಎಂಬೆಸಿ ಪ್ರಾಪರ್ಟಿ ಡೆವಲಪ್‌ಮೆಂಟ್ಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳು ಪಡೆದುಕೊಂಡಿದೆ. ಇದರಿಂದ ಬಿಬಿಎಂಪಿಗೆ ವಾರ್ಷಿಕ 6.55 ಕೋಟಿ ರೂ. ಆದಾಯ ಬರಲಿದೆ.

ಸಾರ್ವಜನಿಕರಿಗೆ ಮೆಟ್ರೋ ನಿಲ್ದಾಣದಿಂದ ಕೊನೆಯ ಹಂತದವರೆಗೆ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಬಸ್‌ ನಿಲ್ದಾಣಗಳನ್ನು ಸಂಪರ್ಕಿಸುವ ಐದು ಮಾರ್ಗಗಳಲ್ಲಿ ಪಾಡ್‌ ಟ್ಯಾಕ್ಸಿ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ. ಪ್ರತಿ ಕಿ.ಮೀ ಮಾರ್ಗ ನಿರ್ಮಾಣಕ್ಕೆ 50 ಕೋಟಿ ರೂ, ವೆಚ್ಚವಾಗಲಿದೆ. ಟೆಂಡರ್‌ ಪಡೆದಿರುವ ಕಂಪನಿಯೇ ಬಂಡವಾಳ ಹೂಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+