ಅನಂತ್ ಕುಮಾರ್ ಪಾರ್ಥಿವ ಶರೀರಕ್ಕೆ ಮೋದಿ ಅಂತಿಮ ನಮನ

Recommended Video

      Ananth Kumar Demise : ಅನಂತ್ ಕುಮಾರ್ ಗೆ ಅಂತಿಮ ನಮನ ಸಲ್ಲಿಸಿದ ಮೋದಿ | Oneindia Kannada

      ಬೆಂಗಳೂರು, ನವೆಂಬರ್ 12 : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮಂಗಳವಾರ ಅನಂತ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ.

      ಸೋಮವಾರ ರಾತ್ರಿ 8.30ರ ಸುಮಾರಿಗೆ ನರೇಂದ್ರ ಮೋದಿ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿಗಳನ್ನು ಬರಮಾಡಿಕೊಂಡರು.

      ವಿಮಾನ ನಿಲ್ದಾಣದಿಂದ ಬಸವನಗುಡಿಯಲ್ಲಿರುವ ಅನಂತ್ ಕುಮಾರ್ ಅವರ ನಿವಾಸ ಸುಮೇರುಗೆ ಪ್ರಧಾನಿ ಮೋದಿ ರಸ್ತೆ ಮಾರ್ಗದ ಮೂಲಕ ಆಗಮಿಸಿದರು. ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಸಹೋದ್ಯೋಗಿಯ ಶರೀರಕ್ಕೆ ಹೂಗುಚ್ಛವಿಟ್ಟು ಗೌರವ ಸಲ್ಲಿಸಿದರು.

      ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೋದಿ ಭೇಟಿ ಹಿನ್ನಲೆಯಲ್ಲಿ ಸಂಜೆ 6.30ರಿಂದ ಅನಂತ್ ಕುಮಾರ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಿರಲಿಲ್ಲ...

      ಬರಮಾಡಿಕೊಂಡ ಸಿಎಂ

      ಬರಮಾಡಿಕೊಂಡ ಸಿಎಂ

      ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರಮಾಡಿಕೊಂಡರು.

      ಅಂತಿಮ ನಮನ ಸಲ್ಲಿಸಿದ ಮೋದಿ

      ಅಂತಿಮ ನಮನ ಸಲ್ಲಿಸಿದ ಮೋದಿ

      ಸೋಮವಾರ ರಾತ್ರಿ 8.40ರ ಸುಮಾರಿಗೆ ಬಸವನಗುಡಿಯಲ್ಲಿರುವ ಅನಂತ್ ಕುಮಾರ್ ಅವರ ನಿವಾಸ ಸುಮೇರುಗೆ ಮೋದಿ ಆಗಮಿಸಿದರು. ಪಾರ್ಥಿವ ಶರೀರಕ್ಕೆ ಹೂಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು.

      ಕುಟುಂಬಸ್ಥರು ಮಾತ್ರ ಇದ್ದರು

      ಕುಟುಂಬಸ್ಥರು ಮಾತ್ರ ಇದ್ದರು

      ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವಾಗ ಕುಟುಂಬ ಸದಸ್ಯರು ಮಾತ್ರ ಇದ್ದರು. ಮೋದಿ ಆಗಮನದ ಹಿನ್ನಲೆಯಲ್ಲಿ ಸಂಜೆ 6.30ರಿಂದ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಿರಲಿಲ್ಲ.

      ಕುಟುಂಬದವರಿಗೆ ಸಾಂತ್ವನ

      ಕುಟುಂಬದವರಿಗೆ ಸಾಂತ್ವನ

      ಅಂತಿಮ ನಮನ ಸಲ್ಲಿಸಿದ ಬಳಿಕ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ, ಪುತ್ರಿಯರು, ಕುಟುಂಬ ಸದಸ್ಯರ ಜೊತೆ ಮೋದಿ ಮಾತುಕತೆ ನಡೆಸಿದರು. ಎಲ್ಲರಿಗೂ ಸಾಂತ್ವನ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+