Bengaluru PM Modi Road Show: ಚುನಾವಣಾ ಮಂತ್ರಿ ಪ್ರಧಾನಿ ಮೋದಿಗೆ ಜನರ ಶಾಪದಿಂದಲೇ ಹೊಟ್ಟೆ ತುಂಬುತ್ತದೆ: ಜೆಡಿಎಸ್
ಬೆಂಗಳೂರು, ಮೇ 06: ಕರ್ನಾಟಕ ಚುನಾವಣೆ ಸಂಬಂಧ ಬಿಜೆಪಿ ಪಕ್ಷ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರೋಡ್ ಶೋಗೆ ಬೆಂಗಳೂರು ನಗರ ಸಾಕ್ಷಿಯಾಗಿದೆ. ಆದರೆ ಈ ರೋಡ್ ಶೋನಿಂದ ವಿವಿಧ ರೀತಿಯ ಸಮಸ್ಯೆಗಳಿಗೆ ಸಿಲುಕಿದೆ ಜನರು ಪ್ರಧಾನಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಜೆಡಿಎಸ್ (JDS) ಟೀಕಿಸಿದೆ.
ಬೆಂಗಳೂರಲ್ಲಿನ ಶನಿವಾರದ ಪ್ರಧಾನಿ ನರೇಂದ್ರ ಮೋದಿ ರೋಡ್ ಕುರಿತು ಜೆಡಿಎಸ್ ಸರಣಿ ಟ್ವೀಟ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯನ್ನು ಚುನಾವಣಾ ಮಂತ್ರಿ, ಜನರ ಸಮಸ್ಯೆ ಗೊತ್ತಿರದ ಬೇಜವಾಬ್ದಾರಿ ಎಂದು ಲೇವಡಿ ಮಾಡಿದೆ. ಪ್ರಧಾನಿ ಮೋದಿ ರೋಡ್ ಶೋಗೆ ಬೆಂಗಳೂರು ನಿವಾಸಿಗಳು, ಬಸ್ ಸಿಗದೇ ಪರದಾಡಿದವರು, ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿ ಸಮಸ್ಯೆ ಅನುಭವಿಸುತ್ತಿದ್ದಾರೆ.

ಚುನಾವಣೆಗಾಗಿ ಗಲ್ಲಿ-ಗಲ್ಲಿಯಲ್ಲಿ ಕಾಣಿಸಿಕೊಳ್ಳುತ್ತಿರುವ 'ಚುನಾವಣಾ ಮಂತ್ರಿ ನರೇಂದ್ರ ಮೋದಿ'ಯವರಿಗೆ ಇಂದು ಮಧ್ಯಾಹ್ನ ಊಟ ಬೇಕಿಲ್ಲ.ಬೆಂಗಳೂರಿನ ಬೀದಿ ಬೀದಿಯಲ್ಲಿ ಸಾಮಾನ್ಯ ಜನರು ಹಾಕುತ್ತಿರುವ ಹಿಡಿಶಾಪದಿಂದಲೆ ಅವರ ಹೊಟ್ಟೆ ತುಂಬಲಿದೆ. ನಾಡಿಗೆ ಸಂಕಷ್ಟ ಬಂದಾಗ ತಿರುಗಿ ಕೂಡಾ ನೋಡದ ವ್ಯಕ್ತಿ ಚುನಾವಣೆ ಬಂದಾಗ ಶೋಕಿ ಮಾಡಲು ಬಂದಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಸಾರ್ವಜನಿಕರು ಸಂಯಮ ಕಳೆದುಕೊಳ್ಳದೆ ಇದೇ ಆಕ್ರೋಶವನ್ನು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ತೋರಿಸಬೇಕು ಎಂದಷ್ಟೆ ನಮ್ಮ ವಿನಂತಿ. ಚುನಾವಣೆಗೆ ತೋರುವ ಈ ಆಸಕ್ತಿ ಜನಕಲ್ಯಾಣಕ್ಕೆ ತೋರಿಸುತ್ತಿದ್ದರೆ ಇಷ್ಟು ಶಾಪಗಳನ್ನು ಜನರಿಂದ ಹಾಕಿಸಿಕೊಳ್ಳುವ ಸ್ಥಿತಿ @BJP4Karnatakaಕ್ಕೆ ಬರುತ್ತಿರಲಿಲ್ಲ. 3/3
— Janata Dal Secular (@JanataDal_S) May 6, 2023
ಜನರ ಸಂಕಷ್ಟಗಳ ಬಗ್ಗೆ ಅರಿವಿಲ್ಲದೆ ಬೇಜವಾಬ್ದಾರಿ
ಪ್ರಧಾನಿಯವರ ರೋಡ್ ಶೋನಿಂದಾಗಿ ನಗರದಲ್ಲಿ ದುಡಿಮೆಗೆಂದು ಬೆಳ್ಳಂಬೆಳಗ್ಗೆ ಹೊರಟ ಜನರು ತಾವು ಸೇರಬೇಕಾದ ಗುರಿ ತಲುಪದೆ ಒಂದು ದಿನದ ಕೂಲಿ ಕಳೆದುಕೊಳ್ಳುವಂತಾಗಿದೆ. ಜನರ ಸಂಕಷ್ಟಗಳ ಬಗ್ಗೆ ಅರಿವೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯ.

ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಕಾರ್ಯಕ್ರಮದಿಂದಾಗಿ ಜನರು ಟ್ರಾಫಿಕ್ ನಿಯಂತ್ರಿಸುವ ಪೊಲೀಸರ ಮೇಲೆ ಆಕ್ರೋಶ ತೋರಿಸುತ್ತಿದ್ದಾರೆ. ತಮಗಾಗುತ್ತಿರುವ ಸಮಸ್ಯೆ ಹೇಳಿಕೊಂಡು ಗೋಗರೆಯುತ್ತಿದ್ದಾರೆ.
ಸಾರ್ವಜನಿಕರು ಸಂಯಮ ಕಳೆದುಕೊಳ್ಳದೆ ಇದೇ ಆಕ್ರೋಶವನ್ನು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ತೋರಿಸಬೇಕು ಎಂದಷ್ಟೆ ನಮ್ಮ ವಿನಂತಿ. ಚುನಾವಣೆಗೆ ತೋರುವ ಈ ಆಸಕ್ತಿ ಜನಕಲ್ಯಾಣಕ್ಕೆ ತೋರಿಸುತ್ತಿದ್ದರೆ ಇಷ್ಟು ಶಾಪಗಳನ್ನು ಜನರಿಂದ ಹಾಕಿಸಿಕೊಳ್ಳುವ ಸ್ಥಿತಿ ರಾಜ್ಯ ಬಿಜೆಪಿಗೆ ಬರುತ್ತಿರಲಿಲ್ಲ ಎಂದು ಜೆಡಿಎಸ್ ಕಾಲೆಳೆದಿದೆ.
ಈ ರಸ್ತೆಗಳಲ್ಲಿ ಮೋದಿ ರೋಡ್ ಶೋ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಮೇಖ್ರಿ ವೃತ್ತ, ಶ್ರೀ ಸೋಮೇಶ್ವರ ಸಭಾ ಭವನ, ಜೆಪಿ ನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಸೌತ್ ಎಂಡ್ ವೃತ್ತ, ಮಾಧವ್ ರಾವ್ ವೃತ್ತ, ರಾಮಕೃಷ್ಣಾ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರಮಠ ಚೌಕ, ಮಲ್ಲೇಶ್ವರಂ ವೃತ್ತ ಮತ್ತು ಸಂಪಗೆ ರಸ್ತೆ 18ನೇ ಅಡ್ಡರಸ್ತೆ ಜಂಕ್ಷನ್ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೇಲಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಲು ಜನಸಾಗರವೇ ನಿಂತಿದ್ದು ಕಂಡು ಬಂತು. ಈ ವೇಳೆ ಹಲವು ಕಡೆಗಳಲ್ಲಿ ಸಂಚಾರ ಸಮಸ್ಯೆ ಉಂಟಾಗಿದೆ, ಸಾರ್ವಜನಿಕರು ತೊಂದರೆ ಅನುಭವಿಸಿದರು.
-
Narendra Modi: ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ 18 ಅಂಶ: ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಆದಿಚುಂಚನಗಿರಿ ಮಠಕ್ಕೆ ಇಂದು ಪ್ರಧಾನಿ ಮೋದಿ ಭೇಟಿ: ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಸಕಲ ಸಿದ್ಧತೆ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು












Click it and Unblock the Notifications