ಮೋದಿ ಸಭೆ: ತುರ್ತು ದೂರವಾಣಿ ಸಂಖ್ಯೆಗಳು ಹೀಗಿವೆ
ಬೆಂಗಳೂರು, ನ. 15: ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಾಳೆ ಅಲ್ಲ ನಾಳಿದ್ದೇ ಬೆಂಗಳೂರು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ತನ್ನಿಮಿತ್ತ ಬೆಂಗಳೂರು ಅರಮನೆ ಮೈದಾನ ಈಗಾಗಲೇ ಶಸ್ತ್ರಸಜ್ಜಿತ ಪೊಲೀಸರಿಂದ ಯುದ್ಧಕೋಟೆಯಂತೆ ಮಾರ್ಪಟ್ಟಿದೆ. ಗಮನಾರ್ಹವೆಂದರೆ ಮೋದಿ ಅಭಿಮಾನಿಗಳು ಸಹ ಭಾರಿ ಸಂಖ್ಯೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಈಗಾಗಲೇ ಹೊರಟಿದ್ದು, ಇಂದು ನಾಳೆ ವೇಳೆಗೆ ಬೆಂಗಳೂರನ್ನು ತಲುಪಿಕೊಳ್ಳಲಿದ್ದಾರೆ.
ಈ ಮಧ್ಯೆ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಭೆಗೆ ತೃಣಮಾತ್ರವೂ ಭದ್ರತಾ ಲೋಪವಾಗದಂತೆ ಬೆಂಗಳೂರು ಪೊಲೀಸರು ಟೊಂಕಕಟ್ಟಿ ನಿಂತಿದ್ದು ಅದಾಗಲೇ ರೋಡ್ ಮ್ಯಾಪ್ ಸಿದ್ಧಪಡಿಸಿಕೊಂಡು ಪಹರೆ ಕಾಯುತ್ತಿದ್ದಾರೆ. ಈಗಾಗಲೇ ಅವರು ಸಂಚರಿಸಬಹುದಾದ ರಸ್ತೆಗಳನ್ನು ಒಂದು ವಾರದಿಂದ ಇಂಚಿಂಚೂ ಅಳೆಯುತ್ತಿದ್ದಾರೆ.

ಮೋದಿ ಅವರು ಬಂದು-ಹೋಗುವವರೆಗೂ ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಏನೇ ಅನುಮಾನಾಸ್ಪದ ಸಂಗತಿ ಕಣ್ಣಿಗೆ ಬಿದ್ದರೆ ತಕ್ಷಣ ನಮಗೊಂದು ಕರೆ ಮಾಡಿ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಂದೋಬಸ್ತ್ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾದರೂ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂಬಂತೆ ಕೋರಿದ್ದಾರೆ.
In case of any suspicious and un-claimed objective lying anywhere and parked vehicle in public places it is requested to bring it to the police or Control Room immediately.
ತುರ್ತು ಸಂದರ್ಭದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವಂತೆ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಮನವಿ ಮಾಡಿದ್ದಾರೆ.
:Dial -100.
:080-22943322.
:080-22942222.
:080-22942338.
ಪೊಲೀಸ್ ಭದ್ರತೆ ಹೀಗಿದೆ: ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶದ ಭದ್ರತೆಗೆ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. 10 ಡಿಸಿಪಿ, 25 ಎಸಿಪಿ, 100 ಇನ್ಸ್ ಪೆಕ್ಟರ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.












Click it and Unblock the Notifications