ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಕ್ಕೆ ಉತ್ಪಾದಕರ ಕೆಂಗಣ್ಣು
ಬೆಂಗಳೂರು, ಸೆಪ್ಟೆಂಬರ್ 1: ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿರುವ ಸರ್ಕಾರದ ಕ್ರಮವನ್ನು ಪ್ಲಾಸ್ಟಿಕ್ ಉತ್ಪಾದಕರು ವಿರೋಧಿಸಿದ್ದಾರೆ. ನಾಗರೀಕರು ಉಪಯೋಗಿಸುವ ಕೆಲ ವಸ್ತುಗಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ಲಾಸ್ಟಿಕ್ ಮೇಲೆ ನೂರಾರು ಉದ್ದಿಮೆಗಳು ಅವಲಂಬಿತವಾಗಿವೆ. ಸಿದ್ಧ ಉಡುಪು, ಪ್ಯಾಕಿಂಗ್ ಸೇರಿದಂತೆ ಎಲ್ಲಾ ಉದ್ದಿಮೆಗಳಿಗೂ ಪ್ಲಾಸ್ಟಿಕ್ ಬೇಕಿದೆ. ಆದರೆ ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಆದರೆ ಸಿದ್ಧೊಡಿಸಿದ ಆಹಾರ ಪ್ಯಾಕ್ ಗಳಲ್ಲಿ ಬಳಕೆಗೆ ಅವಕಾಶ ನೀಡಲಾಗಿದೆ. ಇದು ಸರಿಯಲ್ಲ ಎಂದು ಆರೋಪಿಸಿದರು.
ಪ್ಲಾಸ್ಟಿಕ್ ನಿಷೇಧದ ಹೆಸರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಉದ್ಯಮದ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ.ಕೆಲವೊಂದು ಉತ್ಪನ್ನಗಳಿಗೆ ವಿನಾಯ್ತಿ ಸಿಕ್ಕಿದ್ದರೂ , ಎಲ್ಲಾ ಬಗೆಯ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ ಎಂದು ಅಂಗಡಿಗಳ ಬಾಗಿಲು ಹಾಕಿಸುತ್ತಿದ್ದಾರೆ ಎಂದು ರಾಜ್ಯ ಪ್ಲಾಸ್ಟಿಕ್ ಸಂಘದ ಅಧ್ಯಕ್ಷ ವಿ. ವಿಜಯಕುಮಾರ್ ತಿಳಿಸಿದ್ದಾರೆ.

50 ಮೈಕ್ರೋ ಗ್ರಾಂಗಿಂತ ಹೆಚ್ಚಿನ ಪ್ರಮಾಣದ ಕ್ಯಾರಿ ಬ್ಯಾಗ್ ಬಳಕೆ ಮಾಡಲು ಅವಕಾಶ, ಸಮಾರಂಭಗಳಲ್ಲಿ ಬಳಸುವ ಪರಿಕರ ಮೇಲಿನ ನಿಷೇಧ ರದ್ದು ಮಾಡಬೇಕು, ಬಾಧಿತ ವಲಯದಲ್ಲಿ ಸರಕು, ಸಾಗಣೆ, ವಿತರಣೆಗೆ ಪ್ಲಾಸ್ಟಿಕ್ ಬಳಕೆ ಮಾಡಬೇಕಿದೆ.
ಎಂಎನ್ ಸಿ ಕಂಪನಿಗಳ ಉತ್ಪನ್ನಕ್ಕೆ ಬಳಸಿರುವ ಪ್ಲ್ಯಾಸ್ಟಿಕ್ ನಿರ್ಬಂಧ ಹೇರಬೇಕು. ನಿತ್ಯ ಎರಡು ಬಾರಿ ಕಸ ವಿಲೇವಾರಿ ಮಾಡಿ ಪ್ಲಾಸ್ಟಿಕ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications