Pink Buses: ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ಉಚಿತ ಪ್ರಯಾಣಕ್ಕೆ ರಸ್ತೆಗೆ ಇಳಿಯಲಿವೆ ಪಿಂಕ್ ಬಸ್‌ಗಳು!
ಬೆಂಗಳೂರು, ಫೆಬ್ರವರಿ 08: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನಗಳಲ್ಲಿ ಒಂದಾದ ಶಕ್ತಿ ಯೋಜನೆ ಸಕತ್ ಯಶಸ್ಸಾಗಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಸಾರಿಗೆ ಇಲಾಖೆ ಚರ್ಚೆ ನಡೆಸಿದೆ. ಹೀಗಾಗಿ ಮಹಿಳಾ ಪ್ರಯಾಣಿಕರಿಗಾಗಿಯೇ ಪ್ರತ್ಯೇಕ ಬಸ್‌ಗಳು ರಸ್ತೆಗಿಳಿಯಲಿವೆ!.
ಹೌದು... ಶಕ್ತಿ ಯೋಜನೆಯಿಂದಾಗಿ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ಯೋಜನೆಯಿಂದಾಗಿ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಒಟ್ಟಾರೆ 259 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಸಾರಿಗೆ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಹೀಗಾಗಿಯೇ ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ಪಿಂಕ್ ಬಸ್ ಓಡಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ರಾಜ್ಯದಲ್ಲಿ ಪ್ರತಿದಿನ 60 ರಿಂದ 63 ಲಕ್ಷ ಮಹಿಳೆಯರು ಉಚಿತ ಬಸ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೆಣ್ಣು ಮಕ್ಕಳು ಬಸ್‌ಗಳಲ್ಲಿ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಅವರಿಗಾಗಿಯೇ ವಿಶೇಷವಾಗಿ ಪಿಂಕ್ ಬಸ್‌ಗಳನ್ನು ರಸ್ತೆಗಿಳಿಸಲು ಪ್ಲ್ಯಾನ್ ನಡೆಯುತ್ತಿದೆ. ಪ್ರಾಯೋಗಿಕವಾಗಿ ಬಿಎಂಟಿಸಿಯಲ್ಲಿ ಈ ಬಸ್‌ಗಳನ್ನು ಬಿಡುವ ಯೋಜನೆಯಲ್ಲಿದೆ ಸಾರಿಗೆ ಇಲಾಖೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ನಾಲ್ಕೂ ನಿಗಮಗಳ ಬಸ್‌ಗಳಲ್ಲಿಒ ಮಹಿಳೆಯರಿಗಾಗಿ ಸೀಟುಗಳು ಇವೆ. ಆದರೆ, ಬಿಎಂಟಿಸಿಯಲ್ಲಿ ಮಾತ್ರವೇ ಈ ನಿಯಮವನ್ನು ಅನುಸರಿಸಲಾಗುತ್ತದೆ. ಈ ಹಿಂದೆ ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬಸ್‌ಗಳಿದ್ದವು. ಅದೇ ಮಾದರಿಯಲ್ಲಿ ಮತ್ತೆ ಪಿಂಕ್ ಬಸ್ (ಮಹಿಳಾ ಬಸ್) ಬಿಡಲು ಸರ್ಕಾರ ಯೋಜಿಸಿದೆ.

"ಬಿಎಂಟಿಸಿ ಪ್ರಸ್ತುತ ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚಿನ ಬಸ್‌ಗಳನ್ನು ಖರೀದಿ ಮತ್ತು ಜಿಸಿಸಿ ಆಧಾರದಲ್ಲಿ ಪಡೆಯುತ್ತಿದೆ. ಅದರಲ್ಲಿ ಕೆಲವು ಬಸ್‌ಗಳನ್ನು ಪಿಂಕ್ ಬಸ್‌ಗಳನ್ನಾಗಿ ಮಾಡಿ ಅವುಗಳನ್ನು ಮಹಿಳಾ ಪ್ರಯಾಣಿಕರಿಗಾಗಿಯೇ ಮೀಸಲಾಗಿರಿಸಿವು ಚರ್ಚೆ ನಡೆಯುತ್ತಿದೆ. ಅಧಿಕಾರಿಗಳು ಸಭೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಬೇಕಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆಯಬೇಕಿದೆ" ಎಂದು ಸಾರಿಗೆ ಸಚಿವರ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಪಿಂಕ್ ಬಸ್‌ಗಳು ರಸ್ತೆಗಿಳಿದರೆ ಮಹಿಳಾ ಪ್ರಯಾಣಿಕರ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ಬಸ್‌ಗಳಲ್ಲಿ ಹಿಂಸೆ ಅನುಭವಿಸಿಕೊಂಡು ಓಡಾಡುವ ಮಹಿಳೆಯರು ನಿಶ್ಚಿಂತೆಯಿಂದ ಓಡಾಡಬಹುದು. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಪಿಂಕ್ ಬಸ್‌ಗಳಿದ್ದು, ರಾಜ್ಯದಲ್ಲಿಯೂ ಆ ವ್ಯವಸ್ಥೆ ಜಾರಿಗೆ ಬಂದರೆ ಹೆಚ್ಚು ಅನುಕೂಲವಾಗಲಿದೆ.












Click it and Unblock the Notifications