ಲೋಕಸಭೆ ಉಪಚುನಾವಣೆ ರದ್ದು ಗೊಳಿಸಲು ಹೈಕೋರ್ಟ್‌ಗೆ ಅರ್ಜಿ
ಬೆಂಗಳೂರು, ಅಕ್ಟೋಬರ್ 09: ಮಂಡ್ಯ, ಬಳ್ಳಾರಿ, ಶಿವಮೊಗ್ಗ ಕ್ಷೇತ್ರಗಳಿಗೆ ನಡೆಯುತ್ತಿರುವ ಲೋಕಸಭೆ ಉಪಚುನಾವಣೆಯನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ತುಮಕೂರಿನ ರಮೇಶ್ ನಾಯಕ್ ಎಂಬುವರು ಇಂದು ಹೈಕೋರ್ಟ್‌ಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿದ್ದು ವಿಚಾರಣೆ ನಡೆಯಲಿದೆ. ಲೋಕಸಭೆ ಉಪಚುನಾವಣೆಯಿಂದ ಸಾರ್ವಜನಿಕ ಹಣ ಪೋಲಾಗುತ್ತದೆ ಎಂಬುದು ಅರ್ಜಿದಾರರ ದೂರು.
ಲೋಕಸಭೆ ಮುಖ್ಯ ಚುನಾವಣೆಗೆ ಇನ್ನು ಆರು ತಿಂಗಳು ಸಹ ಇಲ್ಲದೇ ಇರುವ ಸಮಯದಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ನಡೆಸಲಾಗುತ್ತದೆ. ಚುನಾವಣೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಆರು ತಿಂಗಳು ಸಹ ಕಾಲಾವಕಾಶ ಇರುವುದಿಲ್ಲ ಹಾಗಾಗಿ ಈ ಚುನಾವಣೆ ಕೇವಲ ಸಾರ್ವಜನಿಕ ಹಣದ ಪೋಲಷ್ಟೆ ಎಂದು ಅರ್ಜಿದಾರರು ಹೇಳಿದ್ದಾರೆ.

ನವೆಂಬರ್ 3ರಂದು ಮಂಡ್ಯ, ಶಿವಮೊಗ್ಗ, ಬಳ್ಳಾರಿ ಕ್ಷೇತ್ರಗಳ ಲೋಕಸಭೆ ಉಪಚುನಾವಣೆ ನಡೆಯಲಿದೆ. ಇದೇ ದಿನ ರಾಮನಗರ ಮತ್ತು ಜಮಖಂಡಿ ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಸಹ ನಡೆಯಲಿದೆ.
ಉಪಚುನಾವಣೆ ಮೂಲಕ ಆಯ್ಕೆ ಆಗುವ ಮೂರು ಜನ ಸಂಸದರಿಗೆ ಆರು ತಿಂಗಳು ಸಹ ಸಮಯಾವಕಾಶ ಇರುವುದಿಲ್ಲ. ಏಪ್ರಿಲ್ ಅಷ್ಟರಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ಆಗುತ್ತದೆ. ಹಾಗಾಗಿ ಲೋಕಸಭೆ ಉಪಚುನಾವಣೆಯಲ್ಲಿ ಬಹಳಷ್ಟು ಜನ ವಿರೋಧಿಸುತ್ತಿದ್ದಾರೆ.
ಲೋಕಸಭೆ ಉಪಚುನಾವಣೆಯಲ್ಲಿ ರದ್ದು ಮಾಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.












Click it and Unblock the Notifications