ಚಿತ್ರಗಳು : ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್

ಬೆಂಗಳೂರು, ಮಾ. 12 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ಒಂದು ವಾರದಿಂದ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕೆಮ್ಮು ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಜ್ರಿವಾಲ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ನಿಗದಿಯಂತೆ ಇನ್ನೂ ಎರಡು ದಿನ ಅವರ ಚಿಕಿತ್ಸೆ ಮುಂದುವರೆಯುವ ಸಾಧ್ಯತೆ ಇದೆ.

ಗುರುವಾರ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಬಿಡುಗಡೆಯಾಗಿವೆ. ಕಳೆದ ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅರವಿಂದ್ ಕೇಜ್ರಿವಾಲ್ ಅಲ್ಲಿಂದ ನೇರವಾಗಿ ಜಿಂದಾಲ್‌ಗೆ ತೆರಳಿದ್ದರು. [ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದ ಕೇಜ್ರಿವಾಲ್]

ಕೇಜ್ರಿವಾಲ್‌ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಸೋಮವಾರ 200ಕ್ಕೆ ಇಳಿದಿದ್ದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮಂಗಳವಾರ ಮತ್ತೆ 20 ಅಂಶ ಇಳಿಕೆ ಕಂಡಿತ್ತು. ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇನ್ಸುಲಿನ್‌ ಪ್ರಮಾಣವನ್ನು ಶೇ 50ರಷ್ಟು ಹೆಚ್ಚಿಸಲಾಗಿದೆ ಎಂದು ಜಿಂದಾಲ್‌ನ ಮುಖ್ಯ ವೈದ್ಯಾಧಿಕಾರಿ ಡಾ. ಬಬೀನಾ ನಂದಕುಮಾರ್‌ ಹೇಳಿದ್ದರು.

ಅರವಿಂದ್ ಕೇಜ್ರಿವಾಲ್‌ ಅವರನ್ನು ಕೆಮ್ಮಿನ ಸಮಸ್ಯೆ ದೀರ್ಘಕಾಲದಿಂದ ಕಾಡುತ್ತಿತ್ತು. ಕೆಮ್ಮಿನ ಜೊತೆಗೆ ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಕೇಜ್ರಿವಾಲ್ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. [ಪಿಟಿಐ ಚಿತ್ರ]

ಒಂದು ವಾರದಿಂದ ಕೇಜ್ರಿವಾಲ್‌ಗೆ ಚಿಕಿತ್ಸೆ

ಒಂದು ವಾರದಿಂದ ಕೇಜ್ರಿವಾಲ್‌ಗೆ ಚಿಕಿತ್ಸೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ಒಂದು ವಾರದಿಂದ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕೆಮ್ಮು ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಂದಾಲ್‌ನಲ್ಲಿ ಕೇಜ್ರಿವಾಲ್‌ಗೆ ಪ್ರಕೃತಿ ಚಿಕಿತ್ದೆ

ಜಿಂದಾಲ್‌ನಲ್ಲಿ ಕೇಜ್ರಿವಾಲ್‌ಗೆ ಪ್ರಕೃತಿ ಚಿಕಿತ್ದೆ

ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ದೆಹಲಿ ಸಿಎಂ 10 ದಿನಗಳ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎಂಟು ದಿನಗ ಚಿಕಿತ್ಸೆ ಪೂರ್ಣಗೊಂಡಿದೆ.

ಕೆಮ್ಮು, ಮಧುಮೇಹಕ್ಕೆ ಚಿಕಿತ್ಸೆ

ಕೆಮ್ಮು, ಮಧುಮೇಹಕ್ಕೆ ಚಿಕಿತ್ಸೆ

ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕೆಮ್ಮು ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಬಬಿನಾ ನೇತೃತ್ವದ ತಂಡ ಅರವಿಂದ್ ಕೇಜ್ರಿವಾಲ್ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಕೇಜ್ರಿವಾಲ್ ಅವರ ಜೊತೆಗೆ ತಾಯಿ ಗೀತಾ ದೇವಿ ಆಗಮಿಸಿದ್ದಾರೆ.

ಆರೋಗ್ಯದಲ್ಲಿ ಸುಧಾರಣೆ

ಆರೋಗ್ಯದಲ್ಲಿ ಸುಧಾರಣೆ

ಕೇಜ್ರಿವಾಲ್‌ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಸೋಮವಾರ 200ಕ್ಕೆ ಇಳಿದಿದ್ದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮಂಗಳವಾರ ಮತ್ತೆ 20 ಅಂಶ ಇಳಿಕೆ ಕಂಡಿತ್ತು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಬಬೀನಾ ನಂದಕುಮಾರ್‌ ಹೇಳಿದ್ದರು.

ಎರಡು ದಿನಗಳ ಚಿಕಿತ್ಸೆ ಬಾಕಿ

ಎರಡು ದಿನಗಳ ಚಿಕಿತ್ಸೆ ಬಾಕಿ

ನಿಗದಿಯಂತೆ ಕೇಜ್ರಿವಾಲ್ 10 ದಿನಗಳ ಚಿಕಿತ್ಸೆ ಪಡೆಯಬೇಕು. ಕಳೆದ ಗುರುವಾರ ಆಗಮಿಸಿದ್ದ ಅವರು ಒಂದು ವಾರಗಳ ಕಾಲದ ಚಿಕಿತ್ಸೆಯನ್ನು ಪಡೆದಿದ್ದಾರೆ. ಇನ್ನೂ ಎರಡು ದಿನಗಳ ಚಿಕಿತ್ಸೆ ಬಾಕಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+