ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರುವಾರದ ಕೆಲವು ಸುದ್ದಿಗಳ ಚಿತ್ರ ಲೋಕದಲ್ಲಿ..

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 10 : ನಾಡಿನಾದ್ಯಂತ ನಾನಾ ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ಇಂತಹ ಹಲವಾರು ಘಟನೆಗಳು ಗುರುವಾರ ಚಿತ್ರ ವೇದಿಕೆಯಲ್ಲಿ ಕಂಡು ಬಂದವು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಹಿಡಿದು ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ರೈತರು, ಜನಸಾಮಾನ್ಯರ ಪ್ರತಿಭಟನೆಗಳು ಸೇರಿದಂತೆ ಹಲವಾರು ಘಟನೆಗಳಿಗೂ ಇಡೀ ನಾಡು ಸಾಕ್ಷಿಯಾಯಿತು.

ರಾಷ್ರಪತಿ ಪ್ರಣಬ್ ಮುಖರ್ಜಿ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2014ರ ಗಾಂಧಿ ಶಾಂತಿ ಪುರಸ್ಕಾರ ಪ್ರದಾನ ಮಾಡಿದರು. ವಿಶ್ವ ಹಿಂದಿ ವಿಚಾರ ಸಂಕಿರಣಕ್ಕೆ ಭರ್ಜರಿ ತಯಾರಿಗಳು, ವ್ಯವಸ್ಥೆಗಳು. ಕ್ರಿಕೆಟರ್ ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡರು. ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕಾರವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬೈರೂಟ್ ನಲ್ಲಿ ನಡೆಯುತ್ತಿರುವ ಸೇನಾ ತರಬೇತಿಯಲ್ಲಿ ಸೈನಿಕರ ಕಸರತ್ತುಗಳು, ಪಾಠ ಹೇಳಿಕೊಡುವ ನಾನಾ ಭಂಗಿಗಳು.[ದೇಶದಲ್ಲಿನ ನಾನಾ ವಿಶೇಷತೆಗಳ ಸುದ್ದಿಗುಚ್ಛ]

ಹೀಗೆ ಗುರುವಾರದ ಚಿತ್ರ ವೇದಿಕೆ ಹಲವಾರು ಘಟನೆಗಳಿಗೆ ಸಾಕ್ಷಿಯಾಯಿತು. ಬನ್ನಿ ಎಲ್ಲೆಲ್ಲೆ ಏನೇನು ಘಟನೆಗಳು ನಡೆದಿದೆ ಎಂದು ನೋಡುತ್ತಾ ಘಟನೆಗಳ ಬಗ್ಗೆ ತಿಳಿದುಕೊಳ್ಳೋಣ.

ಅಂತರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ

ಅಂತರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ

ಅಂತರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ ಗಾಂಧೀಜಿ ಅವರ 125ನೇ ಹುಟ್ಟು ಹಬ್ಬದ ಪ್ರಯುಕ್ತ 1995 ರಿಂದ ಪ್ರದಾನ ಮಾಡಲು ಭಾರತ ಸರ್ಕಾರ ನಿರ್ಧರಿಸಿತು. ಅಂದಿನಿಂದ ಆರಂಭವಾದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದಿಗೂ ಮುಂದುವರೆದಿದ್ದು, 2014 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಇಸ್ರೋದ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬುಧವಾರ ಪ್ರದಾನ ಮಾಡಿದರು.

ನೃತ್ಯದ ತಯಾರಿಯಲ್ಲಿ ಲಲನೆಯರು

ನೃತ್ಯದ ತಯಾರಿಯಲ್ಲಿ ಲಲನೆಯರು

ಭೋಪಾಲ್ ನಲ್ಲಿ 10ನೇ ವಿಶ್ವ ಹಿಂದಿ ವಿಚಾರ ಸಂಕಿರಣ ನಡೆಯಲಿದೆ. ಇದರ ಪ್ರಯುಕ್ತ ಹಲವಾರು ವ್ಯವಸ್ಥೆಗಳ ಕುರಿತಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪರಿಶೀಲನೆ ಮಾಡಿ ಹೋಗಿದ್ದಾರೆ. ಈ ಸಂಕಿರಣಕ್ಕಾಗಿ ಹಾಡು, ಹಸೆ, ನೃತ್ಯ ಎಂದು ಲಲನೆಯರು ಕಾರ್ಯಕ್ರಮದ ಪೂರ್ವತಯಾರಿಯಲ್ಲಿ ತೊಡಗಿದ್ದಾರೆ.

ಅಭಿಮಾನಿಗಳೊಂದಿಗೊಂದು ಸೆಲ್ಫೀ

ಅಭಿಮಾನಿಗಳೊಂದಿಗೊಂದು ಸೆಲ್ಫೀ

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ನಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಹಲವಾರು ಕ್ರಿಕೆಟಿಗರಲ್ಲಿ ಒಬ್ಬರಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಗೊರ್ ಗಾಂವ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸೆಲ್ಫೀ ಪಡೆದುಕೊಳ್ಳುವಾಗ ಬಹಳ ಸಂಭ್ರಮಪಟ್ಟಿದ್ದು ಹೀಗೆ.

ವಿಶ್ವಕ್ಕೆ ಲೋಕಾರ್ಪಣೆಗೊಂಡಿತು ವಜ್ರಕೋಶ್

ವಿಶ್ವಕ್ಕೆ ಲೋಕಾರ್ಪಣೆಗೊಂಡಿತು ವಜ್ರಕೋಶ್

ಯುದ್ಧ ನೌಕೆಗಳಿಗೆ ಶಸ್ತ್ರಾಸ್ತ್ರ, ಕ್ಷಿಪಣಿಗಳನ್ನು ಒದಗಿಸುವ ಹಾಗೂ ತಾಂತ್ರಿಕ ನೆರವು ನೀಡುವ ನೂತನ ಸಂಗ್ರಹಣಾಲಯ ಐಎನ್ಎಸ್ 'ವಜ್ರಕೋಶ್' ನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕರ್ನಾಟಕದ ಕಾರವಾರದಲ್ಲಿ ಲೋಕಾರ್ಪಣೆಗೊಳಿಸಿದರು. ಇವರೊಂದಿಗೆ ಚೀಫ್ ಆಫ್ ನೇವಲ್ ಸ್ಟಾಫ್ ಅಡ್ಮಿರಲ್ ಆರ್. ಕೆ ಧೋವನ್ ಉಪಸ್ಥಿತರಿದ್ದರು.

ನೋಡಿ ಸೈನಿಕನ ಕಸರತ್ತು

ನೋಡಿ ಸೈನಿಕನ ಕಸರತ್ತು

ಲೆಬೋನಾದ ಬೈರೂಟ್ ನಲ್ಲಿ ನಡೆಯುತ್ತಿರುವ ಸೈನಿಕ ಕೌಶಲ್ಯ ಪ್ರದರ್ಶನಲ್ಲಿ ಕಮಾಂಡೋ ಒಬ್ಬರು ಕೆಲವು ಕಸರತ್ತು ತೋರಿಸಿದರು.

English summary
This photos is indicates that news of on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X