ಲವ್, ಹೇಟ್, ದೋಖಾ: 30 ಪುಟ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

ಬೆಂಗಳೂರು, ಆಗಸ್ಟ್ 31: ಪ್ರೀತಿಸಿದ ಹುಡುಗ ಕೈಕೊಟ್ಟು ಬೇರೆ ಹುಡುಗಿಯನ್ನು ಮದುವೆಯಾದ ಎಂಬ ಕಾರಣಕ್ಕೆ ಯುವತಿ 30 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.

ಯುವಕನನ್ನು ರಜನಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದಳು ಆದರೆ ಆಕೆಯನ್ನು ಬಿಟ್ಟು ಬೇರೊಬ್ಬ ಯುವತಿಯ ಜತೆ ಮದುವೆಯಾಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬನ್ನೇರುಘಟ್ಟ ರಸ್ತೆಯ ಆಸ್ಪತ್ರೆಯೊಂದರಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದ ಆಂಧ್ರ ಮೂಲದ ಯುವತಿ ರಜನಿ ಆತ್ಮಹತ್ಯೆ ಮಾಡಿಕೊಂಡವಳು.

ಈಕೆ ಸಹೋದ್ಯೋಗಿ ಜತೆ ಗಿರಿನಗರದ ಬ್ಯಾಂಕ್ ಕಾಲೊನಿಯೊಂದರಲ್ಲಿ ಮನೆಮಾಡಿಕೊಂಡು ನೆಲೆಸಿದ್ದಳು, ಸಹೋದ್ಯೋಗಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಹೋದರನ ದೂರಿನ ಮೇರೆಗೆ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ತಿರುಮಲಹಳ್ಳಿಯ ಲಿಂಗಾರೆಡ್ಡಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಬಂಧನಕ್ಕೆ ಪೊಲೀಸರ ತಂಡ ಆಂಧ್ರಕ್ಕೆ ತೆರಳಿದೆ.

Pharmacist suicides writing after 30 pages death note

ಬಿ.ಫಾರ್ಮ್ ಓದಲು ಆಂಧ್ರದಿಂದ ಬಂದಿದ್ದ ಯುವತಿ ಪಕ್ಕದ ಹಳ್ಳಿಯವನೇ ಆದ ಲಿಂಗಾರೆಡ್ಡಿಯನ್ನು ಪ್ರೀತಿಸಿದ್ದಳು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಪರಿಚಿತರಾಗಿದ್ದರು.

ಬೆಂಗಳೂರಲ್ಲೇ ಇದ್ದುದರಿಂದ ಸ್ನೇಹ ಬೆಳದಿತ್ತು, ಪ್ರೀತಿಗೂ ತಿರುಗಿತ್ತು ಆದರೆ ಏಕಾಏಕಿ ಆತನ ಮನೆಯವರು ಬೇರೆ ಹುಡುಗಿಯನ್ನು ಹುಡುಕಿ ಆತನಿಗೆ ನಿಶ್ಚಿತಾರ್ಥ ಮಾಡಿದ್ದರು.

ಈ ವಿಷಯವನ್ನು ಯುವತಿ ಬಳಿ ಮುಚ್ಚಿಟ್ಟಿದ್ದ ಬಳಿಕ ಯಾರಿಂದಲೋ ವಿಷಯ ತಿಳಿದು ಅಸಮಾಧಾನ ತೋಡಿಕೊಂಡಿದ್ದಳು. ಅವಳು ಬರೆದ 30ಪುಟಗಳ ಡೆತ್ ನೋಟ್ ನಲ್ಲಿ ಆತ ಪರಿಚಯ ಆದಾಗಿನಿಂದಲೂ ಹಿಡಿದು ಆತ್ಮಹತ್ಯೆಯವರೆಗೂ ಸಂಪೂರ್ಣವಾಗಿ ಘಟನೆಗಳನ್ನು ವಿವರಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+