Get Updates
Get notified of breaking news, exclusive insights, and must-see stories!

ಬೆಂಗಳೂರಿನ ಸಂಶೋಧಕ ಡಾ.ನರಸಿಂಹಮೂರ್ತಿಗೆ ಫಾರ್ಮಾಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್

ಬೆಂಗಳೂರು, ಸೆಪ್ಟೆಂಬರ್ 13: "ಔಷಧ ಸಂಶೋಧನೆಗೆ ಸಂಬಂಧಿಸಿದಂತೆ ಸಂಸ್ಥೆಯೊಂದನ್ನು ಸ್ಥಾಪಿಸುವ ಬಗ್ಗೆ ದಿವಂಗತ ರಾಷ್ಟ್ರಪತಿ ಡಾ ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಪತ್ರ ಬರೆದಿದ್ದೆ. ಅಂದು ಅವರು ಹೇಳಿದ್ದು ಒಂದೇ ಮಾತು, ಇಂಥದೊಂದು ಪ್ರಯತ್ನ ತೀರಾ ಅಗತ್ಯವಾಗಿದ್ದು ಮುಂದುವರಿಯಿರಿ ಎಂದರು," ಅವರು ನೀಡಿದ ಪ್ರೇರಣೆಯೇ ಇಂದಿನ ನಮ್ಮೆಲ್ಲರ ಸಾಧನೆಗೆ ಸ್ಪೂರ್ತಿ.

ಈ ವರ್ಷದ ಪ್ರತಿಷ್ಠಿತ 'ಫಾರ್ಮಾಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್ ಅನ್ನು ಪಡೆದುಕೊಂಡಿರುವ ಬೆಂಗಳೂರಿನ ದೊಡ್ಡಬಳ್ಳಾಪುರ ಮೂಲದ ಸಂಶೋಧಕ ಡಾ ನರಸಿಂಹಮೂರ್ತಿ ಹೇಳಿದ ಮಾತಿದು. ತಮಗೆ ಸಂದ ಗೌರವದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆಲ್ಲರಿಗೂ ದಿವಂಗತ ರಾಷ್ಟ್ರಪತಿ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರೇ ಪ್ರೇರಣೆ ಎಂದರು.

"ಇಂದು ನನಗೆ ಸಿಕ್ಕಿರುವ ಮಾನ್ಯತೆ ಅಥವಾ ಪ್ರಶಸ್ತಿಗೆ ನಾನೊಬ್ಬನೇ ಬಾಧ್ಯಸ್ಥನಲ್ಲ. ಒಂದು ತಂಡವಾಗಿ ನಾವು ಶ್ರಮಿಸುತ್ತಿದ್ದೇವೆ. ನನ್ನ ಸಂಶೋಧನೆಗಳಿಗೆ ಕಲಾಂ ಅವರೇ ದೊಡ್ಡ ಸ್ಫೂರ್ತಿ' ಎಂದು ಸಂಶೋಧಕ ಡಾ ನರಸಿಂಹಮೂರ್ತಿ ನೆನಪಿಸಿಕೊಂಡರು.

Pharmaceutical Global Health Award 2022 to Young Pharmaceutical Scientist Narasimha Murthy from Bengaluru

ಫಾರ್ಮಾಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್ ಘೋಷಣೆ:

ಅಮೆರಿಕದಲ್ಲಿ ಚರ್ಮದ ಆರೋಗ್ಯಕ್ಕೆ ಸಂಬಂಧಿಸಿ ಔಷಧ ಸಂಶೋಧನಾ ಸೇವೆ ಒದಗಿಸುವ ಕಂಪನಿಯನ್ನು ಮುನ್ನಡೆಸುತ್ತಿರುವ ಬೆಂಗಳೂರಿನ ಸಂಶೋಧಕ ಡಾ ನರಸಿಂಹಮೂರ್ತಿಗೆ ಈ ವರ್ಷದ ಪ್ರತಿಷ್ಠಿತ 'ಫಾರ್ಮಾಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್​' (Pharmaceutical Global Health Award - 2022) ನೀಡುವುದಾಗಿ ಘೋಷಿಸಲಾಗಿದೆ.

ಬೆಂಗಳೂರಿನ ರಾಜಾಜಿನಗರದ "ಇನ್​ಸ್ಟಿಟ್ಯೂಟ್ ಫಾರ್ ಡ್ರಗ್ ಡೆಲಿವರಿ ಅಂಡ್ ಬಯೊ ಮೆಡಿಕಲ್ ರೀಸರ್ಚ್" ಸಂಸ್ಥೆಯ ಮೂಲಕ ಹಲವು ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಲು ಯುವಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಭಾರತದಲ್ಲಿ ನರಸಿಂಹಮೂರ್ತಿ ಮಾಡಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ ಅಮೆರಿಕ ಔಷಧ ವಿಜ್ಞಾನಿಗಳ ಒಕ್ಕೂಟ 'ಅಮೆರಿಕನ್ ಅಸೋಸಿಯೇಷನ್ ಫಾರ್ ಫಾರ್ಮಸಿಟಿಕಲ್ ಸೈಂಟಿಸ್ಟ್ಸ್' (American Association of Pharmaceutical Scientists - AAPS) ಈ ವರ್ಷದ ಪ್ರತಿಷ್ಠಿತ 'ಫಾರ್ಮಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್​' ಅನ್ನು ಘೋಷಿಸಿದೆ.

ಅಕ್ಟೋಬರ್ 16ರಂದು ಸಮಾವೇಶ:

ಅಮೆರಿಕದ ಬಾಸ್ಟನ್ ಮೆಸಚುಟಿಸ್​ನಲ್ಲಿ ಅಕ್ಟೋಬರ್ 16ರಂದು ಸಮಾವೇಶ ನಡೆಯಲಿದ್ದು, ಅಲ್ಲಿ ಡಾ ನರಸಿಂಹಮೂರ್ತಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕ ಮತ್ತು ಜಗತ್ತಿನ ಹಲವೆಡೆ ಔಷಧ ಉತ್ಪಾದನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು 1 ಲಕ್ಷ ಸದಸ್ಯರು ಅಮೆರಿಕದ ಔಷಧ ವಿಜ್ಞಾನಿಗಳ ಒಕ್ಕೂಟದಲ್ಲಿದ್ದಾರೆ. ಈ ಒಕ್ಕೂಟದ ಸಮಾವೇಶದಲ್ಲಿ ಸುಮಾರು 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ.

ಲಾಭದ ಉದ್ದೇಶವಿಲ್ಲದ ಸಂಸ್ಥೆ:

ಸಮಾನ ಮನಸ್ಕ ವಿಜ್ಞಾನಿಗಳು ಸೇರಿಕೊಂಡು ಯಾವುದೇ ರೀತಿ ಲಾಭದ ನಿರೀಕ್ಷೆಯಿಲ್ಲದೇ 'ಇನ್​ಸ್ಟಿಟ್ಯೂಟ್ ಫಾರ್ ಡ್ರಗ್ ಡೆಲಿವರಿ ಅಂಡ್ ಬಯೊ ಮೆಡಿಕಲ್ ರೀಸರ್ಚ್' ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಬಯಸುವವರಿಗೆ ಹಲವು ರೀತಿಯ ನೆರವು ದೊರಕಿಸಿಕೊಡುತ್ತಿದೆ. ಚಿಕಿತ್ಸಾ ಪದ್ಧತಿ ಇನ್ನೂ ವಿಕಸನಗೊಳ್ಳದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಂತ್ರಗಳು ಹಾಗೂ ಔಷಧಿ ಅಭಿವೃದ್ಧಿಪಡಿಸುವುದು ಈ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ.

2013ರಲ್ಲಿ ಆರಂಭವಾದ ಸಂಸ್ಥೆಯಲ್ಲಿ ಹಲವು ಯುವ ಸಂಶೋಧಕರಿಗೆ ನುರಿತ ವಿಜ್ಞಾನಿಗಳು ಉಚಿತವಾಗಿ ಮಾರ್ಗದರ್ಶನ (ಮೆಂಟರ್​ಶಿಪ್) ಮಾಡುತ್ತಾರೆ. ಸ್ವಂತ ಕಂಪನಿ ಸ್ಥಾಪಿಸುವ ಮೂಲಕ ಉದ್ಯಮಿಗಳಾಗಬೇಕು (ಸ್ಟಾರ್ಟಪ್) ಎನ್ನುವ ಮಹತ್ವಾಕಾಂಕ್ಷೆ ಇರಿಸಿಕೊಂಡವರಿಗೂ ವಿಭಿನ್ನ ಹಿನ್ನೆಲೆಯ ಅನುಭವಿಗಳು ಹಲವು ರೀತಿಯಲ್ಲಿ ನೆರವಾಗುತ್ತಾರೆ. ವಿಜ್ಞಾನಿ ಆಗುವ ಕನಸು ಹೊತ್ತ ವಿದ್ಯಾರ್ಥಿಗಳನ್ನು ಹೈಸ್ಕೂಲ್ ಮಟ್ಟದಲ್ಲೇ ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ.

ಚಿಕಿತ್ಸಾ ಪದ್ಧತಿ ಮತ್ತು ಔಷಧಿಗಳಿಗೆ ಅನುಮೋದನೆ:

ಈ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಹಲವು ಚಿಕಿತ್ಸಾ ಪದ್ಧತಿ ಹಾಗೂ ಔಷಧಿಗಳಿಗೆ ಸರ್ಕಾರವೇ ಅನುಮೋದನೆ ನೀಡಿದೆ. ವೈದ್ಯರೂ ಅವನ್ನು ಬಳಸುತ್ತಿದ್ದಾರೆ. 'ಸಮಾಜಕ್ಕೆ ಅಗತ್ಯವಿರುವ, ಆದರೆ ಈವರೆಗೂ ಲಭ್ಯವಿಲ್ಲದ ಔಷಧ ಅಥವಾ ಚಿಕಿತ್ಸಾ ಕ್ರಮಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ. ಅಲ್ಲಿ ಸಾಕಷ್ಟು ಸ್ಪರ್ಧೆ ಇರುತ್ತದೆ. ಸರ್ಕಾರವು ನಮ್ಮ ಪ್ರಸ್ತಾವ ಒಪ್ಪಿಕೊಂಡರೆ ಅನುದಾನ ಸಿಗುತ್ತದೆ. ಅದನ್ನು ಬಳಸಿಕೊಂಡು ನಾವು ಚಿಕಿತ್ಸಾ ಕ್ರಮ ಅಭಿವೃದ್ಧಿಪಡಿಸುತ್ತೇವೆ. ಪ್ರತಿ ಹಂತದಲ್ಲಿಯೂ ನಾನು ಮತ್ತು ಇತರ ಔಷಧ ವಿಜ್ಞಾನಿಗಳು ನಮ್ಮ ಅನುಭವವನ್ನು ಧಾರೆ ಎರೆಯುತ್ತೇವೆ. ಆದರೆ ಇದರಿಂದ ವೈಯಕ್ತಿಕವಾಗಿ ನಮಗೆ ಯಾವುದೇ ಆರ್ಥಿಕ ಲಾಭ ಇರುವುದಿಲ್ಲ' ಎಂದು ಡಾ ನರಸಿಂಹಮೂರ್ತಿ ವಿವರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+