ಬೆಂಗಳೂರು: ಪಿಜಿ ಮಾಲೀಕನ ಹತ್ಯೆ, ಅಡುಗೆ ಭಟ್ಟನ ಮೇಲೆ ಶಂಕೆ

ಬೆಂಗಳೂರು, ಡಿಸೆಂಬರ್ 13: ಮೈಕೊ ಲೇಔಟ್ ನ ಬಾರ್ ರಸ್ತೆಯ ಪಿಜಿಯೊಂದರ ಅಡುಗೆ ಮನೆಯಲ್ಲಿ ಅದೇ ಪಿಜಿ ಮಾಲೀಕನ ಶವ ಪತ್ತೆಯಾಗಿದೆ.

ಪಿಜಿ ಮಾಲೀಕ ತಿರುಪಾಲ ರೆಡ್ಡಿ ಅವರನ್ನು ಯಾರೊ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ, ಪಿಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇಂದು ಬೆಳಿಗ್ಗೆ ತಿಪಾಲ ರೆಡ್ಡಿಯ ಮಗ ಪಿಜಿಗೆ ಬಂದಾಗ ಅಡುಗೆ ಮನೆಯಲ್ಲಿ ಬಿದ್ದಿದ್ದ ತನ್ನ ತಂದೆಯ ಶವ ನೋಡಿ ಕಿರುಚಿದಾಗ ಕೊಲೆಯ ವಿಷಯ ತಿಳಿದುಬಂದಿದೆ.

Bangalore, PG Owner found dead police doubt on pg's chef

ನಿನ್ನೆ ರಾತ್ರಿ (ಡಿಸೆಂಬರ್ 12) ಪಿಜಿ ಮಾಲೀಕ ತಿರುಪಾಲ ರೆಡ್ಡಿಗೂ ಅಡುಗೆ ಭಟ್ಟನಿಗೂ ಹಣಕಾಸಿನ ವಿಷಯಕ್ಕೆ ಜಗಳವಾಗಿತ್ತು, ಅದೇ ವೈಷಮ್ಯದಿಂದ ಅಡುಗೆ ಭಟ್ಟನೇ ತಿರುಪಾಲ ರೆಡ್ಡಿಯ ಕೊಲೆ ಮಾಡಿರಬಹುದು ಎನ್ನು ಶಂಕೆ ಬಲವಾಗಿದೆ.

ಬಿಹಾರ ಮೂಲದ ಅಡುಗೆ ಭಟ್ಟ ನಿನ್ನೆ ರಾತ್ರಿಯಿಂದಲೂ ಕಾಣುತ್ತಿಲ್ಲ, ಪಿಜಿಯಲ್ಲಿದ್ದ ಹಣವೂ ಕಾಣೆಯಾಗಿದೆ ಹಾಗಾಗಿ ಪೊಲೀಸರು ಅಡುಗೆ ಭಟ್ಟ ಕೊಲೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ ಎಂದಿದ್ದಾರೆ. ಕೊಲೆ ಮಾಡುವ ಮುಂಚೆ ಸಿಸಿಟಿವಿ ಆಫ್ ಮಾಡಿ ಮಾಡಿದ್ದರಿಂದ ನಿಖರವಾಗಿ ಕೊಲೆ ಮಾಡಿದವರು ಯಾರೆಂದು ತಿಳಿದುಬಂದಿಲ್ಲ.

ಮೈಕೋ ಲೇಔಟ್ ಪೊಲೀಸರು ಅಡುಗೆ ಭಟ್ಟನ ಬಂಧನಕ್ಕೆ ಬಲೆ ಬೀಸಿದ್ದಾರೆ, ಪಿಜಿಯಲ್ಲಿ ಅಡುಗೆ ಭಟ್ಟನ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಪೊಲೀಸರ ಕೆಲಸವನ್ನು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+