Namma Metro: ಬೆಂಗಳೂರಿನ ರಸ್ತೆ, ಮೆಟ್ರೋ ಜಾಗಗಳ ಅಭಿವೃದ್ಧಿಗೆ ಜನರಿಗೇ ಅವಕಾಶ!

Namma Metro: ಬೆಂಗಳೂರು: ಬೆಂಗಳೂರಿನ ಸಾರ್ವಜನಿಕ ರಸ್ತೆಗಳನ್ನು ಸುಂದರೀಕರಣ ಮಾಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿದೆ. ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸುಧಾರಿಸುವ ಹೊಸ ಪ್ಲ್ಯಾನ್‌ಗೆ ಬಿಬಿಎಂಪಿ ಮುಂದಾಗಿದೆ ಎಂದು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಹೇಳಿದ್ದಾರೆ.

ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರದೇಶ ಅಥವಾ ಸ್ಥಳಗಳ ಕುರಿತು ಕಾಳಜಿ ಇರುವ ಸಾರ್ವಜನಿಕರು ವಾಸ್ತು ಶಿಲ್ಪಿಗಳನ್ನು ಮತ್ತು ನಗರ ವಿನ್ಯಾಸ ತಜ್ಞರನ್ನು ಈ ಅಭಿಯಾನದಲ್ಲಿ ಭಾಗವಹಿಸಲು ಆಹ್ವಾನಿಸಲಾಗುತ್ತಿದೆ. ಅಭಿಯಾನದಲ್ಲಿ ಪಾಲ್ಗೊಳ್ಳುವವರ ಅನುಭವ ಮತ್ತು ಪರಿಣಿತಿ ಬಹುಮೌಲ್ಯವಾಗಿದೆ. ಸಾರ್ವಜನಿಕ ಸ್ಥಳಗಳು ಉತ್ತಮ ರೀತಿಯಲ್ಲಿ ಬದಲಾಯಿಸಲು ನಾಗರಿಕರ ಪ್ರತಿಕ್ರಿಯೆ ಕೂಡ ಬಹುಮುಖ್ಯ ಪಾತ್ರ ವಹಿಸುತ್ತಿದೆ.

People should be given the opportunity to develop Bengaluru s roads and metro areas

ಬಯಸಿದಂತೆ ಬಯಲು ಒಂದು ಯೋಜನಾ ಪ್ರಕ್ರಿಯೆಯಲ್ಲ, ಸಹಭಾಗಿತ್ವದ ಹಾದಿ. ನಗರದ ಜನ ದಯವಿಟ್ಟು ನಿಮ್ಮ ಸುತ್ತಲಿನ ಬೀದಿಯಲ್ಲಿ ಸೂಕ್ತವಾದ ಯಾವುದೇ ಜಾಗವಿದ್ದಲ್ಲಿ ತಿಳಿಸಲು ತಿಳಿಸಿ ಅದನ್ನು ಪುನರುಜ್ಜೀವನಗೊಳಿಸಿ ಆಕರ್ಷಕವಾಗಿರುವಂತೆ ವಿನ್ಯಾಸಗೊಳಿಸಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಲಿಕೆಯಿಂದ ಹೊಸ ಅಭಿಯಾನ: ಜೂನ್ 19, 2025 ರವರೆಗೆ ಅರ್ಜಿ ಸಲ್ಲಿಸಿ: ಬೆಂಗಳೂರಿನಲ್ಲಿ "ಸಾರ್ವಜನಿಕ ಸ್ಥಳಗಳ ಪುನಶ್ಚೇತನ"ಗೊಳಿಸುವ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ. ತಮ್ಮ ನಿವಾಸದ ಸುತ್ತಲಿನ ಬೀದಿಗಳ ಬಳಿ ಉಪಯೋಗವಿಲ್ಲದ ಸಾರ್ವಜನಿಕ ಸ್ಥಳಗಳನ್ನು ಸೂಚಿಸಲು ಕೋರಲಾಗಿದೆ. ಸ್ಥಳಗಳ ಸೂಚನೆಗಾಗಿ ಸಮುದಾಯ ಗುಂಪುಗಳು, ವಾಸ್ತು ಶಿಲ್ಪಿಗಳು, ನಗರ ವಿನ್ಯಾಸಕಾರರು ಮತ್ತು ಶೈಕ್ಷಣಿಕ ಸಂಸ್ಥೆಗಳ ವಿನ್ಯಾಸ ತಜ್ಞರು ಅರ್ಜಿ ಜೂನ್ 19, 2025 ರವರೆಗೆ ಅರ್ಜಿಗಳನ್ನು https://www.blrpublicspace-revival.in ವೆಬ್‌ಸೈಟ್ ಮೂಲಕ ಸಲ್ಲಿಸಬಹುದು.

ಸಾರ್ವಜನಿಕ ಸ್ಥಳಗಳ ಪುನಶ್ಚೇತನಕ್ಕಾಗಿ ಗುರುತಿಸಲಾದ ಪ್ರಮುಖ ನಾಲ್ಕು ಬಗೆಯ ಸಾರ್ವಜನಿಕ ಜಾಗಗಳು:

1. ಸಾಮೂಹಿಕ ಜಾಗಗಳು - ವಿಶ್ರಾಂತಿಗೆ, ಪೂಜೆ ಮುಂತಾದವುಗಳಿಗೆ ಬಳಸುವ ಸ್ಥಳಗಳು (ಉದಾ: ಕಟ್ಟೆಗಳು, ಊರ ಹಿತ್ತಲ ಜಾಗಗಳು, ಬೀದಿ ಮೂಲೆಗಳು).

2. ಬಳಸದಿರುವ ಜಾಗಗಳು - ಮೇಲ್ಸೇತುವೆ/ಮೆಟ್ರೋ ಮಾರ್ಗದ ಕೆಳಭಾಗ, ಉದ್ಯಾನವನ/ಕೆರೆ/ ರಾಜಕಾಲುವೆಗಳ ಇಕ್ಕೆಲಗಳು, ಇತ್ಯಾದಿ ಸಾರ್ವಜನಿಕ ಮೂಲಸೌಕರ್ಯಗಳ ಪಕ್ಕದ ಉಪಯೋಗವಿಲ್ಲದ ಜಾಗಗಳು.

3. ಬಹುಪಯೋಗಿ ಬೀದಿಗಳು: - ತಿನಿಸು ಬೀದಿಗಳು, ವ್ಯಾಪಾರ/ಮಾರುಕಟ್ಟೆ ಬೀದಿಗಳು, ನಡೆಯಲು ಬಳಸುವ ಬೀದಿಗಳು, ಶಾಲೆಗಳ ಪ್ರವೇಶ ವಲಯಗಳು, ಇತ್ಯಾದಿ ಹಲವಾರು ಉದ್ದೇಶಗಳಿಗೆ ಬಳಸುವ ಬೀದಿಗಳು.

4. ಸಾರಿಗೆ ಮತ್ತು ಸಂಚಾರಕ ಜಾಗಗಳು - ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ರಸ್ತೆ ದ್ವೀಪಗಳು, ಪಾದಚಾರಿ ಮೇಲ್ಸೇತುವೆ/ಕೆಳಸೇತುವೆ ಮುಂತಾದವು.

ಗುರುತಿಸಿರುವ ಸಾರ್ವಜನಿಕ ಸ್ಥಳಗಳನ್ನು ಪ್ರಾಯೋಗಿಕವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಆಯ್ಕೆಯಾದ ಸ್ಥಳಗಳನ್ನು ಉಪಯೋಗವಿಲ್ಲದ ಜಾಗಗಳನ್ನು ನಗರಮಟ್ಟದ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಮತ್ತು ಕೆಲವೆಡೆ ಬಿಬಿಎಂಪಿಯು ಮುಂದಿನ ಐದು ವರ್ಷಗಳಲ್ಲಿ ಪುನರ್ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ.

ಅಭಿವೃದ್ಧಿಪಡಿಸಲು ಗುರುತಿಸಿರುವ ಸ್ಥಳಗಳನ್ನು ಸಾರ್ವಜನಿಕರಿಗೆ, ವಿಶೇಷವಾಗಿ ಆ ಪ್ರದೇಶದಲ್ಲಿ ವಾಸಿಸುವ, ಕೆಲಸಮಾಡುವ ಅಥವಾ ಸಂಚರಿಸುವ ಜನರಿಗೆ ಲಾಭವಾಗುವಂಥದಾಗಿರಬೇಕು. ಸ್ಥಳ ಸುಧಾರಣೆಯ ದೃಷ್ಟಿಕೋನದಲ್ಲಿ ಭದ್ರತೆ ಹೆಚ್ಚಿಸುವುದು, ಸಮುದಾಯ ಸಂವಹನಕ್ಕೆ ಸ್ಥಳ ಸೃಷ್ಟಿಸುವುದು, ವಿಶ್ರಾಂತಿ/ಆಟದ ಸ್ಥಳಗಳು, ನಡೆದು ಹೋಗುವ ಮತ್ತು ಸೈಕ್ಲಿಂಗ್ ಅವಕಾಶ ನೀಡುವುದು ಸೇರಿದಂತೆ ಹಲವು ಅಂಶಗಳು ಸೇರಿವೆ.

ಈ ಕಾರ್ಯಕ್ರಮವನ್ನು ಬಿಬಿಎಂಪಿಯು ಸಂಯೋಜಿಸಿದ್ದು, ಕರ್ನಾಟಕ ಶಾಖೆ ಐ.ಯು.ಡಿ.ಐ., ಸಸ್ಟೇನಬಲ್ ಮೊಬಿಲಿಟಿ ನೆಟ್‌ವರ್ಕ್ ಮತ್ತು ಬೆಂಗಳೂರು ವಾರ್ಡ್ ಸಮಿತಿ ಬಳಗದ ಸಹಯೋಗದಲ್ಲಿ ನಡೆಸಲಾಗುತ್ತಿದೆ.

ನೀವು ಭಾಗವಹಿಸಿ. ನಿಮ್ಮ ಪ್ರದೇಶದ ಸಾರ್ವಜನಿಕ ಸ್ಥಳವನ್ನು ಸೂಚಿಸಿ. ಬೆಂಗಳೂರು ಬೀದಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಪಾಲ್ಗೊಳ್ಳಿ.
ಯೋಜನೆಯ ವೆಬ್‌ಸೈಟ್ - https://www.blrpublicspace-revival.in ಲಿಂಕ್‌ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+