ಲಾಂಗ್‌ ವೀಕೆಂಡ್‌ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವ ಜನ- ಇಂದು ಸಂಜೆ, ನಾಳೆ ಬೆಳಿಗ್ಗೆ ಭಾರೀ ಟ್ರಾಫಿಕ್‌ ಸಾಧ್ಯತೆ: ಎಲ್ಲೆಲ್ಲಿ?

ಬೆಂಗಳೂರು, ಅಕ್ಟೋಬರ್‌ 02: ಸುರ್ದೀರ್ಘ ರಜೆ ಅವಧಿಯನ್ನು ಮುಗಿಸಿ ಮತ್ತೆ ಐಟಿ ಸಿಟಿ ಬೆಂಗಳೂರಿಗೆ ಜನರು ವಾಪಸ್‌ ಬರುತ್ತಿದ್ದಾರೆ. ಇದರಿಂದ ಸಹಜವಾಗಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಅಧಿಕವಾಗಿರುತ್ತದೆ. ಕಳೆದ ಮೂರು ದಿನಗಳ ಹಿಂದೆ ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು

ಬೆಂಗಳೂರಿಗೆ ಮೈಸೂರು, ಚೆನ್ನೈ, ಹೈದರಾಬಾದ್‌ ತುಮಕೂರು, ಮಂಗಳೂರು, ಶಿವಮೊಗ್ಗ ಹೀಗೆ ಹಲವಾರು ನಗರಗಳಿಗೆ ಸಂಪರ್ಕ ಸಾಧಿಸಿರುವುದರಿಂದ ಹೆಚ್ಚೆಚ್ಚು ವಾಹನ ದಟ್ಟಣೆ ಉಂಟಾಗಿ ಜನರು ಹೈರಾಣಗುತ್ತಾರೆ. ಈದ್‌ ಮಿಲಾದ್‌, ಶುಕ್ರವಾರ ಕರ್ನಾಟಕ ಬಂದ್‌, ಶನಿವಾರ ಹಾಗೂ ಭಾನುವಾರ ರಜೆ, ಸೋಮವಾರ ಗಾಂಧಿ ಜಯಂತಿ ಸೇರಿದಂತೆ 4 ದಿನಗಳ ದೀರ್ಘ ರಜೆಯು ಮುಗಿದಿದ್ದು, ಮಂಗಳವಾರದಿಂದ ಮತ್ತೆ ಕಚೇರಿಗಳು ಆರಂಭಗೊಳ್ಳುತ್ತವೆ. ಹೀಗಾಗಿ ಮಂಗಳವಾರ ಸಂಜೆಯಿಂದಲೇ ಬೆಂಗಳೂರಿನ ಟ್ರಾಫಿಕ್‌ ವೈಬ್‌ ಕಂಡು ಬರುತ್ತದೆ.

people-returning-to-bengaluru

ಬೆಂಗಳೂರಿನಲ್ಲಿ ಅತ್ಯಧಿಕವಾಗಿ ವಾಹನ ದಟ್ಟಣೆ ಉಂಟಾಗುವ ಪ್ರದೇಶಗಳೆಂದರೆ ಮಾರತಹಳ್ಳಿ, ವೈಟ್‌ಫೀಲ್ಡ್‌, ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಹೊರ ವರ್ತುಲ ರಸ್ತೆ, ಮೇಕ್ರಿ ಸರ್ಕಲ್, ಟಿನ್ ಫ್ಯಾಕ್ಟರಿ, ಕೆಆರ್‌ ಪುರಂ ತೂಗುಸೇತುವೆ, ಸಿಲ್ಕ್‌ ಬೋರ್ಡ್‌ ಪ್ರದೇಶ ಇವೇ ಮೊದಲಾದವು.

ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಲು ಇಲ್ಲಿ ರಾಷ್ಟ್ರೀಯ ಹೆದ್ದಾರಿಗಳು ನಗರದೊಳಗೆ ಸಾಗುವುದೇ ಬಹುಮುಖ್ಯ ಕಾರಣವಾಗಿದೆ. ಹೀಗಾಗಿ ಇದಕ್ಕೆ ಹಲವಾರು ಪರಿಹಾರ ಕ್ರಮಗಳನ್ನು ಹುಡುಕಲಾಗುತ್ತಿದೆ. ಈಗ ಸುದೀರ್ಘ ರಜೆ ಮುಗಿಸಿ ಬರುವ ಜನರು ಮೇಲೆ ತಿಳಿಸಲಾದ ಎಲ್ಲ ರಸ್ತೆಗಳಲ್ಲಿ ಒಟ್ಟಿಗೆ ಸಿಲುಕುವ ಸಂಭವವಿದೆ. ಹೀಗಾಗಿ ಆದಷ್ಟು ಬೇಗ ಇಲ್ಲವೇ ರಾತ್ರಿ ಬಂದು ಮನೆ ಮುಟ್ಟಬಹುದಾಗಿದೆ.

ಆಫೀಸ್‌ಗೆ ಮನೆ ಹತ್ತಿರ ಇರುವವರೂ ಬೆಂಗಳೂರು ಟ್ರಾಫಿಕ್‌ಗೆ ಹೆದರಿ ಮಂಗಳವಾರ ಬೆಳಗ್ಗೆಯೂ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ನಿರಂತರ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹಲವಾರು ಪ್ರಮುಖ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳು ಅಲ್ಲದೆ ಬಹಳಷ್ಟು ಜನ ತಮ್ಮದೇ ವಾಹನದಲ್ಲಿ ಊರಿನ ಕಡೆಯಿಂದ ಮನೆ ಸೇರಿಕೊಳ್ಳುವ ಧಾವಂತದಲ್ಲಿ ಇರುತ್ತಾರೆ.

ಪ್ರಯಾಣಿಕರಿಗೆ ವಾಹನ ದಟ್ಟಣೆಯ ಚಿಂತೆಯಾದರೆ ಖಾಸಗಿ ವಾಹನಗಳ ಮಾಲೀಕರಿಗೆ ದುಡ್ಡು ಮಾಡಿಕೊಳ್ಳುವ ದೊಡ್ಡ ಅವಕಾಶವೂ ಇದಾಗಿದೆ. ಪ್ರಯಾಣ ದರ ಬರೋಬ್ಬರಿ ಶೇಕಡ 20ರಿಂದ 30 ರಷ್ಟು ದರ ಏರಿಕೆಯಾಗಿರುತ್ತದೆ. ಭಾನುವಾರ ನಂದಿ ಬೆಟ್ಟಕ್ಕೆ ಜನರು ಭಾರಿ ಸಂಖ್ಯೆಯಲ್ಲಿ ಹೋಗಿದ್ದರಿಂದ ಕಿಲೋಮೀಟರ್‌ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಕುಖ್ಯಾತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಹೊರ ವರ್ತುಲ ರಸ್ತೆ ಕಂಪೆನಿಗಳ ಸಂಘದಿಂದ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಟ್ರಾಫಿಕ್‌ ನಿಯಂತ್ರಣಕ್ಕೆ ಹಲವು ಮಾರ್ಗೋಪಾಯಗಳನ್ನು ಸೂಚಿಸಿದ್ದಾರೆ.

ಅವುಗಳಲ್ಲಿ ಹೊರ ವರ್ತುಲ ರಸ್ತೆಯ 18 ಕಿಮೀ ವ್ಯಾಪ್ತಿಯಲ್ಲಿ 36 ಚಾಕ್ ಪಾಯಿಂಟ್‌ಗಳನ್ನು ನಿಗದಿಪಡಿಸುವುದು, ಖಾಸಗಿ ನಿರ್ವಾಹಕರಿಂದ ಕಾರ್ಯನಿರತ ಪೂಲಿಂಗ್‌ಗೆ ಅವಕಾಶ ನೀಡುವಂತೆ ಒಆರ್‌ಆರ್‌ಸಿಎ ಸಂಚಾರ ಇಲಾಖೆಗೆ ಮನವಿ, ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸುವುದು ಸೇರಿದೆ. 18 ಕಿಮೀ ವ್ಯಾಪ್ತಿಯಲ್ಲಿ ಹೊರ ವರ್ತುಲ ರಸ್ತೆಯುದ್ದಕ್ಕೂ 500 ಕ್ಕೂ ಹೆಚ್ಚು ಕಂಪನಿಗಳಿವೆ. ಈ ಕಂಪನಿಗಳಲ್ಲಿ 9.5 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+