'ಸ್ಮಾರ್ಟ್ ಸಿಟಿಯಾಗಿ ಪೀಣ್ಯ, ವೈಟ್‌ಫೀಲ್ಡ್ ಅಭಿವೃದ್ಧಿ'
ಬೆಂಗಳೂರು, ಜೂ. 26 : ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ. ಆದ್ದರಿಂದ ಪೀಣ್ಯ ಮತ್ತು ವೈಟ್‌ಫೀಲ್ಡ್ ಅನ್ನು ಈ ಯೋಜನೆಯಡಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಪೀಣ್ಯ ಕೈಗಾರಿಕಾ ಸಂಘ ಹಮ್ಮಿಕೊಂಡಿದ್ದ ಪಿಐಎ ಎಕ್ಸ್‌ಪೋ-2015ಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು ಪೀಣ್ಯ ಮತ್ತು ವೈಟ್‌ಫೀಲ್ಡ್‌ಅನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. [ಸಿಎಂ ಬೆಂಗಳೂರು ರೌಂಡ್ಸ್ : ಪೀಣ್ಯ ಅಭಿವೃದ್ಧಿಗೆ 100 ಕೋಟಿ]

ಕೇಂದ್ರ ಸರ್ಕಾರ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಬೆಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುವುದಿಲ್ಲ. ಆದ್ದರಿಂದ ಪೀಣ್ಯ ಮತ್ತು ವೈಟ್‌ಫೀಲ್ಡ್ ಆಯ್ಕೆ ಮಾಡಿಕೊಳ್ಳುವಂತೆ ಚರ್ಚೆ ನಡೆಸಲಾಗಿದೆ ಎಂದರು. [ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ಪ್ರಯಾಣದರ ಪಟ್ಟಿ]
ಪೀಣ್ಯದಲ್ಲಿ ಟೌನ್ ಶಿಪ್ ನಿರ್ಮಾಣ : ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಪೀಣ್ಯದಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. [ನಗರಗಳನ್ನು 'ಸ್ಮಾರ್ಟ್' ಮಾಡುವ 3 ಯೋಜನೆಗೆ ಚಾಲನೆ]
ಮುಂಗಾರು ಅಧಿವೇಶನ ಮುಗಿದ ಬಳಕ ಪೀಣ್ಯದ ಕೈಗಾರಿಕೋದ್ಯಮಿಗಳ ಸಮಸ್ಯೆ ಆಲಿಸಿ, ಪರಿಹರಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತದೆ. ಕೈಗಾರಿಕಾ ಸಂಘಗಳು ಹಾಗೂ ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ವಿವರಣೆ ನೀಡಿದರು.












Click it and Unblock the Notifications