ಬೆಂಗಳೂರು : ಟೆಂಡರ್ ಶ್ಯೂರ್ ರಸ್ತೆಯಲ್ಲಿ ಪೇ ಅಂಡ್ ಪಾರ್ಕ್

ಬೆಂಗಳೂರು, ಜುಲೈ 10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಾರ್ಕಿಂಗ್ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಇದರ ಅನ್ವಯ ಟೆಂಡರ್‌ ಶ್ಯೂರ್‌ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ 2 ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಹಣ ಪಾವತಿ ಮಾಡಬೇಕಾಗಿದೆ.

ಜನಸ್ನೇಹಿಯಾದ ಪಾರ್ಕಿಂಗ್ ನೀತಿಯನ್ನು ಬಿಬಿಎಂಪಿ ಜಾರಿಗೆ ತರಲಿದೆ. ಸೇಂಟ್‌ ಮಾರ್ಕ್ಸ್‌ ಮತ್ತು ವಿಠಲ ಮಲ್ಯ ರಸ್ತೆಗಳಲ್ಲಿ ಈ ಹೊಸ ಪಾರ್ಕಿಂಗ್ ಶುಲ್ಕ ಶೀಘ್ರದಲ್ಲೇ ಜಾರಿಗೆ ಬರಲಿದೆ. ಪಾರ್ಕಿಂಗ್ ಶುಲ್ಕದ ದರವನ್ನು ಬಿಬಿಎಂಪಿ ಅಧಿಕಾರಿಗಳು ಅಂತಿಮಗೊಳಿಸಿದ್ದು, ಸರ್ಕಾರದ ಒಪ್ಪಿಗೆ ಬೇಕಾಗಿದೆ. [ಟೆಂಡರ್ ಶ್ಯೂರ್ ರಸ್ತೆ ವಿಶೇಷಗಳೇನು?]

road

ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಸೇಂಟ್‌ ಮಾರ್ಕ್ಸ್‌ ಮತ್ತು ವಿಠಲ ಮಲ್ಯ ರಸ್ತೆಗಳಲ್ಲಿ ಸದ್ಯ ಉಚಿತವಾಗಿ ಪಾರ್ಕಿಂಗ್ ಮಾಡಬಹುದಾಗಿದೆ. ಆದರೆ, ಈ ಪಾರ್ಕಿಂಗ್ ನೀತಿ ಜಾರಿಗೆ ಬಂದ ಬಳಿಕ ಹಣ ಪಾವತಿ ಮಾಡಬೇಕಾಗುತ್ತದೆ. [ಬೆಂಗಳೂರು : ಟ್ಯಾಕ್ಸಿ ದರ ಹೆಚ್ಚಳ]

ಬಿಬಿಎಂಪಿ 2014ರ ಡಿಸೆಂಬರ್‌ನಲ್ಲಿಯೇ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಅದನ್ನು ಜಾರಿಗೆ ತರಲು ಮುಂದಾಗಿದ್ದು, ಪ್ರಾಯೋಗಿಕವಾಗಿ ಎರಡು ರಸ್ತೆಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಪಾರ್ಕಿಂಗ್ ಶುಲ್ಕಗಳು

* ಎ ಜೋನ್ : ಕಾರು 30 ರೂ., ಬೈಕ್ 10 ರೂ. (ಒಂದು ಗಂಟೆಗೆ)
* ಬಿ ಜೋನ್ : ಕಾರು 20 ರೂ., ಬೈಕ್ 8 ರೂ. (ಒಂದು ಗಂಟೆಗೆ)
* ಸಿ ಜೋನ್ : ಕಾರು 10 ರೂ., ಬೈಕ್ 5 ರೂ. (ಒಂದು ಗಂಟೆಗೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+