Bengaluru: ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನ ಚಪ್ಪಲಿಯಲ್ಲಿ ಸಿಕ್ಕಿದ್ದು ಕೆಜಿಗಟ್ಟಲೇ ಚಿನ್ನ
ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಪ್ರಯಾಣಿಕನೊಬ್ಬನನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು, ಮಾರ್ಚ್ 16: ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಪ್ರಯಾಣಿಕನೊಬ್ಬನನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಪ್ಪಲಿಯಲ್ಲಿ ಬಚ್ಚಿಟ್ಟು ಕೆಜಿಗಟ್ಟಲೇ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಆರೋಪಿ ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
#WATCH | Gold weighing 1.2 kg worth Rs 69.40 lakh seized from a slipper of a passenger who arrived from Bangkok in Bengaluru by IndiGo flight: Customs pic.twitter.com/4dBwb5Dhpv
— ANI (@ANI) March 15, 2023
'ಇಂಡಿಗೋ ಏರ್‌ವೇಸ್ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರನ್ನು ತಪಾಸಣೆಗಾಗಿ ನಿಲ್ಲಿಸಲಾಯಿತು. ಪ್ರಯಾಣಿಕರಲ್ಲಿ ಒಬ್ಬ ಅನುಮಾನಸ್ಪದವಾಗಿ ಕಂಡುಬಂದ. ಆತನಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ತಪಾಸಣೆ ಮಾಡಲಾಯಿತು. ಆತನ ಚಪ್ಪಲಿಗಳಲ್ಲಿ ಹುದುಗಿದ್ದ ಒಟ್ಟು ನಾಲ್ಕು ಬಂಗಾರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆತನ ಚಪ್ಪಲಿಯಲ್ಲಿ 69.40 ಲಕ್ಷ ರೂ ಮೌಲ್ಯದ ಚಿನ್ನ ಸಿಕ್ಕಿದೆ. ಚಪ್ಪಲಿಗಳ ಒಳಗಿದ್ದ ಚಿನ್ನದ ತುಂಡುಗಳನ್ನು ಸ್ಕ್ಯಾನ್ ಮಾಡುವಾಗ ಕಂಡುಹಿಡಿಯಲಾಯಿತು. ಕಸ್ಟಮ್ಸ್ ಅಧಿಕಾರಿಗಳು ಈಗ ಹೆಚ್ಚು ಜಾಗರೂಕರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
24 ಕ್ಯಾರಟ್ ಶುದ್ಧತೆ ಹೊಂದಿರುವ ಕನಿಷ್ಠ 1.2 ಕೆಜಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬೆಲೆ 69.40 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ಮಾರ್ಚ್ 12 ರಂದು, ಇಂಡಿಗೋ ವಿಮಾನ 6E 76 ಮೂಲಕ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ತಡೆದರು. ಪ್ರಯಾಣದ ಉದ್ದೇಶವನ್ನು ಕೇಳಿದಾಗ, ಪ್ರಯಾಣಿಕನು ವೈದ್ಯಕೀಯ ಉದ್ದೇಶಕ್ಕಾಗಿ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿದರು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಆದರೆ, ಯಾವುದೇ ಮಾನ್ಯ ವೈದ್ಯಕೀಯ ದಾಖಲೆಗಳನ್ನು ನೀಡಲು ಪ್ರಯಾಣಿಕನಿಗೆ ಸಾಧ್ಯವಾಗಿಲ್ಲ. ಇದು ಅಧಿಕಾರಿಗಳಿಗೆ ಅನುಮಾನ ಮೂಡಿಸಿದೆ ಎಂದು ತಿಳಿದುಬಂದಿದೆ.
ಅದರಂತೆ ಪ್ರಯಾಣಿಕನನ್ನು ಕೂಲಂಕಷ ತಪಾಸಣೆಗೆ ಒಳಪಡಿಸಲಾಯಿತು. ಆತನ ಬ್ಯಾಗ್ ಮತ್ತು ಚಪ್ಪಲಿಗಳನ್ನು ತಪಾಸಣೆ ಮಾಡಿಲಾಯಿತು. ಸ್ಕ್ಯಾನಿಂಗ್ ಮಾಡಿದಾಗ, ಪ್ರಯಾಣದ ವೇಳೆ ಧರಿಸಿದ್ದ ಚಪ್ಪಲಿಯಲ್ಲಿ ಕಟ್ ಪೀಸ್ ರೂಪದಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಚಪ್ಪಲಿಗಳನ್ನು ತುಂಡರಿಸಿ 1.2 ಕೆಜಿ ತೂಕದ 4 ಕತ್ತರಿಸಿದ ಚಿನ್ನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿಯಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಜೀನ್ಸ್ ಒಳಗೆ ಬಚ್ಚಿಟ್ಟಿದ್ದ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದರು. ಆರೋಪಿಯೂ ಬ್ಯಾಂಕಾಕ್‌ನಿಂದ ಪ್ರಯಾಣಿಸುತ್ತಿದ್ದ. ಆತನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಜನವರಿಯಲ್ಲಿ, ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಮೂವರು ಪ್ರಯಾಣಿಕರನ್ನು ತಡೆದ ನಂತರ ಹಾವುಗಳು ಸೇರಿದಂತೆ 18 ಸ್ಥಳೀಯವಲ್ಲದ ಪ್ರಾಣಿಗಳನ್ನು ವಶಪಡಿಸಿಕೊಂಡರು. ಇವುಗಳನ್ನು ಫಾರ್ಮ್‌ಹೌಸ್ ಒಂದರಲ್ಲಿ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ತಿಳಿದುಬಂದಿದೆ. ಆ ಫಾರ್ಮಹೌಸ್‌ನಲ್ಲಿ 48 ಅತ್ಯಂತ ಅಪರೂಪದ ಪ್ರಾಣಿಗಳು ಕಂಡುಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು.
ಹಳದಿ ಮತ್ತು ಹಸಿರು ಅನಕೊಂಡ, ಹಳದಿ ತಲೆಯ ಅಮೆಜಾನ್ ಗಿಳಿ, ನೈಲ್ ಮಾನಿಟರ್, ರೆಡ್ ಫೂಟ್ ಆಮೆ, ಇಗ್ವಾನಾಸ್, ಬಾಲ್ ಹೆಬ್ಬಾಗಳು, ಅಲಿಗೇಟರ್ ಗಾರ್, ಯಾಕಿ ಮಂಕಿ, ಮುಸುಕು ಹಾಕಿದ ಗೋಸುಂಬೆ, ರಾಕೂನ್ ನಾಯಿ, ಬಿಳಿ ತಲೆಯ ಪಿಯೋನಸ್ ಮತ್ತು ಇತರ ಅಪರೂಪದ ಜಾತಿಗಳ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಈ ಪ್ರಾಣಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಲಾಯಿತು.












Click it and Unblock the Notifications