ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಜಗಳ, 10 ರೂ.ಗೆ ಕೊಲೆ!

ಬೆಂಗಳೂರು, ಮೇ 10 : ಬೆಂಗಳೂರಿನ ಲಾವಣ್ಯ ಚಿತ್ರಮಂದಿರದ ಪಾರ್ಕಿಂಗ್ ಲಾಟ್‌ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪಾರ್ಕಿಂಗ್ ವಿಚಾರದಲ್ಲಿ ಜಗಳ ನಡೆದು 10 ರೂ.ಗಾಗಿ ಕೊಲೆ ನಡೆದಿದೆ.

ಭಾರತಿ ನಗರ ಪೊಲೀಸರು ಕೊಲೆ ಆರೋಪಿ ಸೆಲ್ವರಾಜ್‌ನನ್ನು ಬಂಧಿಸಿದ್ದಾರೆ. ಕೊಲೆಯಾದ ಯುವಕನನ್ನು ಭರಣಿಧರ್ (25) ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಹುಡುಕಾಟ ನಡೆದಿದೆ.

ಆಸ್ಟಿನ್ ಟೌನ್ ನಿವಾಸಿ ಭರಣಿಧರ್ ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾವಣ್ಯ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದರು. ಪಾರ್ಕಿಂಗ್ ಲಾಟ್‌ನಲ್ಲಿ ಬೈಕ್ ನಿಲ್ಲಿಸಲು ತೆರಳಿದ್ದರು.

Parking issue youth murdered in Bengaluru

ಪಾರ್ಕಿಂಗ್ ಲಾಟ್‌ ನೋಡಿಕೊಳ್ಳುತ್ತಿದ್ದ ಸೆಲ್ವರಾಜ್ ಮತ್ತು ಕೆಲವರು 20 ರೂ.ಗಳನ್ನು ನೀಡಬೇಕ ಎಂದು ಕೇಳಿದ್ದಾರೆ. ಆದರೆ, ಕೇವಲ 10 ರೂ.ಗಳನ್ನು ನೀಡುವುದಾಗಿ ಭರಣಿಧರ್ ಹೇಳಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಜಗಳ ನಡೆದಿದೆ.

ಜಗಳ ವಿಕೋಪಕ್ಕೆ ಹೋಗಿದ್ದು ಸೆಲ್ವರಾಜ್ ಮತ್ತು ಇತರರು ಸೇರಿ ಭರಣಿಧರ್ ಅವರನ್ನು ಹತ್ಯೆ ಮಾಡಿದ್ದಾರೆ. ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ ದಾಖಲಾಗಿದೆ. ಸೆಲ್ವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕ ವಿಚಾರಕ್ಕೆ ಚಾಕು ಇರಿತ : ಮೊಬೈಲ್ ಕಳ್ಳತನ ಮಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಯುವಕನಿಗೆ ಚಾಕು ಇರಿದ ಘಟನೆ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ನಡೆದಿತ್ತು. 23 ವರ್ಷದ ಯುವಕನಿಗೆ ಸ್ನೇಹಿತರು ಚಾಕು ಇರಿದ್ದರು.

ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಯುವಕನ ಮೇಲೆ ಹಾಡಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಕ್ಷುಲ್ಲಕ ವಿಚಾರಗಳಿಗೆ ಗಲಾಟೆಗಳು ನಡೆಯುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+