• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆ ಮುಂದೆ ಕಾರ್ ಪಾರ್ಕ್ ಮಾಡಿದರೂ ಬೀಳುತ್ತೆ ದಂಡ

|
   ಮನೆ ಮುಂದೆ ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡಿದರೆ ಬೀಳುತ್ತೆ ಫೈನ್ | Oneindia Kannada

   ಬೆಂಗಳೂರು, ಸೆಪ್ಟೆಂಬರ್ 05: ರಸ್ತೆ ನಿಯಮ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತಿರುವ ಹೊಸ ಟ್ರಾಫಿಕ್ ನಿಯಮಗಳು ಸೆಪ್ಟೆಂಬರ್ ಒಂದರಿಂದಲೇ ಜಾರಿಗೆ ಬಂದಿವೆ. ಈ ದಂಡಗಳ ಸಾಲಿಗೆ ಬೆಂಗಳೂರು ನಗರ ಪೊಲೀಸರು ಹೊಸ ದಂಡವೊಂದನ್ನು ಸೇರಿಸಿದ್ದಾರೆ.

   ಮನೆಯ ಮುಂದೆ ರಸ್ತೆಯಲ್ಲಿ ಕಾರು ಮಾರ್ಕ್ ಮಾಡಿದರೂ ದಂಡ ಬೀಳುತ್ತೆ ಎಂದು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರು ಇಂದು ಹೇಳಿದ್ದಾರೆ.

   ವಾಹನದ ಮೇಲೆ ಜಾತಿ, ಧರ್ಮ ಸೂಚಕ ಸ್ಟಿಕರ್ ಇದ್ದರೆ ದಂಡ

   ಕಾರು ತೆಗೆದುಕೊಳ್ಳಬೇಕು ಎಂದರೆ ಅದನ್ನು ಪಾರ್ಕ್ ಮಾಡಲು ಮನೆಯ ಕಾಂಪೌಂಡ್ ಒಳಗೆ ಜಾಗ ಇರಲೇಬೇಕು. ಮನೆಯ ಮುಂದಿನ ರಸ್ತೆಯಲ್ಲಿ ಕಾರನ್ನು ಪಾರ್ಕ್ ಮಾಡಿದರೆ ಮಾಲೀಕರು ದಂಡ ಪಾವತಿಸಬೇಕಾಗುತ್ತದೆ.

   ಜನದಟ್ಟಣೆಯಿಂದಾಗಿ ಕಿಷ್ಕಿಂದೆಯಂತಾಗಿರುವ ಬೆಂಗಳೂರಲ್ಲಿ ಬೆಂಕಿಪೊಟ್ಟಣದ ಸಾಲುಗಳಂತೆ ಮನೆಗಳು ಅಪಾರ್ಟ್‌ಮಿಂಟ್‌ಗಳು ನಿರ್ಮಾಣವಾಗಿವೆ. ಇದರಲ್ಲಿ ಬಹುತೇಕ ಮನೆಗಳಿಗೆ ಕಾರು ಪಾರ್ಕ್ ಮಾಡಲು ಸ್ಥಳವಿಲ್ಲ. ಅವರೆಲ್ಲ ಮನೆಯ ಮುಂದಿನ ರಸ್ತೆಯಲ್ಲಿಯೇ ಕಾರು ಪಾರ್ಕ್ ಮಾಡುತ್ತಿದ್ದಾರೆ. ಹೀಗಿದ್ದಾಗ ಆಯುಕ್ತರ ಸೂಚನೆ ಕಾರು ಮಾಲೀಕರಿಗೆ ಆತಂಕ ತಂದಿದೆ.

   ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?

   ಮೋಟಾರು ಕಾಯ್ದೆ ಹೊಸ ತಿದ್ದುಪಡಿ ಅನ್ವಯ ಸಣ್ಣ ಸಂಚಾರಿ ನಿಯಮ ಉಲ್ಲಂಘನೆಗೂ ಭಾರಿ ದಂಡ ತೆರಬೇಕಾಗಿದೆ. ಬೆಂಗಳೂರು ನಗರ ಒಂದರಲ್ಲೇ ಒಂದೇ ದಿನದಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿ ದಂಡದಿಂದ ವಸೂಲಿ ಆಗಿದೆ. ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳಿಗೂ ದಂಡ ವಿಧಿಸಲು ಪ್ರಾರಂಭಿಸಿದರೆ ಇನ್ನೂ ಹೆಚ್ಚು ಪ್ರಮಾಣದಲ್ಲಿ ದಂಡ ವಸೂಲಿ ಆಗಲಿದೆ.

   English summary
   Bengaluru city police commissioner Bhaskar Rao today said that car which parked on road in front of the house will attrack fine.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X