ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಕೆ ಬೇಕು ನಾನ್‌ವೆಜ್ ಬೇಕು: ಪರಪ್ಪನ ಅಗ್ರಹಾರ ಕೈದಿಗಳ ಪ್ರತಿಭಟನೆ!

|
Google Oneindia Kannada News

ಬೆಂಗಳೂರು, ಜೂನ್ 17: ಪರಪ್ಪನ ಅಗ್ರಹಾರದ ಕೈದಿಗಳು ಏಕಾ-ಏಕಿ ತಮ್ಮನ್ನು ಕಾವಲು ಕಾಯುತ್ತಿರುವ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೈದಿಗಳು ಹಠಾತ್ತನೆ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ತಮಗೆ ಮಾಂಸಾಹಾರ ನೀಡುತ್ತಿಲ್ಲ ಎಂಬುದು ಖೈದಿಗಳ ಸಿಟ್ಟಿಗೆ ಕಾರಣವಾಗಿದ್ದು, ಮಾಂಸಾಹಾರ ನೀಡುವಂತೆ ಒತ್ತಾಯಿಸಿ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಹತ್ವದ ನಡೆ: ವೃದ್ಧ ತಂದೆ-ತಾಯಿಯ ಹೊಣೆ ಹೊರದ ಮಕ್ಕಳಿಗೆ ಜೈಲೇ ಗತಿ! ಮಹತ್ವದ ನಡೆ: ವೃದ್ಧ ತಂದೆ-ತಾಯಿಯ ಹೊಣೆ ಹೊರದ ಮಕ್ಕಳಿಗೆ ಜೈಲೇ ಗತಿ!

ಸಾಮಾನ್ಯವಾಗಿ ಪ್ರತಿ ಭಾನುವಾರ ಕೈದಿಗಳಿಗೆ ಮಾಂಸಾಹಾರ ನೀಡುವ ಪ್ರತೀತಿ ಇದೆ. ಆದರೆ ಕೈದಿಗಳ ಆರೋಪದಂತೆ ಕಳೆದ 11 ತಿಂಗಳಿನಿಂದಲೂ ಅವರಿಗೆ ಮಾಂಸಾಹಾರ ನೀಡಿಲ್ಲವಂತೆ ಹಾಗಾಗಿ ಅವರು ಈ ಪ್ರತಿಭಟನೆ ಮಾಡುತ್ತಿದ್ದಾರೆ.

Parappana Agrahara jail prisoners protest against jail officers

ಮೂಲಗಳ ಮಾಹಿತಿ ಪ್ರಕಾರ ಖೈದಿಗಳು ನಾನ್ ವೆಜ್ ಆಹಾರ ಬೇಕೆಂದು ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೈದಿಗಳು ಅಧಿಕಾರಿಗಳ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಸಾವಿಗೆ ಕಾರಣ ಬಹಿರಂಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಸಾವಿಗೆ ಕಾರಣ ಬಹಿರಂಗ

ಅಷ್ಟೆ ಅಲ್ಲದೆ, ಜೈಲಿನಲ್ಲಿ ಭ್ರಷ್ಟಾಚಾರವೂ ಇದೆ ಎಂಬುದು ಕೈದಿಗಳ ಆರೋಪವಾಗಿದ್ದು, ಕೆಲವು ಅಧಿಕಾರಿಗಳನ್ನು ಪರಪ್ಪನ ಅಗ್ರಹಾರ ಜೈಲಿನ ಸೇವೆಯಿಂದ ವರ್ಗಾವಣೆ ಮಾಡಬೇಕು ಎಂಬ ಒತ್ತಾಯವನ್ನೂ ಕೈದಿಗಳು ಮಾಡಿದ್ದಾರೆ.

English summary
Parappa Agrahara jail prisoners protest against Jail officers for not giving Non veg food. Normally every Sunday Jail officers give non veg food to prisoners but prisoners accusing that officers not giving non veg food from last 11 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X