Panipuri: ಪಾನಿಪುರಿ ತಿನ್ನುವ ಮುನ್ನ ಎಚ್ಚರ! ಹೊಟ್ಟೆ ಕ್ಯಾನ್ಸರ್‌ಗೆ ದಾರಿ ಈ ಪಾನಿಪುರಿ..
ಬೆಂಗಳೂರು ಜೂನ್ 27: ಪಾನಿಪುರಿ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪಾನಿಪುರಿ ಸೇವನೆ ಮಾಡುವುದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ ಎಂದು ಆಹಾರ ಇಲಾಖೆ ಕಂಡುಹಿಡಿದೆ.
ಪಾನಿಪುರಿ ಅಂದರೆ ಬೇಡ ಎನ್ನುವವರಿಗಿಂತ ಬೇಕು ಎನ್ನುವವರೇ ಹೆಚ್ಚು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಪಾನಿಪುರಿ ನೆಚ್ಚಿನ ಸ್ನ್ಯಾಕ್ಸ್ ಆಗಿದೆ. ಕೆಲವರು ವಾರಕ್ಕೊಮ್ಮೆ ಪಾನೀಪುರಿ ತಿಂದರೆ ಇನ್ನೂ ಕೆಲವರು ನಿತ್ಯ ಪಾನಿಪುರಿ ತಿನ್ನುವವರಿದ್ದಾರೆ.

ಪಾನಿಪುರಿ ದೇಹಕ್ಕೆ ಎಷ್ಟು ಸುರಕ್ಷಿತ ಎಂದು ಕಂಡುಹಿಡಿಯಲು ಆಹಾರ ಇಲಾಖೆ ಅದರ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದೆ. ಈ ಪರೀಕ್ಷೆಯಲ್ಲಿ ಪಾನಿಪುರಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ವರದಿಗಳು ಬಹಿರಂಗಪಡಿಸಿವೆ.
ಬೆಂಗಳೂರಿನ ನಾನಾ ಭಾಗಗಳಲ್ಲಿ ಮಾರಾಟವಾಗುವ 243 ಪಾನಿಪುರಿ ಸ್ಯಾಂಪಲ್ಸ್ ತೆಗೆದುಕೊಂಡು ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಪಾನಿಪುರಿಯಲ್ಲಿ ಅಪಾಯಕಾರಿ ಕೆಮಿಕಲ್ಸ್ ಬಳಕೆ ಮಾಡುತ್ತಿರುವುದು ಬಹಿರಂಗವಾಗಿದೆ. ಪರೀಕ್ಷೆಗೆ ಒಳಪಡಿಸಿದ 243 ಸ್ಯಾಂಪಲ್ಸ್‌ಗಳ ಪೈಕಿ 43 ಬಳಕೆಗೆ ಅಂದರೆ ತಿನ್ನಲು ಅಸುರಕ್ಷಿತ ಎಂದು ತಿಳಿದು ಬಂದಿದೆ. ಇನ್ನಷ್ಟು ಪರೀಕ್ಷೆ ವರದಿಗಳು ಬರಬೇಕಿದೆ.

ಗೋಬಿ ತಯಾರಿಕೆಯಲ್ಲಿ ಅಪಾಯಕಾರಿ ಬಣ್ಣ ಬಳಕೆ ಮಾಡುವುದು ಕೆಲ ದಿನಗಳ ಹಿಂದೆ ಬಹಿರಂಗವಾಗಿತ್ತು. ಹೀಗಾಗಿ ಗೋಬಿಯಲ್ಲಿ ಅಪಾಯಕಾರಿ ಬಣ್ಣ ಬಳಕೆಗೆ ಸರ್ಕಾರ ನಿಷೇಧ ಕೂಡ ಹೇರಿದೆ. ಗೋಬಿ ಬಣ್ಣ ಬಯಲಾದ ಬಳಿಕ ಪಾನಿಪುರಿ ಸೇವೆನೆ ಆರೋಗ್ಯಕ್ಕೆ ಎಷ್ಟು ಸುರಕ್ಷಿತವಾಗಿದೆ ಎಂದು ಆಹಾರ ಇಲಾಖೆ ಕಂಡು ಹಿಡಿದಿದೆ.
ಪಾನಿಪುರಿ ಸೇವನೆಯಿಂದ ಹೊಟ್ಟೆ ಉಬ್ಬರ, ಹೊಟ್ಟೆ ಉರಿ, ಮೋಷನ್ ಅಲ್ಲದೆ ಹೊಟ್ಟೆ ಕ್ಯಾನ್ಸರ್ ಕೂಡ ಬರಬಹುದು. ನಿತ್ಯ ಪಾನಿಪುರಿ ತಿನ್ನುವವರಿಗೆ ಅಪಾಯ ತಪ್ಪಿದ್ದಲ್ಲ. ಪಾನಿಪುರಿಯಲ್ಲಿ ಐದು ಕೆಮಿಕಲ್ ಬಳಸುವುದಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಹೇಳಿದ್ದಾರೆ.

243 ಸ್ಯಾಂಪಲ್ಸ್‌ಗಳ ಸಂಪೂರ್ಣ ವರದಿ ಬಂದ ಬಳಿಕ ಖಾರ, ಸಾಸ್ ಮತ್ತು ಮೀಠಾ ಪಾನಿಪುರಿ ಬ್ಯಾನ್ ಮಾಡಬೇಕು ಅಂತ ಸರ್ಕಾರ ಚಿಂತನೆ ಮಾಡುತ್ತಿದೆ. ಇತ್ತೀಚೆಗೆ ಹೊಟ್ಟೆ ಕ್ಯಾನ್ಸರ್ 25% ಹೆಚ್ಚಾಗಿದೆ. ಇದಕ್ಕೆ ಕಾರಣ ಪಾನಿಪುರಿ ಆಗಿರಬಹುದು ಎನ್ನಲಾಗಿದೆ.
ಬೆಂಗಳೂರಿನ ಬೇರೆ ಬೇರೆ ಭಾಗಗಳಿಂದ 243 ಪಾನಿಪುರಿ ಸ್ಯಾಂಪಲ್ಸ್‌ಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಇನ್ನೂ ಸಂಪೂರ್ಣ ವರದಿ ಬಂದಿಲ್ಲ. ಈ ಪೈಕಿ 43 ಸ್ಯಾಂಪಲ್ಸ್ ಬಳಸಲು ಯೋಗ್ಯವಾಗಿಲ್ಲ. ಇದರಲ್ಲಿ ಬಳಸುವ ಖಾರ ಸಾಮಾನ್ಯ ಖಾರವಲ್ಲ. ಇದು ಕ್ಯಾನ್ಸರ್‌ನಂತಹ ಅಪಾಯಕಾರಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಅಲ್ಲದೆ ಇದರಲ್ಲಿ ಬಳಕೆ ಮಾಡುವ ಮೀಠಾ, ಸಾಸ್ ಕೂಡ ಬಳಕೆಗೆ ಯೋಗ್ಯವಲ್ಲ ಎಂದು ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಒಂದು ವೇಳೆ ಎಲ್ಲಾ ಸ್ಯಾಂಪಲ್‌ಗಳ ವರದಿಯಲ್ಲಿ ಪಾನಿಪುರಿ ತಿನ್ನಲು ಯೋಗ್ಯವಲ್ಲ ಅಂತಾದರೆ ಪಾನಿಪುರಿ ಮಾರಾಟ ಮಾಡುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಅದರಲ್ಲಿ ಬಳಕೆ ಮಾಡುವ ಐದು ಕೆಮಿಕಲ್ ನಿಷೇಧ ಮಾಡುವ ಲಕ್ಷಗಳು ದಟ್ಟವಾಗಿವೆ. ಒಂದು ಬಳಸಿದರೆ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಕೂಡ ಇದೆ.












Click it and Unblock the Notifications