"ಪಾಕ್ ಡ್ರೋನ್" ಇಲ್ಲಿಂದ ವಾಪಸ್ ಹೋಯ್ತು.. ಬೆಂಗಳೂರು & ಕನ್ನಡಿಗರ ಬಗ್ಗೆ ಕೆಟ್ಟ ಪೋಸ್ಟ್!
"ನಾನು ಕರ್ನಾಟಕದಲ್ಲಿ ಕನ್ನಡ ಮಾತನಾಡಲ್ಲ" ಅಂತ ಹೇಳಿ ರಾಷ್ಟ್ರೀಯ ಬ್ಯಾಂಕ್‌ನ ಲೇಡಿ ಮ್ಯಾನೇಜರ್ ಛೀಮಾರಿ ಹಾಕಿಸಿಕೊಂಡ ಬೆನ್ನಲ್ಲೇ ಕನ್ನಡಿಗರನ್ನು ಕೆಣಕುವ ಮತ್ತೊಂದು ಪೋಸ್ಟ್ ವೈರಲ್ ಆಗುತ್ತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಎದುರಾದ ಉದ್ವಿಗ್ನ ಪರಿಸ್ಥಿತಿಯನ್ನು ಇರಿಸಿಕೊಂಡು ಪೋಸ್ಟ್ ಮಾಡಲಾಗಿದ್ದು. ಇದು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಮುಂದುವರಿದಿದೆ. ಇದೀಗ ಇಂತಹದ್ದೇ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಹಿಂದಿವಾಲಾಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಬ್ಯಾಂಕ್ ಮ್ಯಾನೇಜರ್‌ಗೆ ಕನ್ನಡಿಗರು ಸರಿಯಾಗಿ ಪಾಠ ಕಲಿಸಿದ್ದಾರೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನಾಲ್ಕು ದಿನಗಳ ಹಿಂದೆ ಮಾಡಿರುವ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಕನ್ನಡಿಗರನ್ನು ಕೆರಳಿಸಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು ಅಂತ ಕನ್ನಡಿಗರು ಕೇಳುತ್ತಿರುವುದು ಹಿಂದಿವಾಲಾಗಳ ಬೆವರಿಳಿಸಿದ್ದು. ಸೋಷಿಯಲ್ ಮೀಡಿಯಾದಲ್ಲಿ ವಿಕೃತವಾಗಿ ಹಾಗೂ ಕೀಳು ಮಟ್ಟದಲ್ಲಿ ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪಾಕ್ ಡ್ರೋನ್‌ಗಳಿಗೆ ಬೆಂಗಳೂರನ್ನು ಲಿಂಕ್ ಮಾಡಿ ಪೋಸ್ಟ್ ಮಾಡಲಾಗಿದೆ.

ಬೆಂಗಳೂರು, ಕನ್ನಡ ಹಾಗೂ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಕೆಲವು ಹಿಂದಿವಾಲಾಗಳು (ನಾರ್ಥಿಗಳು) ಮಾಡುತ್ತಿರುವ ಪೋಸ್ಟ್‌ಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕನ್ನಡಿಗರು ಸರಿಯಾಗಿಯೇ ಪ್ರತಿಕ್ರಿಯಿಸಿದ್ದಾರೆ. Batangad ಎನ್ನುವ ಹಿಂದಿ ಸೋಷಿಯಲ್ ಮೀಡಿಯಾ ಖಾತೆಯಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಕೀಳುಮಟ್ಟದ ಈ ಪೋಸ್ಟ್ ಕನ್ನಡಿಗರ ರಕ್ತ ಕುದಿಯುವಂತೆ ಮಾಡಿದೆ.
Batangad ಮಾಡಿರುವ ಪೋಸ್ಟ್‌ನಲ್ಲಿ ಏನಿದೆ ?
ಈ ಪೋಸ್ಟ್‌ನಲ್ಲಿ ಬೆಂಗಳೂರಿನ ಬಂದರಿಗೆ ಬಂದ ಪಾಕಿಸ್ತಾನಿ ಡ್ರೋನ್‌ಗಳನ್ನು ವಾಪಸ್ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿಗೆ ಬಂದ ಡ್ರೋನ್‌ಗಳನ್ನು ಕನ್ನಡ ಮಾತನಾಡದ ಕಾರಣ ತಕ್ಷಣವೇ ವಾಪಸ್ ಕಳುಹಿಸಲಾಯಿತು ಎಂದು ಪೋಸ್ಟ್ ಮಾಡಲಾಗಿದೆ. ಇದಕ್ಕೆ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. ಮೊದಲನೆಯದಾಗಿ ಬೆಂಗಳೂರಿನಲ್ಲಿ ಬಂದರು ಇದೆಯೋ ಇಲ್ಲವೋ ಅಂತ ತಿಳಿದುಕೊಳ್ಳುವ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ಪ್ರಶ್ನೆ ಮಾಡಲಾಗಿದೆ.

ಬರಹಗಾರ ಸುನೀಲ್ ಜೆ ಅವರು, ಭಯೋತ್ಪಾದಕರು ಕಾಶ್ಮೀರದ ಮೇಲೆ ದಾಳಿ ಮಾಡಲು ಸಾಧ್ಯವಾದದ್ದು ಅವರ ಗುಂಡುಗಳು ಹಿಂದಿಯನ್ನು ಅರ್ಥಮಾಡಿಕೊಂಡಿದ್ದರಿಂದಲೇ? ಈಗ ಅರ್ಥವಾಯಿತು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಹೇಂದ್ರ ಬಾಪೂ ನಿಕಮ್ ಎನ್ನುವವರು, ಆ ಡ್ರೋನ್ ಕೂಡ ಸ್ಥಳೀಯ ಭಾಷೆಗೆ ಗೌರವ ತೋರಿಸದ ಜನರಿಗಿಂತ ಹೆಚ್ಚಿನ ಸ್ವಾಭಿಮಾನವನ್ನು ಹೊಂದಿದೆ. ಸ್ಥಳೀಯ ಭಾಷೆಯನ್ನು ಮಾತನಾಡಲು ಸಾಧ್ಯವಿಲ್ಲ ಎಂದು ಅರಿತುಕೊಂಡ ನಂತರ ಡ್ರೋನ್ ಆ ಸ್ಥಳವನ್ನು ಬಿಟ್ಟು ಹೋಗಿದೆ ಎಂದು ಪೋಸ್ಟ್ ಮಾಡಿದವರ ಭಾಷೆಯಲ್ಲೇ ತಿರುಗೇಟು ನೀಡಿದ್ದಾರೆ. ನೀವು ವಾಸಿಸುವ, ಕೆಲಸ ಮಾಡುವ ಮತ್ತು ಹಣ ಸಂಪಾದಿಸುವ ರಾಜ್ಯದ ಭಾಷೆಯನ್ನು ನೀವು ತಿಳಿದಿರಬೇಕು. ನೀವು ಆ ರಾಜ್ಯ ಮತ್ತು ಜನರ ಸಂಸ್ಕೃತಿ ಮತ್ತು ಭಾಷೆಯನ್ನು ಗೌರವಿಸಬೇಕು ಎಂದಿದ್ದಾರೆ.












Click it and Unblock the Notifications