ಕನ್ನಡ ಮರೆತ ಈ ಗಣ್ಯರಿಗೆ ಕನ್ನಡ ಸಮ್ಮೇಳನದ ಆಹ್ವಾನವೇಕೆ?

ಸಿನಿಮಾ ತಾರೆಗಳಾದ ದೀಪಿಕಾ, ಐಶ್ವರ್ಯ ಹಾಗೂ ಇನ್ಫಿ ಮೂರ್ತಿಗೆ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಹ್ವಾನ ಬೇಡ ಎಂದ ಸಾಹಿತಿಗಳು, ಕನ್ನಡ ಹೋರಾಟಗಾರರು. ಕನ್ನಡವನ್ನು ಮಾತನಾಡದ, ಕನ್ನಡ ಪ್ರೋತ್ಸಾಹಿಸದ ನಟಿಯರಿಗೆ ಹಾಗೂ ಮೂರ್ತಿಯವರಿಗೆ ಆಹ್ವಾನ ಬೇಡವೆಂ

ಬೆಂಗಳೂರು, ಜುಲೈ 19: ಇದೇ ವರ್ಷ ನವೆಂಬರ್- ಡಿಸೆಂಬರ್ ನಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಾಲಿವುಡ್ ತಾರೆಯರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಹಾಗೂ ಇನ್ಫೋಸಿಸ್ ನ ಸಹ- ಸಂಸ್ಥಾಪಕ ನಾರಾಯಣ ಮೂರ್ತಿಯವರಿಗೆ ಆಹ್ವಾನ ನೀಡದಂತೆ ಕನ್ನಡದ ಸಾಹಿತಿಗಳು ಹಾಗೂ ಹೋರಾಟಗರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

ತಮ್ಮ ಕ್ಷೇತ್ರಗಳಲ್ಲಿ ಈ ಮೂವರೂ ಗಣನೀಯ ಸಾಧನೆ ಮಾಡಿದ್ದರೂ, ಕನ್ನಡದ ಬಗ್ಗೆ ಸೌಜನ್ಯವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಇಂಥವರನ್ನು ವಿಶ್ವ ಕನ್ನಡ ಸಮ್ಮೇಳನಕ್ಕೆ ಆಹ್ವಾನಿಸುವುದು ಸರಿಯಲ್ಲ ಎಂದು ಸಾಹಿತಿಗಳು, ಲೇಖಕರು, ಕವಿಗಳು ಹಾಗೂ ಕನ್ನಡ ಹೋರಾಟಗರರ ಪ್ರತಿನಿಧಿಗಳಿದ್ದ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

PADUKONE, MURTHY MAY NOT BE GETTING KANNADA SUMMIT INVITES

ಇತ್ತೀಚೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವ ಕನ್ನಡ ಸಮ್ಮೇಳನದ ತಯಾರಿಗಾಗಿ ಸಭೆಯೊಂದನ್ನು ನಡೆಸಿದ್ದರು. ಈ ಸಭೆಗೆ, ಸಲಹೆಗಾರರನ್ನಾಗಿ ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನು ಆಹ್ವಾನಿಸಲಾಗಿತ್ತು.

ಇದರ ಬೆನ್ನಲ್ಲೇ ಈ ಅಸಮಾಧಾನ ಭುಗಿಲೆದ್ದಿದೆ. ಕನ್ನಡ ಪರವಾಗಿ ಕೆಲಸ ಮಾಡಿ ಎಂದೂ ಗುರುತಿಸಿಕೊಳ್ಳದ, ಕನಿ ಅವಕಾಶವಿರುವಂಥ ಯಾವುದೇ ಸಂದರ್ಭಗಳಲ್ಲಿ ಕನ್ನಡ ಮಾತನಾಡದೇ ಇಂಗ್ಲೀಷ್ ನಲ್ಲೇ ಮಾತನಾಡುವ ಈ ಗಣ್ಯರಿಗೆ ಕನ್ನಡ ಸಮ್ಮೇಳನಕ್ಕೆ ಆಹ್ವಾನಿಸುವ ಔಚಿತ್ಯವಿಲ್ಲ ಎಂದು ಕನ್ನಡ ಸಂಘಟನೆಗಳು ತಾಕೀತು ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+