ಪಾದರಾಯನಪುರ ಗಲಭೆ; ಆರೋಪಿಗಳಿಗೆ ಎಚ್ಚರಿಕೆಯೊಂದಿಗೆ ಜಾಮೀನು
ಬೆಂಗಳೂರು, ಮೇ 29: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಕ್ವಾರಂಟೈನ್‌ಗೆ ಬರಲು ಒಪ್ಪದ ಜನರು ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಿದ್ದರು.
ಕರ್ನಾಟಕ ಹೈಕೋರ್ಟ್ ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಎಲ್ಲಾ 126 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಎಲ್ಲಾ ಆರೋಪಿಗಳಿಗೂ ಕಡ್ಡಾಯವಾಗಿ ಕೋವಿಡ್ - 19 ಪರೀಕ್ಷೆ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಂಡು ಬಂದರೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಬೇಕು. ಆರೋಪಿಗಳು ಕೋವಿಡ್ - 19 ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಜಾಮೀನು ರದ್ದು ಮಾಡುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಂಡು ಬಂದರೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಬೇಕು. ಆರೋಪಿಗಳು ಕೋವಿಡ್ - 19 ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಜಾಮೀನು ರದ್ದು ಮಾಡುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಜಾಮೀನಿಗಾಗಿ ಅರ್ಜಿ
ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಎಲ್ಲಾ ಆರೋಪಿಗಳ ಪರವಾಗಿ ಇಸ್ಮಾಯಿಲ್ ಜವೀವುಲ್ಲಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳಿಗೆ ಎಚ್ಚರಿಕೆ
ಆರೋಪಿಗಳು 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು ಎಂಬ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಎಲ್ಲಾ ಆರೋಪಿಗಳಿಗೆ ಕಡ್ಡಾಯವಾಗಿ ಕೋವಿಡ್ - 19 ಪರೀಕ್ಷೆ ಮಾಡಬೇಕು. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಲು ಒಪ್ಪದಿದ್ದರೆ ಜಾಮೀನು ರದ್ದು ಮಾಡಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಚೆಕ್ ಪೋಸ್ಟ್ ನಾಶ, ಹಲ್ಲೆಗೆ ಯತ್ನ
ಕ್ವಾರಂಟೈನ್ ಮಾಡಲು ಜನರನ್ನು ಕರೆತರಲು ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳು ಹೋದಾಗ ಅವರ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಲಾಗಿತ್ತು. ಸೀಲ್ ಡೌನ್ ಮಾಡಿ ಬಡಾವಣೆಗೆ ಹಾಕಿದ್ದ ಚೆಕ್ ಪೋಸ್ಟ್‌ಗಳನ್ನು ನಾಶ ಮಾಡಲಾಗಿತ್ತು. ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 126 ಜನರನ್ನು ಬಂಧಿಸಲಾಗಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್
ಗಲಭೆ ಬಳಿಕ ಪಾದರಾಯನಪುರದಲ್ಲಿ 'ಗರುಡಾ' ಪಡೆಯನ್ನು ನಿಯೋಜನೆ ಮಾಡಲಾಯಿತು. ಪೊಲೀಸ್ ಭದ್ರತೆಯನ್ನು ಜನರನ್ನು ಕರೆತಂದು ಕ್ವಾರಂಟೈನ್ ಮಾಡಲಾಯಿತು. ಗಲಭೆ ಕುರಿತು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications