OYO Rooms: ಈ ಕಾರಣಕ್ಕೆ ಓಯೋಗೆ ಕೋಟ್ಯಾಂತರ ರೂಪಾಯಿ ನಷ್ಟ ?
OYO Rooms: ಓಯೋ ರೂಮ್‌ಗಳ ಬುಕ್ಕಿಂಗ್‌ನಲ್ಲಿ ಭಾರೀ ಇಳಿಕೆಯಾಗುವ ಆತಂಕ ಎದುರಾಗಿದೆ. ಸಾಮಾನ್ಯವಾಗಿ ಓಯೋ ರೂಮ್‌ಗಳ ಬುಕ್ಕಿಂಗ್ ವರ್ಷಾಂತ್ಯದಲ್ಲಿ ಇಲ್ಲವೇ ಹೊಸ ವರ್ಷದ ಸಂದರ್ಭದಲ್ಲಿ ನಡೆಯುತ್ತವೆ. ಅಲ್ಲದೆ ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಭರ್ಜರಿಯಾಗಿ ನಡೆಯುತ್ತದೆ. ಈ ಸಮಯದಲ್ಲಿ ಓಯೋಗೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬರುತ್ತದೆ. ಆದರೆ ಈ ಬಾರಿ ಓಯೋಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುವ ಆತಂಕ ಎದುರಾಗಿದೆ. ಇದಕ್ಕೆ ಕಾರಣವೇನು ಎನ್ನುವ ವಿವರ ನೋಡೋಣ..
ಇತ್ತೀಚಿನ ವರ್ಷಗಳಲ್ಲಿ ಓಯೋ ರೂಮ್‌ಗಳು ಯಾವ ಕಾರಣಕ್ಕೆ ಫೇಮಸ್ ಆಗಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಓಯೋ ಈಚೆಗೆ ಪ್ರೇಮಿಗಳಿಗೆ ಅಥವಾ ವಿವಾಹವಾಗದೆ ಇರುವವರು ಓಯೋ ರೂಮ್‌ಗಳಿಗೆ ಭೇಟಿ ನೀಡುವುದಕ್ಕೆ ಶಾಕ್ ಕೊಟ್ಟಿದೆ. ಹುಡುಗ - ಹುಡುಗಿ, ಯುವಕ - ಯುವತಿಯರಿಗೆ ಶಾಕ್ ಕೊಟ್ಟಿತ್ತು. ಇದೀಗ ಇದೇ ಕಾರಣಕ್ಕೆ ಓಯೋ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಓಯೋದ ಯಾವ ನಿರ್ಧಾರ ಅದಕ್ಕೆ ತಿರುಗುಬಾಣವಾಗಿದೆ ಎನ್ನುವ ವಿವರ ಇಲ್ಲಿದೆ.

ಕಳೆದ 10 ವರ್ಷಗಳಲ್ಲಿ ಓಯೋ ರೂಮ್‌ಗಳ ಬೇಡಿಕೆ ಹೆಚ್ಚಳವಾಗಿದೆ. OYO ರೂಮ್ಸ್ ಎನ್ನುವುದು ಸ್ಟಾರ್ಟ್ ಅಪ್ ಸಂಸ್ಥೆಯಾಗಿ ಬೆಳೆಯಿತು. ಇದನ್ನು ರಿತೇಶ್ ಅಗರ್ವಾಲ್ ಅವರು 2013ರಲ್ಲಿ ಪ್ರಾರಂಭಿಸಿದರು. ಸಣ್ಣ ಸಣ್ಣ ಹೋಟೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು. ಇದರ ವ್ಯವಹಾರ ಹಾಗೂ ವಹಿವಾಟು ಇದೀಗ ಕೋಟ್ಯಾಂತರ ರೂಪಾಯಿ ಮುಟ್ಟಿದೆ. ಆದರೆ ಈ ರೀತಿ ಇರುವಾಗಲೇ ಓಯೋ ಈಚೆಗೆ ತಂದಿರುವ ಹೊಸ ನಿಯಮವೊಂದು ಅದರ ಆದಾಯಕ್ಕೇ ತಿರುಗುಬಾಣವಾಗುವ ಎಲ್ಲಾ ಲಕ್ಷಣಗಳು ಸಹ ಕಾಣಿಸುತ್ತಿವೆ.
ಓಯೋ ಹೊಸ ನಿಯಮವೇನು
ಈಚೆಗೆ ಓಯೋ ಹೊಸ ನಿಯಮವನ್ನು ಜಾರಿ ಮಾಡುವುದಾಗಿ ಹೇಳಿತ್ತು. ಈ ನಿಯಮದ ಪ್ರಕಾರ ಓಯೋಗೆ ಅವಿವಾಹಿತ / ಮದುವೆ ಆಗದೆ ಇರುವವರಿಗೆ (ಯವಕ ಹಾಗೂ ಯವತಿಯರಿಗೆ ) ಒಂದೇ ರೂಮ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಲ್ಲದೆ ವಿವಾಹವಾದವರು ಅವರ ಡಾಕ್ಯೂಮೆಂಟ್ ಅಂದರೆ ವಿವಾಹವಾಗಿರುವುದಕ್ಕೆ ದಾಖಲೆ ನೀಡಬೇಕು ಎನ್ನುವ ನಿಯಮವನ್ನು ಜಾರಿ ಮಾಡುವುದಾಗಿ ಹೇಳಿತ್ತು. ಈ ನಿಯಮವನ್ನು ದೇಶದಾದ್ಯಂತ ಜಾರಿ ಮಾಡುವುದಾಗಿ ಹೇಳಿತ್ತು. ಆದರೆ ಓಯೋದ ನಿಯಮ ಅದಕ್ಕೆ ನಷ್ಟವುಂಟು ಮಾಡಲಿದೆ ಎಂದು ಹೇಳಲಾಗಿದೆ.
ಪ್ರೇಮಿಗಳ ದಿನದಲ್ಲೇ ಶಾಕ್ ?
ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಓಯೋ ರೂಮ್‌ಗಳ ಬುಕ್ಕಿಂಗ್ ಪ್ರೇಮಿಗಳ ದಿನದಲ್ಲೇ ಹೆಚ್ಚು ಆಗುತ್ತವೆ. ಆದರೆ ಈ ಬಾರಿ ಪ್ರೇಮಿಗಳ ದಿನದಲ್ಲಿ ಬುಕ್ಕಿಂಗ್ ಕಡಿಮೆಯಾಗಿ ನಷ್ಟವಾಗುವ ಸಾಧ್ಯತೆ ಇದೆ. ಯಾಕೆಂದರೆ ಓಯೋ ಹೊಸ ನಿಯಮವನ್ನು ಜಾರಿ ಮಾಡುವುದಾಗಿ ಹೇಳಿತ್ತಾದರೂ, ಅದನ್ನು ಜಾರಿ ಮಾಡಲಿದೆಯೇ ಇಲ್ಲವೇ ಮುಂದೂಡಲಿದೆಯೇ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಹೀಗಾಗಿ ಪ್ರೇಮಿಗಳಿಗೆ ಈ ವಿಚಾರದಲ್ಲಿ ಗೊಂದಲವಾಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಲೆಂಟೆನ್ಸ್ ಡೇ ಫೆಬ್ರವರಿ 14ರಂದು ಓಯೋ ರೂಮ್ ಬುಕ್ಕಿಂಗ್‌ನ ಮೇಲೆ ಪರಿಣಾಮ ಬೀರಿ ಆದಾಯ ಇಳಿಕೆ ಆಗಲಿದೆ ಎಂದೇ ಹೇಳಲಾಗುತ್ತಿದೆ. ಇದಕ್ಕೆಲ್ಲ ಉತ್ತರ ಇದೇ ವಾರದಲ್ಲಿ ಸಿಗಲಿದೆ.












Click it and Unblock the Notifications