ಸಮಯ ಮೀರುವ ರೆಸ್ಟೋರೆಂಟ್, ಬಾರ್ ವಿರುದ್ಧ ಕ್ರಮ
ಬೆಂಗಳೂರು, ಫೆಬ್ರವರಿ 09 : ನಿಗದಿಪಡಿಸಿದ ವೇಳೆ ಮೀರಿ ತೆರೆಯುವ ಬಾರ್ ಮತ್ತು ರೆಸ್ಟೋರೆಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 907 ಮದ್ಯಂಗಡಿ ತೆರೆಯಲು ಸರ್ಕಾರದಿಂದ ಅನುಮತಿ
ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರಿನಲ್ಲಿ ನಿಯಮ ಮೀರಿದ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 206 ಬಾರ್ ಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 158 ಬಾರ್ ಗಳನ್ನು ಬಂದ್ ಮಾಡಲಾಗಿದೆ. ಬಾರ್ ಗೆ ಅನುಮತಿ ಕೊಡುವುದು ಅಬಕಾರಿ ಇಲಾಖೆ, ರೆಸ್ಟೋರೆಂಟ್ ಗೆ ಅನುಮತಿ ನೀಡುವ ಅಧಿಕಾರ ಬಿಬಿಎಂಪಿಗೆ ಇದೆ. ಹೀಗಿದ್ದರೂ ಸಹ ಪೊಲೀಸ್ ಇಲಾಖೆ ಸಹ ಬಾರ್ ಗಳು ಕಾರ್ಯ ನಿರ್ವಹಿಸುವ ವೇಳೆಯನ್ನು ನಿಗದಿ ಮಾಡಲಾಗಿದೆ ಎಂದರು.
ಕಲಾಸಿಪಾಳ್ಯದ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಈಗಾಗಲೇ ಘೋಷಿಸಿದಂತೆ ಪರಿಹಾರ ನೀಡಲಾಗುವುದು, ದುರಂತ ಸಬಂಧ ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ದಾಖಲಿಸಲಾಗಿದೆ ಎಂದರು.