ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ 4 ಪಟ್ಟು ಹೆಚ್ಚಳ
2006-2016ರ ಮಧ್ಯೆ ಹತ್ತು ವರ್ಷದಲ್ಲಿ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬ ಅಂಶವೊಂದು ಪೊಲೀಸ ಕಮಿಷನರ್ ನೀಡಿದ ಮಾಹಿತಿಯಿಂದ ಗೊತ್ತಾಗುತ್ತದೆ. ಈ ಬಗ್ಗೆ ಇಂಡಿಯಾ ಸ್ಪೆಂಡ್ ನಲ್ಲಿ ವರದಿ ಮಾಡಲಾಗಿದೆ
ಬೆಂಗಳೂರು, ಮೇ 6: 2006-2016ರ ಮಧ್ಯೆ ಬೆಂಗಳೂರಿನಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ನೀಡಿದ ಮಾಹಿತಿಯೇ (ಸೆಕ್ಷನ್ 354) ಈ ಅಂಶದ ಬಗ್ಗೆ ಬೆಳಕು ಚೆಲ್ಲುತ್ತದೆ. ಪೊಲೀಸರ ಮಾಹಿತಿಯನ್ನು ವಿಶ್ಲೇಷಣೆ ಮಾಡಿದರೆ ಗೊತ್ತಾಗುವ ಅಂಶ ಏನು ಗೊತ್ತಾ?
ಈ ಹತ್ತು ವರ್ಷದಲ್ಲಿ 4241 ದೂರುಗಳು ದಾಖಲಾಗಿವೆ. ಅದರೆ ಶಿಕ್ಷೆ ಅಂತ ಆಗಿರುವುದು ಹದಿನಾರು ಪ್ರಕರಣಗಳಲ್ಲಿ ಮಾತ್ರ. 2006ರಲ್ಲಿ 150 ಇದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2016ರಲ್ಲಿ 776ಕ್ಕೆ ಏರಿಕೆ ಆಗಿದೆ. ಇದಕ್ಕೆ ತಜ್ಞರು ನೀಡುವ ಕಾರಣ ಏನೆಂದರೆ, ಒಂದೋ ಇಂಥ ಘಟನೆಗಳು ಹೆಚ್ಚಾಗಿವೆ. ಅಥವಾ ಇಂಥ ಘಟನೆ ನಡೆದಾಗ ದೂರು ನೀಡಬೇಕು ಎಂಬ ಅರಿವು ಮಹಿಳೆಯರಲ್ಲಿ ಹೆಚ್ಚಾಗಿದೆ.[ಓಲಾ ಕ್ಯಾಬ್ ಚಾಲಕನಿಂದ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ]

2017ನೇ ಇಸವಿ ಆರಂಭವಾಗಿದ್ದೇ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಹಲವು ಪ್ರಕರಣಗಳ ಮೂಲಕ. ಅಪಾರ ಸಂಖ್ಯೆಯ ಪೊಲೀಸರು ಇದ್ದರೂ ಎಂ ಜಿ ರಸ್ತೆ ಹಾಗೂ ಇತರೆಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಇದರಿಂದ ಮಹಿಳೆಯರಿಗೆ ಬೆಂಗಳೂರು ಸುರಕ್ಷಿತಲ್ಲ ಎಂಬ ಅಭಿಪ್ರಾಯ ಮೂಡಿತ್ತು.

ಬೆಂಗಳೂರಿನಲ್ಲಿ ಅಪರಾಧ ಕೃತಗಳಿಗೆ ಗಿರುವ ಶಿಕ್ಷೆ ಪ್ರಮಾಣ ಗಮನಿಸಿದರೆ ದೇಶದಾದ್ಯಂತ ಎದುರಿಸುತ್ತಿರುವ ಸಮಸ್ಯೆಗಳು ಗೊತ್ತಾಗುತ್ತವೆ. ನಿರ್ಭಯಾ ಪ್ರಕರಣದಲ್ಲಿ ಹೈ ಕೋರ್ಟ್ ತೀರ್ಪನ್ನು ಮೇ 4ರಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಬೆಂಗಳೂರಿನಲ್ಲಿ ಅಂಥ ಕೆಟ್ಟ ಅನುಭವ ಆಗಿದ್ದನ್ನು ಕಾವ್ಯಾ ಎಂಬುವವರು ಹೇಳಿಕೊಂಡಿದ್ದಾರೆ.[ನೆಟ್ ಸಮಸ್ಯೆ ಬಗೆ ಸರಿಪಡಿಸಲೆಂದು ಬಂದವನಿಂದ ಲೈಂಗಿಕ ದೌರ್ಜನ್ಯ]

"ಆಗ ಬೆಳಗ್ಗೆ 8.30 ಸಮಯ. ಅಪರಿಚಿತನೊಬ್ಬ ನನ್ನ ಅವಚಿಕೊಂಡು ಮುತ್ತು ನೀಡಲು ಮುಂದಾದ. ಕೋರಮಂಗಲಕ್ಕೆ ನಾನು ಕೆಲಸಕ್ಕೆ ಹೋಗಬೇಕು ಎಂದು ನಡೆದು ಹೋಗ್ತಿದ್ದೆ. ಹತ್ತಾರು ಜನರು ಅಲ್ಲಿದ್ದರೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಆಗ ನಾನೇ ಆತನನ್ನು ಕೂಗು ಹಾಕಿ, ಒದ್ದು ಆತನಿಂದ ಬಿಡಿಸಿಕೊಂಡಾಗ ಅಕ್ಕಪಕ್ಕದವರು ಅವನನ್ನು ಬಿಡುವಂತೆ ಹೇಳಿದರು" ಎಂದು ಆಕೆ ತಮ್ಮ ಅನುಭವ ಹೇಳಿಕೊಂಡಿದ್ದಾರೆ.[ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ]

ಆದರೆ, ಅಲ್ಲಿಂದ ಕೆಲಸ ಹಾಗೂ ಮನೆ ಬದಲಾಯಿಸಿದ ಮೇಲೆ ಆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೋರ್ಟ್ ಗೆ ಹಾಜರಾಗುವುದಕ್ಕೆ ಆಗಲಿಲ್ಲ. ಆದರೆ ಪೊಲೀಸರು ತುಂಬ ಸಹಕಾರ ನೀಡಿದರು ಎಂದು ಅವರು ಹೇಳುತ್ತಾರೆ. ಈ ರೀತಿ ಪ್ರಕರಣಗಳು ತುಂಬ ಹೆಚ್ಚಾಗುತ್ತಿವೆ. ಆ ಕಾರಣಕ್ಕೆ ಇಂಥ ಪ್ರಕರಣಗಳು ನಡೆಯದಿರಲಿ ಎಂದು ಈಚೆಗೆ ಬೆಂಗಳೂರಿನಲ್ಲಿ ಪಿಂಕ್ ಹೊಯ್ಸಳ ಪರಿಚಯಿಸಲಾಗಿದೆ.
ಇಂಡಿಯಾ ಸ್ಪೆಂಡ್ ಮಾಹಿತಿ












Click it and Unblock the Notifications