Bengaluru: ದಕ್ಷಿಣ ರಾಜ್ಯಗಳ ದರಿದ್ರ ಸಹವಾಸ ಬೇಡ, ನೀವು ಹೊಲಸು! ಬಾಲ ಬಿಚ್ಚಿದ ನಾರ್ಥಿ Video
ಬೆಂಗಳೂರು, ಏಪ್ರಿಲ್ 21: ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಬರುವ ಉತ್ತರ ಭಾರತೀಯರು ಬಾಲ ಬಿಚ್ಚುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮೊನ್ನೆಯಷ್ಟೇ ಬೆಂಗಳೂರಲ್ಲಿ ಆಟೋ ಚಾಲಕನಿಗೆ ಇಲ್ಲಿ ಹಿಂದಿ ಮಾತನಾಡು ಎಂದು ಆವಾಜ್ ಹಾಕಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಬಳಿಕ ಆತನೇ ಕನ್ನಡದಲ್ಲಿ ಕ್ಷಮೆ ಕೇಳಿದ್ದಾನೆ. ಇಂತಹ ಮನಸ್ಥಿತಿ ಇರುವ ಉತ್ತರ ಪ್ರದೇಶ ಕೆಲವರಲ್ಲಿ ಮತ್ತೊಬ್ಬ ಬಾಲ ಬಿಚ್ಚಿದ್ದಾನೆ. 'ದಕ್ಷಿಣ ರಾಜ್ಯಗಳ ದರಿದ್ರ ಸಹವಾಸ ಬೇಡ' ಎಂದು ಅವಾಚ್ಯ ಪದಗಳಿಂದ ಮನಬಂದ ಟೀಕಿಸಿ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಕನ್ನಡಿಗರು ಸೇರಿದಂತೆ ದಕ್ಷಿಣ ರಾಜ್ಯಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು, ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ರಾಜ್ಯಗಳ ಕುರಿತು ಮಾತನಾಡಿರುವ ಈ ನಾರ್ಥಿ @NavRattanKapoo1 ರಿಯಲ್ ಎಷ್ಟೇಟ್ ಉದ್ಯಮಿಯಾಗಿದ್ದು, ಆತನ ವಿಡಿಯೋ ಹರಿದಾಡುತ್ತಿದೆ. ಈತನ ಅವಾಚ್ಯ ಶಬ್ದಗಳ ನಿಂದನೆ ವಿಡಿಯೋ @jaibheem96 ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಾರ್ಥಿ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ವಿಡಿಯೋದಲ್ಲಿ ನಾರ್ಥಿ @NavRattanKapoo1 ಉದ್ಯಮಿಯು' ದಕ್ಷಿಣ ಭಾರತದವರೇ ನಿಮಗೇನು? ಹಿಂದಿ ಬೇಡವಾ? ಬೇಡ ಎಂದರೆ ಬಿಟ್ಟು ಬಿಡಿ. ನಾವು ಮಾತನಾಡೋದು ಬೇಡವಾ?. ನಿಮ್ಮಗಳ (ದಕ್ಷಿಣ ರಾಜ್ಯದವರ) ಮುಖ ನೋಡಲು ಅಷ್ಟೊಂದು ಅಸಯ್ಯವೆನಿಸುತ್ತದೆ. Who give to F**k ಎಂದು ಮನಬಂದಂತೆ ಉದ್ಧಟತನ ಪ್ರದರ್ಶಿಸಿದ್ದಾನೆ.
ಹಿಂದಿ ಬೇಡ ಎಂದರೆ ನಿಮ್ಮ ಮಾತನ್ನು ಯಾರು ಕೇರ್ ಮಾಡುತ್ತಾರೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
Guys this person in linked in #Realestator_Nav_Rattan_Kapoor
— Jai Bheem (@jaibheem96) April 21, 2025
Report him... he's abusing south Indian regional langauge and ethnicity...@ChekrishnaCk @Advaidism @JOYravishankar @royalreddytwitt mam look on him pic.twitter.com/jzagSS2bvO
ನಮಗೇಕೆ ಕಿರಿ ಕಿರಿ ಮಾಡ್ತೀರಿ..
ದಕ್ಷಿಣ ಭಾರತ ರಾಜ್ಯಗಳಲ್ಲಿ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಯಾಕೆ ನಿಮಗೆ ಹಿಂದಿ ಬೇಡ ಎಂದರೆ ನೀವು ಮಾತನಾಡಬೇಡಿ. ಆದರೆ ನಮಗೇಕೆ ಕಿರಿ ಕಿರಿ ಮಾಡುತ್ತೀರಿ. ಉತ್ತರ ಭಾರತದ ಏಳೆಂಟು ರಾಜ್ಯಗಳನ್ನು ಪ್ರತ್ಯೇಕ ಮಾಡಿಬಿಡಿ ಎಂದು ಬೊಗಳಿದ್ದಲ್ಲದೇ, ನಮಗೆ ನಿಮ್ಮ ಸಹವಾಸವೇ ಬೇಡ ಎಂದು ಮಾತನಾಡಿದ್ದಾನೆ.
ಹಿಂದಿ ಬೇಡ ಎಂಬುದು ದಕ್ಷಿಣ ರಾಜ್ಯಗಳ ಜೆನೆಟಿಕ್ಸ್‌ನಲ್ಲಿ ಬಂದಂತಿದೆ, ಇವರ ಜೆನೆಟಿಕ್ಸ್ ತುಂಬಾ ಕೆಟ್ಟದಾಗಿದೆ. ಇವರ ಸಹವಾಸದಿಂದ ನಮಗೆ ಬ್ರೌನ್ ಸ್ಕಿನ್ ಎಂದು ಕರೆಯುತ್ತಾರೆ. ಇವರು ಸಾಮಾನ್ಯವಾಗಿ ಕಪ್ಪು (ಡಾರ್ಕ್) ಇರುತ್ತಾರೆ. ನಮ್ಮನ್ನು ನಿಮ್ಮಂತೆ ಕಪ್ಪು ಜನರೆಂದು ನೋಡುತ್ತಾರೆ ಎಂದು ದಕ್ಷಿಣ ರಾಜ್ಯಗಳ ಜನರ ಬಣ್ಣದ ಕುರಿತು ಲೇವಡಿ ಮಾಡಿದ್ದಾನೆ.
ದೇಶದ ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದವರು ನಮ್ಮನ್ನು ನಿಮ್ಮಗಳ ಜೊತೆಗೆ ಹೋಲಿಕೆ ಮಾಡುತ್ತಾರೆ. ಬ್ರೌನ್ ಸ್ಕಿನ್‌ನವರಂತೆ ನೋಡುತ್ತಾರೆ. ನೀವು ಕೆಳಗೇ ಕೂತು ದೋಸೆ ತಿನ್ನಿ'' ಎಂದು ಹೇಳಿದ್ದಾನೆ. ಈ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಜನರಿಗೆ ಯಾವತ್ತು ಕೆಳಗಿನ ಸ್ಥಾನ, ನಾವೇನಿದ್ದರೂ ಮೇಲೆ ಎಂಬಂತೆ ಟೀಕಿಸಿದ್ದಾನೆ.
ಯಾರು ಈ ವ್ಯಕ್ತಿ?
ದಕ್ಷಿಣ ರಾಜ್ಯಗಳ ಬಗ್ಗೆ ಮಾತನಾಡಿರುವ ಈತ @NavRattanKapoo1 ತಾನು ರಿಯಲ್ ಎಸ್ಟೇಟ್ ಉದ್ಯಮಿ, ಮಾರಾಟಗಾರಿ, ರಿಯಲ್ ಎಸ್ಟೇಟಗ್ ಮೇಲೆ ಹೂಡಿಕೆ ಮಾಡುವ ಹೂಡಿಕೆದಾರ ಎಂದು ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಈ ಎಲ್ಲಿ ಕೆಲಸ ಮಾಡುತ್ತಾನೆ. ಸದ್ಯ ಎಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಈತ ಹಿಂದಿ ಬೇಡ, ಈ ರಾಜ್ಯದಲ್ಲಿ ಇಲ್ಲಿನ ಭಾಷೆ ಮಾತನಾಡಿ ಎಂದವರ ವಿರುದ್ಧ ಕೀಳು ಪದ ಬಳಸಿ ಮಾತನಾಡಿರುವುದು ದೃಢವಾಗಿದೆ.
ಕನಿಷ್ಠ ಸೌಜನ್ಯವಿಲ್ಲದೇ ಇತರರ ಮೇಲೆ ಪ್ರಹಾರ
ಬೆಂಗಳೂರಿನಂತ ನಗರಗಳಿಗೆ ಉತ್ತರದ ರಾಜ್ಯಗಳಿಗೆ ಬರುವ ಇವರು ನಮ್ಮಿಂದಲೇ ಎಲ್ಲ. ನಾವಿಲ್ಲದಿದ್ದರೆ ನೀವು ಏನು ಇಲ್ಲ ಎಂಬಂತೆ ಮಾತನಾಡುತ್ತಾರೆ. ವೃತ್ತಿಗೆ ಬದುಕಿಗೆ ನೆಲೆ ಕಲ್ಪಿಸಿದ ಇಂಥವರು ಕನಿಷ್ಠ ಸೌಜನ್ಯವು ಇಲ್ಲದೇ ಮಾತನಾಡುತ್ತಿದ್ದಾರೆ. ಇತ್ತಿಚೆಗೆ ಬೆಂಗಳೂರು, ಕನ್ನಡ ಭಾಷೆ ಮೇಲೆ ಪ್ರಹಾರ ನಡೆಸುತ್ತಿದ್ದ ಈ ನಾರ್ಥಿಗಳು ಇದೀಗ ಇಡೀ ದಕ್ಷಿನ ಭಾರತದ ರಾಜ್ಯಗಳ ವಿರುದ್ಧವೇ ದೌಲತ್ತಿನಲ್ಲಿ ವರ್ತಿಸಿದ್ದಾರೆ. ಇಂತವರಿಗೆ ತಕ್ಕ ಪಾಠ ಕಲಿಸುವ ಅಗತ್ಯವಿದೆ.












Click it and Unblock the Notifications