ಪೋಲಿಯೋ ವಿರುದ್ಧದ ನಮ್ಮ ಸಮರ ಅತ್ಯಂತ ಯಶಸ್ವಿ: ಸಿಎಂ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 27: "ದೇಶದಲ್ಲಿ ಟಿಬಿ, ಕಾಲಾರಾ, ಮಲೇರಿಯಾ ಹಾಗೂ ಪ್ಲೇಗ್ ರೋಗಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಅವುಗಳ ಮೇಲೆ ಸಂಪೂರ್ಣ ಹಿಡಿತಸಾಡಿಸಿದ್ದೇವೆ. ಅದೇ ರೀತಿ ಪೋಲಿಯೋ ವಿರುದ್ಧದ ನಮ್ಮ ಸಮರ ಅತ್ಯಂತ ಯಶಸ್ವಿಯಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪೋಲಿಯೋ ಮುಕ್ತ ರಾಷ್ಟ್ರವಾದರೂ ಪ್ರತಿ ವರ್ಷ ಮೂರು ದಿನ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಲಸಿಕಾ ಕಾರ್ಯಕ್ರಮ ಬಹಳ ಮುಖ್ಯ.25 ವರ್ಷಗಳ ಹಿಂದೆ ಪೋಲಿಯೋ ದುಷ್ಪರಿಣಾಮಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ," ಎಂದು ಹೇಳಿದರು.
"ಅಂಗವಿಲಕತೆಗೆ ಮುಖ್ಯ ಕಾರಣ ಹಾಗೂ ದೊಡ್ಡ ಪ್ರಮಾಣದ ಜೀವ ಹಾನಿಗೆ ಪೋಲಿಯೋ ಕಾರಣವಾಗಿತ್ತು. ಮಕ್ಕಳಿಗೆ ಬರುವ ಈ ಕಾಯಿಲೆ ದೇಹವನ್ನು ನಿಷ್ಕ್ರಿಯ ಮಾಡಿ ಕ್ಷೋಭೆಯನ್ನುಂಟು ಮಾಡಿತ್ತು. ಆ ಸಂದರ್ಭದಲ್ಲಿ ಕೋವಿಡ್ ಗೆ ನಡೆದ ಹೋರಾಟದಂತೆಯೇ ಹೋರಾಟ ನಡೆದು ಓರಲ್ ಲಸಿಕೆ ಬಂದ ನಂತರ ನಿಯಂತ್ರಣಕ್ಕೆ ತರಲಾಯಿತು. ಪ್ರಗತಿ ಪರ ರಾಷ್ಟ್ರಗಳ ನಡುವೆ ಭಾರತದಲ್ಲಿ ತಳಮಟ್ಟದಿಂದ ಆಗುವ ಅಭಿಯಾನದ ಅನುಷ್ಠಾನ ಬೇರೆ ದೇಶಗಳಲ್ಲಿ ಕಾಣುವುದಿಲ್ಲ. ಬಡತನ, ಅಪೌಷ್ಟಿಕತೆ ಇರುವಲ್ಲಿ ಈ ರೀತಿಯ ರೋಗಗಳಿಗೆ ಹೆಚ್ವಿನ ಅವಕಾಶವಿರುವುದರಿಂದ ಜನರು ಕೂಡ ಜಾಗೃತರಾಗಿದ್ದಾರೆ," ಎಂದರು.

"ಪ್ರಧಾನಮಂತ್ರಿಗಳು ಸಹ ಇಂದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅವರ ಚಿಂತನೆಗಳು ವೈಜ್ಞಾನಿಕ ವಾಗಿವೆ. ಸ್ವಚ್ಛ ಭಾರತ ಯೋಜನೆಯಿಂದ ಹಲವಾರು ರೋಗರುಜಿನಗಳು ದೂರವಿಡಬಹುದು. ಯೋಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದು ಒಂದೆಡೆಯಾದರೆ, ಪ್ರತಿಯೊಬ್ಬ ವ್ಯಕ್ತಿಯ ಸ್ವಾಸ್ಥ್ಯ ವನ್ನು ಉತ್ತಮವಾಗಿಡಲು ಯೋಗ ಸಹಕಾರಿ," ಎಂದು ಕೂಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಲ್ಲೇಖಿಸಿದರು.
ಲಸಿಕೆ ಮೂಲಕ ಕೋವಿಡ್ ನಿಯಂತ್ರಣ
"ಕೋವಿಡ್ ನಿಯಂತ್ರಿಸಲು ಸಹ ಪ್ರಧಾನಿಗಳು ಲಸಿಕಾ ಅಭಿಯಾನಕ್ಕೆ ಅತಿ ಹೆಚ್ಚು ಮಹತ್ವವನ್ನು ನೀಡಿ ಅಭಿಯಾನವನ್ನು ಪ್ರಾರಂಭಿಸಿದರು. ಮೊದಲ ಹಾಗೂ ಎರಡನೇ ಅಳೆಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು. ಭಾರತದಲ್ಲಿಯೇ ಲಸಿಕೆ ತಯಾರಿಸಿ, ವಿದೇಶಗಳಿಗೂ ರಫ್ತು ಮಾಡಲಾಗಿದೆ. ಇದರ ಶ್ರೇಯಸ್ಸು ಲಸಿಕೆ ತಯಾರಿಸಿದ ವಿಜ್ಞಾನಿಗಳಿಗೆ ಹಾಗೂ ದೇಶದ 130 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ," ಎಂದು ಶ್ಲಾಘಿಸಿದರು.
"ಪಂಚಮಸಾಲಿ ಮಠದ ಜಗದ್ಗುರು ಶ್ರೀ ವಚನಾನಂದಸ್ವಾಮಿಗಳು ಯೋಗದಲ್ಲಿ ದೊಡ್ದ ಸಾಧನೆ ಮಾಡಿದ್ದಾರೆ. ಜನರಿಗೆ ಯೋಗವನ್ನು ಕಲಿಸುತ್ತಾ ಶ್ವಾಸ ಗುರು ಎಂಬ ಬಿರಿದು ಸಹ ಪಡೆದ್ದಿದ್ದಾರೆ. ಆರೋಗ್ಯ ಬಹಳ ಮುಖ್ಯ. ಕರ್ನಾಟಕ ರಾಜ್ಯ ಆರೋಗ್ಯಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಇದು ಮುಂದುವರೆಯಲಿದೆ," ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿಗಳು ಮೊದಲಾದವರು ಉಪಸ್ಥಿತರಿದ್ದರು. (ಒನ್‌ಇಂಡಿಯಾ ಸುದ್ದಿ)
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications